Raima Islam Shimu :ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಶವವಾಗಿ ಪತ್ತೆಯಾಗಿದ್ದಾರೆ..! ನಟಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹವು ಢಾಕಾದ ಕೆರಾನಿಗಂಜ್ನಲ್ಲಿರುವ ಸೇತುವೆಯ ಸಮೀಪ ಗೋಣಿ ಚೀಲದಲ್ಲಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ಕಡಮ್ತೋಳಿಯ ಅಲಿಪುರ ಸೇತುವೆ ಬಳಿಯಲ್ಲಿ ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹದ ಮೇಲೆ ಸಾಕಷ್ಟು ಗಾಯದ ಗುರುತುಗಳು ಪತ್ತೆಯಾಗಿದೆ. ರೈಮಾ ಇಸ್ಲಾಂ ಶಿಮು ಅವರನ್ನು ಭಾನುವಾರದಂದು ಕೊಲೆ ಮಾಡಿರುವ ಆರೋಪಿಗಳು ಬಳಿಕ ಆಕೆಯ ಶವವನ್ನು ಈ ರೀತಿ ಸೇತುವೆ ಬಳಿ ಎಸೆದಿರಬಹುದು ಎಂದು ಶಂಕಿಸಲಾಗಿದೆ.
ರೈಮಾ ಇಸ್ಲಾಂ ಶಿಮು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಮಿಟ್ಫೋರ್ಡ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಹಾಗೂ ಸ್ಥಳೀಯ ಠಾಣೆಯಲ್ಲಿ ಇದೊಂದು ಅಸಹಜ ಸಾವು ಎಂಬ ಪ್ರಕರಣ ದಾಖಲಾಗಿದೆ. ನಟಿ ಶಿಮು ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಪತಿ ಶಖಾವತ್ ಅಲಿ ನೋಬಲ್ ಹಾಗೂ ಅವರ ಚಾಲಕನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಶಖಾವತ್ ಅಲಿ ನೋಬಲ್ ತಮ್ಮ ಪತ್ನಿ ರಿಮಾ ಇಸ್ಲಾಂ ಶಿಮು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಭಾನುವಾರದಂದು ಕಬಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು ಅವರು ಢಾಕಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ಟ್ವೀಟ್ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 17 ರಂದು ಕೆರಾನಿಗಂಜ್ನ ಹಜರತ್ಪುರ ಸೇತುವೆ ಬಳಿ ಗೋಣಿಚೀಲದಲ್ಲಿ ಆಕೆಯ ಶವ ಪತ್ತೆಯಾಗಿದೆ.
ಇದನ್ನು ಓದಿ : supporters fighting : ಬಿ.ಕೆ.ಹರಿಪ್ರಸಾದ್ vs ರಮಾನಾಥ ರೈ : ಬೆಂಬಲಿಗರ ಗಲಾಟೆಗೆ ಹೈಕಮಾಂಡ್ ಗರಂ
Shocking !Actor Raima Islam Shimu Missing Body Found in Sack, Husband Detained