ಮಂಗಳವಾರ, ಜೂನ್ 17, 2025
Homedistrict NewsSangolli Rayanna statue: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಆರೋಪಿಗಳ ಗುರುತು ಪತ್ತೆ..!

Sangolli Rayanna statue: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಆರೋಪಿಗಳ ಗುರುತು ಪತ್ತೆ..!

- Advertisement -

ಬೆಳಗಾವಿ : Sangolli Rayanna statue:ರಾಜ್ಯದಲ್ಲಿ ಶಾಂತಿ ಕದಡಲು ಕಾರಣವಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉದ್ಧಟತನದ ಕಾರ್ಯ ಮಾಡಿದ್ದ ನಾಲ್ವರು ಆರೋಪಿಗಳ ಗುರುತನ್ನು ಪತ್ತೆ ಮಾಡಿರುವ ಪೊಲೀಸರು ಇಬ್ಬರನ್ನು ಈಗಾಗಲೇ ಬಂಧಿಸಿದ್ದಾರೆ. ಇನ್ನಿಬ್ಬರು ಪೊಲೀಸರಿಂದ ತಪ್ಪಿಸಿಕೊಂಡಿದ್ದು ಇವರ ಶೋಧ ಕಾರ್ಯ ಮುಂದುವರಿದಿದೆ.


ರಾಯಣ್ಣ ಮೂರ್ತಿ ಭಗ್ನ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಡಿಸಿಪಿ ವಿಕ್ರಮ್​ ಆಮಟೆ ಘಟನೆ ನಡೆದ 10 ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದ ಮೊದಲ ದಿನದಿಂದಲೇ ಎಂಇಎಸ್​ ಪುಂಡರು ಗಲಾಟೆ ಆರಂಭಿಸಿದ್ದರು. ಗಲಾಟೆ ಮಾಡಿದ್ದು ಮಾತ್ರವಲ್ಲದೇ ರಾತ್ರಿ ವೇಳೆಯಲ್ಲಿ ಕನಕದಾಸ ಕಾಲೋನಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿದ್ದರು. ಇದು ರಾಜ್ಯದಲ್ಲಿ ಕನ್ನಡಿಗರ ಕಣ್ಣು ಕೆಂಪಗಾಗುವಂತೆ ಮಾಡಿತ್ತು.


ನಾಲ್ವರು ಮುಸುಕುದಾರರ ಗುರುತು ಪತ್ತೆಯಾದ ಬಳಿಕ ಇಬ್ಬರನ್ನು ಶೀಘ್ರದಲ್ಲೇ ಬಂಧಿಸಲಾಗಿದೆ. ಇಬ್ಬರಲ್ಲಿ ಓರ್ವನನ್ನು ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ. ಮತ್ತೊಬ್ಬ ಆರೋಪಿ ಅಪ್ರಾಪ್ತನಾಗಿದ್ದು ಆತನ ವಿರುದ್ಧ ಕಾನೂನು ಕ್ರಮಗಳು ಜರುಗುತ್ತಿದೆ. ಇನ್ನುಳಿದ ಇಬ್ಬರು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಈ ಆರೋಪಿಗಳು ಯಾರು ಎಂಬ ಬಗ್ಗೆ ಪೊಲೀಸರು ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ.


ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್​ ಪುಂಡರು ಕಲ್ಲು ತೂರಾಟ ನಡೆಸಿದ್ದರು. ಹೀಗಾಗಿ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಕೈಯಲ್ಲಿದ್ದ ಖಡ್ಗವನ್ನು ತುಂಡರಿಸಿ ಸಂಗೊಳ್ಳಿಯ ರಾಯಣ್ಣನ ಮುಖವನ್ನೂ ಹಾನಿ ಮಾಡಿದ್ದೂ ಕೂಡ ಎಂಇಎಸ್​ ಪುಂಡರೇ ಎಂದು ಶಂಕಿಸಲಾಗಿದೆ. ಆದರೆ ಈ ಬಗ್ಗೆ ಪೊಲೀಸರೇ ಸ್ಪಷ್ಟನೆ ನೀಡಬೇಕಿದೆ. ಈಗಾಗಲೇ ಪೊಲೀಸರು 38 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಜಾಮೀನು ಸಿಗದ ಸೆಕ್ಷನ್​ಗಳ ಅಡಿಯಲ್ಲಿ ಎಂಇಎಸ್ ಪುಂಡರನ್ನು ಹೆಡೆಮುರಿ ಕಟ್ಟಲಾಗಿದೆ.

belguam sangolli rayanna statue wrecked case police find accused identity

ಇದನ್ನು ಓದಿ : Covid vaccines :ಕೋವಿಡ್​ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ: ಮತ್ತೆರಡು ಲಸಿಕೆಗಳಿಗೆ ಕೇಂದ್ರದಿಂದ ಅನುಮೋದನೆ

ಇದನ್ನೂ ಓದಿ : Night Curfew Effect : ಕರಾವಳಿಯಲ್ಲಿ ನೈಟ್​ ಕರ್ಫ್ಯೂ ಪಾಲನೆಗೆ ಕಟ್ಟುನಿಟ್ಟಿನ ಆದೇಶ: ಯಕ್ಷಗಾನ, ಕಂಬಳಕ್ಕೂ ಹೊಸ ನಿಯಮ

RELATED ARTICLES

Most Popular