2022ರಿಂದ ( January 1 2022 GST Change Tax) ಜನಸಾಮಾಮಾನ್ಯರ ಕಿಸೆಗೆ ಇನ್ನಷ್ಟು ಬಿಸಿ ತಾಗಲಿದೆ. ದಿನನಿತ್ಯದಲ್ಲಿ ಬಳಸುವ ಹಲವು ಸೇವೆಗಳು ಇನ್ನಷ್ಟು ದುಬಾರಿಯಾಗಲಿವೆ (Price Hike). ಇ-ಕಾಮರ್ಸ್ ಸಂಸ್ಥೆಗಳು (E-Commerce) ಒದಗಿಸುವ ಸೇವೆಗಳಲ್ಲಿ ಕಾರು (Car) ಅಥವಾ ಆಟೊರಿಕ್ಷಾ (Auto) ಸೇವೆಗೆ ಶೇ. 5ರಷ್ಟು ತೆರಿಗೆಯನ್ನು (Tax) ಸೇವೆ ಪಡೆದವರು ಪಾವತಿಸಬೇಕು. ಇದರಿಂದ ಓಲಾ, ಉಬರ್ನಂತಹ ಇ-ಟ್ಯಾಕ್ಸಿ (Ola Uber Price Hike) ಸೇವೆಗಳು ದುಬಾರಿ ಆಗಲಿವೆ. ಈ ಮೊದಲು ಇದಕ್ಕೆ ಜಿಎಸ್ಟಿಯಿಂದ ವಿನಾಯಿತಿ (GST Relief) ಇತ್ತು.
ಪಾದರಕ್ಷೆ, ಜವಳಿಗಳಿಗೆ ಸರಕು ಮತ್ತು ಸೇವಾ ತೆರಿಗೆ (GST) ಶೇ. 12ರ ಶ್ರೇಣಿ, ಮತ್ತು ಆ್ಯಪ್ ಮೂಲಕ ಬುಕ್ ಮಾಡುವ ಕಾರು, ಆಟೋಗಳಿಗೆ ಮತ್ತು ಆ್ಯಪ್ಗಳ ಮೂಲಕ ತರಿಸಿಕೊಳ್ಳುವ ಆಹಾರಕ್ಕೆ ಶೇ. 5 ಸೇವಾ ತೆರಿಗೆಯು ಜನವರಿ 1ರಿಂದ ಜಾರಿ ಆಗಲಿದೆ. ಇದರೊಟ್ಟಿಗೆ ಜಿಎಸ್ಟಿಯ ಕೆಲವು ಪ್ರಕ್ರಿಯೆಯ ನಿಯಮಗಳು ಇದೇ ದಿನಾಂಕದಿಂದ ಚಾಲ್ತಿಗೆ ಬರಲಿದೆ. ಒಂದು ಸಾವಿರ ರೂಪಾಯಿ ಒಳಗಿನ ಚಪ್ಪಲಿಗೆ ಹಾಗೂ ಅರಳೆ ವಸ್ತ್ರ ಬಿಟ್ಟು ಉಳಿದ ಜವಳಿ ಉತ್ಪನ್ನ ಮತ್ತು ಸಿದ್ಧ ಉಡುಪುಗಳಿಗೆ ಶೇ. 12 ಜಿಎಸ್‌ಟಿ ವಿಧಿಸಲಾಗುತ್ತದೆ.
