ಮಂಗಳವಾರ, ಏಪ್ರಿಲ್ 29, 2025
HomebusinessCentral Budget Hopes Expectations: ಹೊಸ ಆರ್ಥಿಕ ವರ್ಷಕ್ಕೆ ಹೊಸ ಆಯ-ವ್ಯಯ: ಗರಿಗೆದರುತ್ತಿರುವ ಕುತೂಹಲ -...

Central Budget Hopes Expectations: ಹೊಸ ಆರ್ಥಿಕ ವರ್ಷಕ್ಕೆ ಹೊಸ ಆಯ-ವ್ಯಯ: ಗರಿಗೆದರುತ್ತಿರುವ ಕುತೂಹಲ – ನಿರೀಕ್ಷೆಗಳೇನು?

- Advertisement -

2022ರ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಮುಂಬರಲಿರುವ ಫೆಬ್ರವರಿ 1ರಂದು ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ (Finance Minister Nirmala Sitharaman) 2022-23ರ ಆರ್ಥಿಕ ವರ್ಷದ ಬಜೆಟ್‌ (Central Budget 2022-2023) ಮಂಡನೆಯಾಗಲಿದೆ. ದುರದೃಷ್ಟವಶಾತ್‌ ಏರುಗತಿಯಲ್ಲಿರುವ ಕೊರೋನಾದ ಕಪಿಮುಷ್ಟಿಯಲ್ಲಿ ಸಿಲುಕಿ ಹೊರಬರಲಾರದೆ ನಲುಗುತ್ತಿರುವ ಸಾಮಾನ್ಯ ಜನರು, ಉದ್ಯಮಿಗಳು, ವ್ಯಾಪಾರಿಗಳು, ಸೇವಾವಲಯ ಸೇರಿದಂತೆ ಎಲ್ಲ ರಂಗಗಳ ಜನರು ಮುಂಬರಲಿರುವ ಬಜೆಟ್‌ನ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನಿಟ್ಟುಕೊಂಡು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ತೆರಿಗೆ ಪಾವತಿದಾರರು ತೆರಿಗೆಗಳಲ್ಲಿ ಕಡಿತ (Tax) ಹಾಗೂ ವಿನಾಯತಿಗಳಿಗಾಗಿ ಎದುರು ನೋಡುತ್ತಿದ್ದಾರೆ. ಜನಸಾಮಾನ್ಯರ ಕೆಲ ನಿರೀಕ್ಷೆಗಳು (Central Budget Hopes Expectations) ಹೀಗಿವೆ:

ಆದಾಯ ತೆರಿಗೆ ದರಗಳಲ್ಲಿ ವಿನಾಯಿತಿ:

ಸದ್ಯ ವ್ಯಕ್ತಿಗತ ತೆರಿಗೆಗಳ ಗರಿಷ್ಠ ಸ್ಲ್ಯಾಬ್‌ ದರ ಶೇ 30 ಆಗಿದೆ. ಇದರೊಂದಿಗೆ, ಸರ್‌ಚಾರ್ಜ್‌ ಹಾಗೂ ಶಿಕ್ಷಣದ ಮೇಲಿನ ಉಪಕರ (ಸೆಸ್‌) ಗಳಿಂದಾಗಿ ಒಟ್ಟಾರೆ ವ್ಯಕ್ತಿಗತ ತೆರಿಗೆ ದರವು ಶೇ 42.744 ಆಗಲಿದೆ. ದೇಶೀಯ ಕಂಪನಿಗಳ ಮೇಲೆ ವಿಧಿಸಲಾಗುವ ತೆರಿಗೆ ದರವು ಶೇ 25 ರಷ್ಟು ಮಾತ್ರ ಇರಲಿದ್ದು ಇದರ ಮೇಲೆ ಸರ್‌ಚಾರ್ಜ್‌ ಹಾಗೂ ಶಿಕ್ಷಣದ ಮೇಲಿನ ಉಪಕರ (ಸೆಸ್‌) ಗಳನ್ನು ವಿಧಿಸಲಾಗುತ್ತದೆ.

