ಬೆಂಗಳೂರು : ರಾಜ್ಯದಲ್ಲಿ ಓಮೈಕ್ರಾನ್ ಹಾಗೂ ಕೊರೋನಾ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ರಾಜ್ಯದ ಆರೋಗ್ಯ ಸಚಿವ ಡಾ.ಸುಧಾಕರ್ ಆತಂಕಕಾರಿ ಹೇಳಿಕೆಯೊಂದನ್ನು ನೀಡಿದ್ದು, ರಾಜ್ಯಕ್ಕೆ ಕೊರೋನಾ ಮೂರನೇ ಅಲೆ ( corona 3rd wave ) ಕಾಲಿಟ್ಟಿದೆ. ಹೀಗಾಗಿ ಸತತವಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ನಾವು ಮೂರನೆ ಅಲೆಯ ಪ್ರಾರಂಭದಲ್ಲಿ ಇದ್ದೇವೆ. ಹೀಗಾಗಿ ಇಂದು ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಹಾಗೂ ಶಾಲಾ ಕಾಲೇಜುಗಳ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಆರೋಗ್ಯ ಸಚಿವ ಕೆ ಸುಧಾಕರ್ , ದಿನೇ ದಿನೇ ಒಮಿಕ್ರಾನ್ ಹೆಚ್ಚಾಗ್ತಿದೆ. ನಿನ್ನೆ ಒಂದೇ ದಿನ ಕೊರೋನಾ ಪಾಸಿಟಿವಿಟಿ ದರ 1.60 ಪರ್ಸೆಂಟ್ ಜಾಸ್ತಿ ಆಗಿದೆ. ಒಂದೇ ದಿನದಲ್ಲಿ 1290 ಕೇಸ್ ಪತ್ತೆ ಆಗಿದೆ. ಅದರಲ್ಲಿ 90 ಪರ್ಸೆಂಟ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. ಹೀಗಾಗಿ ಬೆಂಗಳೂರಲ್ಲಿ ಇನ್ನಷ್ಟು ನಿಗಾ ವಹಿಸಿದ್ದೇವೆ ಎಂದು ವಿವರಣೆ ನೀಡಿದ್ದಾರೆ. ಇಂದು ತಜ್ಞರ ಜೊತೆ ಸಿಎಂ ಕೂಡ ಮಾತನಾಡಲಿದ್ದು ಏನೆಲ್ಲಾ ಕ್ರಮ ಕೈಗೊಳ್ಳಬೇಕು. ಯಾವ ರೀತಿ ನಿಯಂತ್ರಣ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಒಮಿಕ್ರಾನ್ ಬಹಳ ವೇಗವಾಗಿ ಹರಡುತ್ತಿದೆ. ಹೀಗಾಗಿ ತುರ್ತುಕ್ರಮದ ಅಗತ್ಯವಿದೆ.
ಭಾರತದಲ್ಲಿ ಹೊಸ ವರ್ಷದಲ್ಲಿ ಪ್ರಕರಣ ಹೆಚ್ಚಿದ್ದು ನೆರೆಯ ಮಹಾರಾಷ್ಟ್ರ ದಲ್ಲಿ ಈಗಾಗಲೇ ಪ್ರಕರಣಗಳ ಸಂಖ್ಯೆ ಮೀತಿಮೀರಿದೆ.ದೆಹಲಿಯಲ್ಲಿ ಕೂಡ ಕೇಸ್ ಜಾಸ್ತಿ ಆಗಿದೆ. ಈ ನಿಟ್ಟಿನಲ್ಲಿ ಎಚ್ಚರ ಕ್ರಮ ಅವಶ್ಯಕತೆ ಇದೆ.ಹೀಗಾಗಿ ಇವತ್ತೇ ಏನೆಲ್ಲಾ ಬಿಗಿ ಕ್ರಮ ಮಾಡಬೇಕು ಎಂದು ಚರ್ಚಿಸಿ ತೀರ್ಮಾನ ಮಾಡ್ತೇವೆ ಎಂದಿದ್ದಾರೆ. ಇನ್ನು ಕೊರೋನಾದಂತಹ ಸಂದಿಗ್ಧ ಸ್ಥಿತಿಯಲ್ಲೂ ಕಾಂಗ್ರೆಸ್ ಪಾದಯಾತ್ರೆಗೆಮುಂದಾಗಿದೆ.ಪಾದಯಾತ್ರೆ ಗೆ ಬೇರೆ ಬೇರೆ ಜಿಲ್ಲೆ ಗಳಿಂದ ಜನರು ಬರ್ತಾರೆ. ಅಲ್ಲಿ ಜನರು ಒಟ್ಟಾಗಿ ಸೇರಿದಾಗ ಕೊವೀಡ್ ಸ್ಪೋಟ ಆದರೆ, ಅದರ ಹೊಣೆಯನ್ನು ಕಾಂಗ್ರೆಸ್ ನಾಯಕರೇ ಹೊರಬೇಕಾಗುತ್ತದೆ ಎಂದು ಸುಧಾಕರ್ ಎಚ್ಚರಿಸಿದ್ದಾರೆ.
ಆದರೆ ಸರ್ಕಾರ ಈ ರ್ಯಾಲಿ ಬಗ್ಗೆ ತೀರ್ಮಾನ ಮಾಡಲಿದೆ ಎಂದಿರುವ ಡಾ.ಸುಧಾಕರ್,ಕೊವೀಡ್ ಹೆಚ್ಚಾಗಿರುವ ಇಂತಹ ಸಂದರ್ಭದಲ್ಲಿ ರ್ಯಾಲಿ, ಸಭೆ, ಅಗತ್ಯ ಇದೆಯಾ ಹೇಗೆ ಎಂಬುದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಅನೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳು ರಜೆ ನೀಡಲಾಗಿದೆ.ನಮ್ಮಲ್ಲಿ ಈ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡ್ತೀವಿ. ನಿನ್ನೆಯಿಂದ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗ್ತಿದೆ.ನಿನ್ನೆ ಒಂದೇ ದಿನ 4,22,152 ಮಕ್ಕಳಿಗೆ ಲಸಿಕೆ ಕೊಡಲಾಗಿದೆ.66% ಮೊದಲ ದಿನ ಲಸಿಕೆ ಸಾಧನೆ ಮಾಡಿದ್ದೇವೆ.ದೇಶದಲ್ಲಿ ನಾವು 4 ನೇ ಸ್ಥಾನದಲ್ಲಿ ಇದ್ದೇವೆ.10-15 ದಿನಗಳಲ್ಲಿ ಎಲ್ಲಾ ಮಕ್ಕಳಿಗೆ ಲಸಿಕೆ ಪೂರ್ಣ ಮಾಡ್ತೀವಿ.
ಕೇಂದ್ರ ಸದ್ಯ ಒಂದು ಡೋಸ್ ಮಾತ್ರ ಕೊಡಲು ಹೇಳಿದೆ.ಎರಡನೇ ಡೋಸ್ ಕೊಡಲು ಹೇಳಿದ ನಂತ್ರ ಎರಡನೇ ಡೋಸ್ ಪ್ರಾರಂಭ ಮಾಡ್ತೀವಿ ಎಂದು ವಿವರಣೆ ನೀಡಿದ್ದಾರೆ. ನಿನ್ನೆ ಒಂದೇ ದಿನ 1290 ಕೇಸ್ ಬಂದಿದೆ. ಇದ್ರಲ್ಲಿ 90% ಬೆಂಗಳೂರಿನಿಂದ ದಾಖಲಾಗಿದೆ.ಬೆಂಗಳೂರಿನಲ್ಲಿ ಕೇಸ್ ಹೆಚ್ಚಳ ಹಿನ್ನಲೆ ವಿಶೇಷ ಕ್ರಮ ತೆಗೆದುಕೊಳ್ತೀವಿ. ಏರ್‌ಪೋರ್ಟ್ ಸೇರಿದಂತೆ ಎಲ್ಲಾ ಕಡೆ ಹೆಚ್ಚು ನಿಗಾ ಇಡ್ತೀವಿ.ಬೆಂಗಳೂರಿನಲ್ಲಿ ಮೈಕ್ರೋ ಜೋನ್ ಹೆಚ್ಚಳ ಮಾಡ್ತೀವಿ.ಇಂದಿನ ಸಿಎಂ ಸಭೆಯಲ್ಲಿ ಚರ್ಚೆ ಮಾಡಿ ಕ್ರಮದ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮೆಡಿಕಲ್ ಕಾಲೇಜಿನ 87 ವೈದ್ಯರಿಗೆ ಕೊರೊನಾ ಪಾಸಿಟಿವ್
ಇದನ್ನೂ ಓದಿ : ರಾಜ್ಯದಲ್ಲಿ ಜಾರಿಯಾಗೋದು ಲಾಕ್ ಡೌನ್ ಅಥವಾ ಸೆಮಿಲಾಕ್ ಡೌನ್ : ಸಂಜೆ ಸಿಗಲಿದೆ ಉತ್ತರ
( corona 3rd wave of entry for the Karnataka state, said health minister Dr.Sudhakar)