ಬುಧವಾರ, ಏಪ್ರಿಲ್ 30, 2025
HomeCinemaChiranjeevi Sarja : ಕೊನೆಗೂ ತೆರೆಗೆ ಬರ್ತಿದೆ ಚಿರು ಕೊನೆಯ ಚಿತ್ರ, ರಾಜಾಮಾರ್ತಾಂಡ ರಿಲೀಸ್...

Chiranjeevi Sarja : ಕೊನೆಗೂ ತೆರೆಗೆ ಬರ್ತಿದೆ ಚಿರು ಕೊನೆಯ ಚಿತ್ರ, ರಾಜಾಮಾರ್ತಾಂಡ ರಿಲೀಸ್ ಗೆ ಸಿದ್ಧತೆ

- Advertisement -

ಯುವ ಸಾಮ್ರಾಟ ಚಿರಂಜೀವಿ ಸರ್ಜಾ ತನ್ನನ್ನು ಪ್ರೀತಿಸುವ ಕುಟುಂಬ, ಪತ್ನಿ, ಸ್ಯಾಂಡಲ್ ವುಡ್ ಹಾಗೂ ಅಭಿಮಾನಿಗಳನ್ನು ಅಗಲಿ ಈಗಾಗಲೇ ಒಂದೂವರೆ ವರ್ಷ ಸಂದಿದೆ. ಆದರೂ ಅಭಿಮಾನಿಗಳ ಅಭಿಮಾನ ಕೊಂಚವೂ ಕರಗಿಲ್ಲ. ಹೀಗಿರುವಾಗಲೇ ಚಿರು ಕೊನೆಯ ಚಿತ್ರವನ್ನು(Chiranjeevi Sarja last film RajaMartanda ) ಕಣ್ತುಂಬಿ ಕೊಳ್ಳಬೇಕೆಂದು ಕಾಯುತ್ತಿದ್ದ ಫ್ಯಾನ್ಸ್ ಗೆ ಸಿಹಿಸುದ್ದಿ ಸಿಕ್ಕಿದ್ದು, ಚಿರು ಕೊನೆಯ ಚಿತ್ರ ರಾಜಾಮಾರ್ತಾಂಡ ಸದ್ಯದಲ್ಲೇ ತೆರೆಗೆ ಬರಲಿದೆ.

2020 ಜೂನ್ 7 ರಂದು ಬಾಳಿಬದುಕಬೇಕಿದ್ದ ಯುವ ನಟ ಚಿರಂಜೀವಿ ಸರ್ಜಾ ತೀವ್ರಹೃದಯಾಘಾತಕ್ಕೆ ಬಲಿಯಾದ್ರು. ಚಿರು ಹೀಗೆ ಅಕಾಲಿಕವಾಗಿ ನಿಧನರಾದಾಗ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳಿದ್ದವು. ಮಾತ್ರವಲ್ಲ ಶಿವಾರ್ಜುನ ಹಾಗೂ ರಾಜಾಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದ್ದವು. ಚಿರು ಅಗಲಿಕೆ ಆಘಾತದಂತೆ ಅಪ್ಪಳಿಸಿದ್ದರಿಂದ ಚಿತ್ರತಂಡ ಅಕ್ಷರಷಃ ನಲುಗಿ ಹೋಗಿತ್ತು. ರಾಜಾಮಾರ್ತಂಡ ಚಿರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡ ಸಿನಿಮಾ. ಈ ಸಿನಿಮಾ ಮೇಲೆ ಚಿರು ಸಾಕಷ್ಟು ನೀರಿಕ್ಷೆ ಇಟ್ಟುಕೊಂಡಿದ್ದರು.