ಇದರಿಂದಾಗಿ, ವಾರ್ಷಿಕ 10 ಲಕ್ಷ ರೂಪಾಯಿಗಳಿಗೂ ಹೆಚ್ಚಿನ (ಹಳೆಯ ತೆರಿಗೆ ನಿಯಮಗಳಂತೆ) ಹಾಗೂ 15 ಲಕ್ಷ ರೂಪಾಯಿಗಳ ಒಳಗಿನ ಆದಾಯ ಇರುವ (ಸದ್ಯ ಚಾಲ್ತಿಯಲ್ಲಿರುವ ತೆರಿಗೆ ನಿಯಮಗಳಂತೆ) ತೆರಿಗೆದಾರರು ತೆರಿಗೆ ದರವು ಶೇ 30 ರಿಂದ ಶೇ 25ಕ್ಕೆ ಇಳಿಕೆಯಾಗುವುದನ್ನು ಎದುರು ನೋಡುತ್ತಿದ್ದಾರೆ. 

ವಿವಿಧ ಕಡಿತಗಳು ಮತ್ತು ವಿನಾಯಿತಿಯ ಮಿತಿಗಳಲ್ಲಿ ಏರಿಕೆ

ಮಕ್ಕಳ ಶಿಕ್ಷಣ ಶುಲ್ಕಗಳು, ವೈದ್ಯಕೀಯ ವೆಚ್ಚಗಳು, ಮನೆ ಬಾಡಿಗೆ, ಹಾಗೂ ಇನ್ನಿತರ ಅಗತ್ಯ ವೆಚ್ಚಗಳಲ್ಲಿ ತೀವ್ರವಾದ ಏರಿಕೆಯಾಗುತ್ತಿದ್ದು ಇದರಿಂದ ಜೀವನ ನಿರ್ವಹಣಾ ವೆಚ್ಚಗಳಲ್ಲಿ (ಕಾಸ್ಟ್‌ ಆಫ್‌ ಲಿವಿಂಗ್‌) ತೀವ್ರ ಹಾಗೂ ತ್ವರಿತಗತಿಯ ಏರಿಕೆ ಉಂಟಾಗಿದೆ. ತಿದ್ದುಪಡಿಗಳು ಈ ಕೆಳಗಿನಂತಿದ್ದರೆ ಮಧ್ಯಮ ಆದಾಯದ ಕುಟುಂಬಗಳು ವೆಚ್ಚ ಮಾಡಬಹುದಾದ ಆದಾಯದಲ್ಲಿ ಏರಿಕೆಯಾಗಲಿದ್ದು ಅವರು ಹೂಡಿಕೆ ಮಾಡಲೂ ಸಹಾಯವಾಗಲಿದೆ. 

-ಆದಾಯ ತೆರಿಗೆ ಕಾನೂನಿನ ಸೆಕ್ಷನ್‌ 80ಸಿ ಅನ್ವಯ ತೆರಿಗೆ ಕಡಿತದ ಮಿತಿಯನ್ನು ಈಗಿರುವ 1,50,000 ರೂಪಾಯಿಗಳಿಂದ 2,50,000 ರೂಪಾಯಿಗಳಿಗೆ ಏರಿಸುವುದು.

-ಗೃಹಸಾಲ ಪಡೆದವರು ತಾವೇ ಸ್ವತ: ವಾಸಿಸುತ್ತಿರುವ ಮನೆಗಳ ಗೃಹಸಾಲದ ಮೇಲೆ ಪಾವತಿಸಬೇಕಾಗಿರುವ ಬಡ್ಡಿಯ ಕಡಿತದ ಮಿತಿಯನ್ನು 2 ಲಕ್ಷ ರೂಪಾಯಿಗಳಿಂದ 2.5 ಲಕ್ಷ ರೂಪಾಯಿಗಳಿಗೆ ಏರಿಸುವುದು.

-ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಆಸ್ತಿಗಳನ್ನು ಬಾಡಿಗೆಗೆ ನೀಡಿರುವ ಆಸ್ತಿ ಮಾಲಿಕರಿಗೆ ಬೆಂಬಲನೀಡಲು ಈಗಿರುವ ಸ್ಟಾಂಡರ್ಡ್‌ ಡಿಡಕ್ಷನ್‌ ಅನ್ನು ಶೇ 30ರಿಂದ ಶೇ 40ಕ್ಕೆ ಏರಿಸಬೇಕೆಂದು ಶಿಫಾರಸು ಮಾಡಲಾಗಿದೆ.