ಜನವರಿ 2022 ರಿಂದ ಈ ವಸ್ತುಗಳು ಇನ್ನಷ್ಟು ದುಬಾರಿ
ಸ್ವಿಗ್ಗಿ, ಜೊಮ್ಯಾಟೋದಲ್ಲಿ ಆಹಾರ ಬುಕಿಂಗ್ ಶೇ. 5
ಆ್ಯಪ್ ಮೂಲಕ ಆಟೋ ಕಾರು ಬುಕಿಂಗ್ ಶೇ. 5
ಎಲ್ಲಾ ಮಾದರಿಯ ಪಾದರಕ್ಷೆಗಳು ಶೇ. 12
ರೆಡಿಮೇಡ್ ಸೇರಿ ಎಲ್ಲಾ ಬಟ್ಟೆಗಳು (ಕಾಟನ್ ಬಟ್ಟೆಬಿಟ್ಟು) ಶೇ. 12
ಆ್ಯಪ್ಗಳ ಆಧಾರಿತವಾಗಿ ಆರ್ಡರ್ ಮಾಡಿ ತರಿಸಿಕೊಳ್ಳುವ ಆಹಾರಕ್ಕೂ ಶೇ. 5 ಸೇವಾ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಸ್ವಿಗ್ಗಿ, ಜೊಮ್ಯಾಟೊಗಳಂಥ ಆ್ಯಪ್ಗಳು ಈ ಸೇವೆ ಪಡೆದ ಗ್ರಾಹಕರಿಗೆ ರಸೀದಿ ನೀಡಬೇಕಾಗುತ್ತದೆ. ಜಿಎಸ್‌ಟಿ ಮರುಪಾವತಿಗೆ ಆಧಾರ್ ದೃಢೀಕರಣ ಕಡ್ಡಾಯವಾಗಲಿದ್ದು, ಜಿಎಸ್ಟಿಆರ್-3ಬಿ ಮತ್ತು ಜಿಎಸ್ಟಿಆರ್-1 ಸಲ್ಲಿಕೆಯ ನಿಯಮದಲ್ಲಿ ಬದಲಾವಣೆಗಳು ಜನವರಿ 1ರಿಂದ ಜಾರಿಗೆ ಬರಲಿವೆ. ಪರಿಷ್ಕೃತ ನಿಯಮದಿಂದ ನಕಲಿ ಬಿಲ್ ಸೃಷ್ಟಿ ನಡೆಯುವ ವಂಚನೆಗೆ ಕಡಿವಾಣ ಬೀಳಲಿದೆ.
ಈಮುನ್ನ ಮತ್ತು ಪ್ರಸ್ತುತ ಆ್ಯಪ್ ಮೂಲಕ ತಿಂಡಿ-ತಿನಿಸುಗಳನ್ನು ಗ್ರಾಹಕರಿಂದ ಹೋಟೆಲ್‌ಗಳು ಜಿಎಸ್‌ಟಿ ಸಂಗ್ರಹಿಸುತ್ತಿದ್ದವು. ಆದರೆ ಇದರ ಬದಲು ಇನ್ನುಮುಂದೆ ಸ್ವಿಗ್ವಿ, ಝೊಮ್ಯಾಟೋಗಳು ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಹೀಗಾಗಿ ಜಿಎಸ್‌ಟಿ ನೆಪದಲ್ಲಿ ಈ ಕಂಪನಿಗಳು ಶುಲ್ಕದ ನೆಪದಲ್ಲಿ ಮತ್ತಷ್ಟು ವಸೂಲಿ ಮಾಡಬಹುದಾಗಿದೆ. ಇದು ಗ್ರಾಹಕರ ಮೇಲೆ ಇನ್ನಷ್ಟು ಬೆಲೆ ಹೆಚ್ಛಳದ ಬಿಸಿಯನ್ನು ಹಾಕಲಿದೆ.
ಇದನ್ನೂ ಓದಿ: Bitcoin Future : 1000 ಬಿಟ್ ಕಾಯಿನ್ ಖರೀದಿಸಿರುವ ಈ ದೇಶದ ಅಧ್ಯಕ್ಷರು ಡಾಲರ್‌ಗೆ ಭವಿಷ್ಯವಿಲ್ಲ ಎಂದಿದ್ದೇಕೆ?
( 2022 GST Tax Rate change tax rate from January 1 2022 Ola Uber Price Hike)