ಆದರೆ ನೀರಿಕ್ಷೆಗಳು ಫಲಕೊಡುವ ಮುನ್ನವೇ ಚಿರು ಅಗಲಿ ಹೋಗಿದ್ದಾರೆ. ಈಗ ಚಿರ ನಿಧನದ ಒಂದೂವರೆ ವರ್ಷಗಳ ಬಳಿಕ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಚುರುಕು ಗೊಳಿಸಿದ್ದು ಚಿತ್ರ ಬಿಡುಗಡೆಗೆ ಸಿದ್ದವಾಗಿ ಸೆನ್ಸಾರ್ ಸರ್ಟಿಫಿಕೇಟ್ ಗೆ ಕಾದಿದೆ. ಇನ್ನು ಚಿರು ನಿಧನದ ವೇಳೆ ಬಹುತೇಕ ಶೂಟಿಂಗ್ ಮುಗಿಸಿದ್ದ ಸಿನಿಮಾಗೆ ಡಬ್ಬಿಂಗ್ ಬಾಕಿ ಇತ್ತು. ಈ ವೇಳೆ ಮಾತನಾಡಿದ್ದ ನಟ ಧ್ರುವ್ ಸರ್ಜಾ, ಅಣ್ಣನ ಸಿನಿಮಾಗೆ ನಾನೇ ಡಬ್ಬಿಂಗ್ ಮಾಡಿಕೊಡುತ್ತೇನೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧೈರ್ಯ ತುಂಬಿದ್ದರು.

ಈಗ ಕೊಟ್ಟ ಮಾತಿನಂತೆ ಧ್ರುವ್ ಸರ್ಜಾ ಅಣ್ಣನ ಸಿನಿಮಾ ಗೆ ಡಬ್ಬಿಂಗ್ ‌ಮಾಡಿದ್ದಾರಂತೆ. ಕೇವಲ ಧ್ರುವ್ ಸರ್ಜಾ ಮಾತ್ರವಲ್ಲ ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಧ್ವನಿ ನೀಡಿದ್ದಾರಂತೆ. ಹೀಗಾಗಿ ಅಭಿಮಾನಿಗಳಿಗೆ ಒಂದೇ ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರ ಧ್ವನಿ‌ಕೇಳೋ ಅವಕಾಶ ಸಿಗಲಿದೆ.

ಸ್ಯಾಂಡಲ್ ವುಡ್ ನ ಫೇಮಸ್ ಸಿನಿ‌ಸಾಹಿತಿ ಜೆ.ಕೆ.ರಾಮ್ ನಾರಾಯಾಣ್ ಕತೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿಸುತ್ತಿದ್ದಾರೆ. ಈ ಸಿನಿಮಾವನ್ನು ಮೇಘನಾ ರಾಜ್ ಕುಟುಂಬಕ್ಕೆ ಆಪ್ತರಾದ ಪ್ರಣವ್ ಗೌಡ್ , ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ. ಇದೊಂದು ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು, ಈ ಸಿನಿಮಾಗೆ ನಿಖಿಲ್ ಕುಮಾರ ಸ್ವಾಮಿ ಜಾಗ್ವಾರ ಸಿನಿಮಾದಲ್ಲಿ ನಟಿಸಿದ್ದ ದೀಪ್ತಿ ಸಾತಿ ನಾಯಕಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ : ಜೊತೆ ಜೊತೆಯಲಿ ಮೇಲೆ ಮುನಿಸಿಕೊಂಡ ಪ್ರೇಕ್ಷಕ: ಆರ್ಯವರ್ಧನ್ ಮೇಲೆಯೇ ವೀಕ್ಷಕರ ಆಕ್ರೋಶ

ಇದನ್ನೂ ಓದಿ :  ಪತಿ ಜೊತೆ ನಟಿ ಶ್ರದ್ಧಾ ಆರ್ಯಾ ಟ್ರಿಪ್ : ಅಭಿಮಾನಿಗಳಿಗೆ ಹಾಟ್ ಪೋಟೋಸ್ ಗಿಫ್ಟ್

( Preparing for the release of Chiranjeevi Sarja last film RajaMartanda)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular