ಬುಧವಾರ, ಏಪ್ರಿಲ್ 30, 2025
HomeCinemaMalaika Arora-Arjun Kapoor : ಮಲೈಕಾ-ಅರ್ಜುನ್ ಕಪೂರ್ ಬ್ರೇಕಪ್​ ವದಂತಿಗೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ನೋಡಿ

Malaika Arora-Arjun Kapoor : ಮಲೈಕಾ-ಅರ್ಜುನ್ ಕಪೂರ್ ಬ್ರೇಕಪ್​ ವದಂತಿಗೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ನೋಡಿ

- Advertisement -

Malaika Arora-Arjun Kapoor : ಬಾಲಿವುಡ್ ಲವ್​ ಬರ್ಡ್ಸ್​​ ಮಲೈಕಾ ಅರೋರಾ ಹಾಗೂ ಅರ್ಜುನ್​ ಕಪೂರ್ (Malaika Arora-Arjun Kapoor)​ ಬ್ರೇಕಪ್​ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಮಿಂಚಿನ ವೇಗದಲ್ಲಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ಮಾಲ್ಡೀವ್ಸ್​ನಲ್ಲಿ ಸುತ್ತಾಡಿ ಮೋಜು ಮಸ್ತಿ ಮಾಡಿಕೊಂಡಿದ್ದ ಈ ಜೋಡಿ ಬ್ರೇಕಪ್​ ಮಾಡಿಕೊಂಡಿದೆ ಎಂಬ ವಿಚಾರ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.


ಜನವರಿ ಹೊಸ ವರ್ಷಾಚರಣೆಯ ದಿನದಂದೂ ನಟಿ ಮಲೈಕಾ ಅರ್ಜುನ್​ ಕಪೂರ್​ ಜೊತೆಗಿನ ಫೋಟೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ಈ ಜೋಡಿ ತಮ್ಮ ಸಂಬಂಧವನ್ನು ಮುರಿದುಕೊಂಡಿದೆ ಎನ್ನಲಾಗಿದೆ. ಅಲ್ಲದೇ ಬ್ರೇಕಪ್​ ಬಳಿಕ ನಟಿ ಮಲೈಕಾ ಅರೋರಾ ಸಾಕಷ್ಟು ನೊಂದಿದ್ದಾರೆ ಎನ್ನಲಾಗಿದ್ದು ಕಳೆದ ಆರು ದಿನಗಳಿಂದ ಅವರು ಮನೆಯಿಂದ ಹೊರಗೆ ಕಾಲೇ ಇಟ್ಟಿಲ್ಲವಂತೆ.

48 ವರ್ಷದ ಮಲೈಕಾ ಅರೋರಾ ಹಾಗೂ 36 ವರ್ಷದ ಅರ್ಜುನ್​ ಕಪೂರ್​​ ತಮ್ಮ ವಯಸ್ಸಿನ ಅಂತರದ ಕಾರಣದಿಂದ ಪದೇ ಪದೇ ಟ್ರೋಲ್​ ಆಗುತ್ತಿದ್ದರು. ಈ ಬಾರಿ ಈ ಜೋಡಿಯ ಬ್ರೇಕಪ್​ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ನೆಟ್ಟಿಗರು ಸೋಶಿಯಲ್ ಮೀಡಿಯಾ ತುಂಬೆಲ್ಲ ಟ್ರೋಲ್​ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.


ಬಾಲಿವುಡ್ ನಟಿ ಮಲೈಕಾ ಅರೋರಾ ನಟ ಅರ್ಬಾಜ್​ ಖಾನ್​ ಜೊತೆಯಲ್ಲಿ 1998ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಈ ದಂಪತಿಗೆ ಅರ್ಹಾನ್​ ಎಂಬ ಹೆಸರಿನ ಪುತ್ರ ಕೂಡ ಇದ್ದಾನೆ. ಈ ದಾಂಪತ್ಯದಲ್ಲಿ ವಿರಸ ಮೂಡಿದ ಪರಿಣಾಮ ಮಲೈಕಾ ಅರೋರಾ ಹಾಗೂ ಅರ್ಬಾಜ್​ ಖಾನ್​ 2016ರಲ್ಲಿ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದರು. ಇದಾದ ಬಳಿಕ ನಾಲ್ಕು ವರ್ಷಗಳ ಕಾಲ ಮಲೈಕಾ ಅರೋರಾ ನಟ ಅರ್ಜುನ್​ ಕಪೂರ್ ಜೊತೆಯಲ್ಲಿ ಡೇಟಿಂಗ್​ ಮಾಡಿದ್ದರು. ಇವರಿಬ್ಬರ ಪ್ರೇಮ್​ ಕಹಾನಿ ಬಗ್ಗೆ ಸಾಕಷ್ಟು ಗುಮಾನಿಗಳು ಕೇಳಿ ಬರುತ್ತಿದ್ದ ವೇಳೆಯಲ್ಲಿಯೇ ಈ ಜೋಡಿ 2019ರಲ್ಲಿ ತಮ್ಮ ಪ್ರೇಮ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿತ್ತು.

ಇದನ್ನು ಓದಿ : Bangalore Lockdown : ಬೆಂಗಳೂರಿನಲ್ಲಿ ಕರೋನಾ ರೌದ್ರ ನರ್ತನ : ಸೋಂಕಿನ ಪ್ರಮಾಣ ನಿಯಂತ್ರಿಸಲು ಅನಿವಾರ್ಯವಾಗುತ್ತಾ ಲಾಕ್ ಡೌನ್ ?

Fans call Malaika Arora-Arjun Kapoor breakup SHOCKING, share reactions on Twitter

RELATED ARTICLES

Most Popular