unnatural relationship : ಮಧ್ಯಪ್ರದೇಶದ ಇಂದೋರ್ನಲ್ಲಿರುವ ಜಿಲ್ಲಾ ನ್ಯಾಯಾಲಯವು ವಿಚಿತ್ರ ಕಾರಣದಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ವೃದ್ಧನಿಗೆ ಜಾಮೀನು ತಿರಸ್ಕರಿಸಿದೆ. 67 ವರ್ಷದ ಚಿನ್ನ ವ್ಯಾಪಾರಿಯು ತನಗಿಂತ ಬರೋಬ್ಬರಿ 27 ವರ್ಷ ಕಿರಿಯ ಪತ್ನಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಎನ್ನಲಾಗಿದೆ. ಮದುವೆಯಾದ ಮೊದಲ ರಾತ್ರಿಯೇ ಈತ ತನ್ನ ಪತ್ನಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಸಂತ್ರಸ್ತೆ ಪತ್ನಿ ಹೇಳಿದ್ದಾರೆ. ಆರೋಪಿಯನ್ನು ಗಿರೀಶ್ ಕುಮಾರ್ ಸೋನಿ ಎಂದು ಗುರುತಿಸಲಾಗಿದ್ದು ಈತ ಗುಜರಾತ್ ನಿವಾಸಿಯಾಗಿದ್ದಾನೆ.
ಸಂತ್ರಸ್ತೆ ಪತ್ನಿ ನೀಡಿರುವ ಮಾಹಿತಿಯ ಪ್ರಕಾರ ಆಕೆಯ ಪತಿಗೆ ಹಲ್ಲುಗಳಿಲ್ಲ. ಈತ ನಕಲಿ ಹಲ್ಲುಗಳನ್ನು ಹಾಕಿಕೊಳ್ಳುತ್ತಾನೆ. ಈತ ಲೈಂಗಿಕ ಕ್ರಿಯೆಯ ವೇಳೆ ಆ ಹಲ್ಲಿನಿಂದ ಕಚ್ಚಿ ಆಕೆಯ ಕೈ ಕಾಲುಗಳಿಗೆ ಗಾಯ ಮಾಡಿದ್ದ. ಈತ ಒಮ್ಮೆ ಸಂತ್ರಸ್ತೆಯನ್ನು ಉದಯಪುರಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲು ಕೂಡ ಆಕೆಯ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದ ಎನ್ನಲಾಗಿದೆ.
ಪತಿಯ ಈ ಕಾಟದಿಂದ ಬೇಸತ್ತಿದ್ದ ಪತ್ನಿಯು ಇದನ್ನು ವಿರೋಧಿಸಲು ಆರಂಭಿಸಿದಾಗ ಆತ ನಿನ್ನ ಕುಟುಂಬಸ್ಥರನ್ನು ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ನನಗೆ ಕೋಟಿಗಟ್ಟಲೇ ಮೌಲ್ಯದ ಆಸ್ತಿಯಿದೆ. ಗುಜರಾತ್ನಲ್ಲೇ ಕುಳಿತು ಇಂದೋರ್ನಲ್ಲಿರುವ ನಿನ್ನ ಕುಟುಂಬಸ್ಥರನ್ನು ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಆದರೆ ವೃದ್ಧನ ಕಾಟವನ್ನು ತಡೆಯಲಾರದ ಪತ್ನಿಯು ಧೈರ್ಯ ಮಾಡಿ ಇಂದೋರ್ ಮಹಿಳಾ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾಳೆ. ಅಷ್ಟೇ ಅಲ್ಲದೇ ಪತಿಯು ಕಚ್ಚಿದ ವೇಳೆಯಲ್ಲಿ ತನ್ನ ಮೈ ಮೇಲೆ ಆದ ಗಾಯಗಳನ್ನು ಪೊಲೀಸರಿಗೆ ತೋರಿಸಿದ್ದಾಳೆ . ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆಯಲ್ಲಿ ಅದು ಗಾಯದ ಕಲೆಗಳು ಎಂಬುದು ಧೃಡಪಟ್ಟಿದೆ.
ಸಾಕ್ಷ್ಯಾಧಾರಗಳನ್ನು ಗಮನಿಸಿದ ಕೋರ್ಟ್ ವೃದ್ಧ ಗಂಭೀರ ಅಪರಾಧವನ್ನು ಎಸಗಿದ್ದಾನೆ ಎಂದು ಹೇಳುವ ಮೂಲಕ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿದೆ. ಕೂಡಲೇ ಆರೋಪಿಯನ್ನು ಬಂಧಿಸಬೇಕು ಹಾಗೂ ಆತನ 32 ನಕಲಿ ಹಲ್ಲುಗಳನ್ನು ಜಪ್ತಿ ಮಾಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ.ಆರೋಪಿಯ ಪತ್ನಿಯು ಕೋವಿಡ್ ಅವಧಿಯಲ್ಲಿ ನಿಧನರಾಗಿದ್ದರು. ಇದಾದ ಬಳಿಕ ಸಂಬಂಧಿಕರ ಮೂಲಕ ಸಂಪರ್ಕ ಸಾಧಿಸಿ ವೃದ್ಧ ಎರಡನೇ ಮದುವೆಯಾಗಿದ್ದನು. ಕಳೆದ ವರ್ಷ ಅಕ್ಟೋಬರ್ನಲ್ಲಿ ವಿವಾಹವಾಗಿದ್ದ ಈತ ಪತ್ನಿಯೊಂದಿಗೆ ಅಂದಿನಿಂದಲೂ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಲೇ ಬಂದಿದ್ದಾನೆ.
Indore: 67 year old man had unnatural relationship with wife 27 years younger, used to bite with false teeth; Court dismissed the petition
ಇದನ್ನು ಓದಿ : gangrape : ಆತ್ಮೀಯ ಸ್ನೇಹಿತರಿಂದಲೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ
ಇದನ್ನೂ ಓದಿ : Worker vandalises company: ಸಂಬಳ ಕೊಡದ ಕಂಪನಿ ಉಪಕರಣ ಧ್ವಂಸ ಮಾಡಿದ ನೌಕರ