-ವೈದ್ಯಕೀಯ ಯೋಜನೆಗಳಲ್ಲಿ ಹೆಚ್ಚಿನ ಜನ ಭಾಗವಹಿಸುವಂತೆ ಮಾಡಲು ಸೆಕ್ಷನ್‌ 80ಡಿ ಅನ್ವಯ ಕಡಿತದ ಮಿತಿಯನ್ನು ಸ್ವತ: ಫಲಾನುಭವಿಗೆ (ಹಿರಿಯ ನಾಗರಿಕರಲ್ಲದಿದ್ದರೆ) ಹಾಗೂ ಕುಟುಂಬಕ್ಕೆ  25,000 ರೂಪಾಯಿಗಳಿಂದ 50,000 ರೂಪಾಯಿಗಳಿಗೆ ಹಾಗೂ ಫಲಾನುಭವಿಗಳು ಹಿರಿಯ ನಾಗಿರಕರಾಗಿದ್ದರೆ 50,000 ರೂಪಾಯಿಗಳಿಂದ 75,000 ರೂಪಾಯಿಗಳಿಗೆ ಏರಿಸುವುದನ್ನು ಪರಿಗಣಿಸಬಹುದಾಗಿದೆ.

-ಸೆಕ್ಷನ್ 80TTA ಅನ್ವಯ ಉಳಿತಾಯ ಖಾತೆಯ ಬಡ್ಡಿ ಪರಿಹಾರವನ್ನು ಫಿಕ್ಸೆಡ್‌ ಡೆಪಾಸಿಟ್‌ ಬಡ್ಡಿ, ಅಂಚೆ ಕಚೇರಿ ಯೋಜನೆಗಳು, ಹಾಗೂ ಅದೇ ರೀತಿಯ ಇತರ ಸಾಮಾನ್ಯ ಗುಂಪಿನ ಯೋಜನೆಗಳಿಗೂ ವಿಸ್ತರಿಸುವುದು ಹಾಗೂ ಗರಿಷ್ಠ ಮಿತಿಯನ್ನು 10,000 ರೂಪಾಯಿಗಳಿಂದ 50,000 ರೂಪಾಯಿಗಳಿಗೆ ಏರಿಸುವುದು.

-ಸದ್ಯ ಸೆಕ್ಷನ್‌ 80CCD(2)ರ ಪ್ರಕಾರ ವೇತನದ ಶೇ 14ರಷ್ಟನ್ನು ಕೇಂದ್ರ ಸರಕಾರ ತನ್ನ ಕೊಡುಗೆಯಾಗಿ ನೀಡ್ತಿದ್ರೆ ಯಾವುದೇ ಇತರ ಉದ್ಯೋಗದಾತರು ವೇತನದ ಶೇ 10ರಷ್ಟು ಕೊಡುಗೆ ನೀಡ್ತಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಹಾಗೂ ಯಾವುದೇ ಇತರ ಉದ್ಯೋಗದಾತರ ಬಳಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಕಡಿತದಲ್ಲಿ ಸಮಾನತೆ ತರಲು ಎಲ್ಲಾ ಉದ್ಯೋಗದಾತರಿಗೂ ಶೇ 15ರಷ್ಟು ವೇತನ ಕಡಿತ ಮಾಡಿಕೊಳ್ಳಲು ಅವಕಾಶ ನೀಡಬೇಕು.

ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳ ವೇತನ ಮಿತಿ ಹೇಗಿರಬೇಕು

ಬಹಳಷ್ಟು ಉದ್ಯೋಗಿಗಳು ಈಗ ಮನೆಗಳಿಂದಲೇ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಬಾಡಿಗೆ, ವಿದ್ಯುತ್‌, ಪೀಠೋಪಕರಣಗಳು, ಹಾಗೂ ಇಂಟರ್‌ನೆಟ್‌ ಶುಲ್ಕ ಮುಂತಾದ ಹೆಚ್ಚಿನ ವೆಚ್ಚಗಳು ಉಂಟಾಗುತ್ತಿದ್ದು ಇದನ್ನು ತುಂಬಿಕೊಡಲು ಅನೇಕ ಉದ್ಯೋಗದಾತರು ಉದ್ಯೋಗಿಗಳಿಗೆ ವೆಚ್ಚದ ಮರುಪಾವತಿ/ಭತ್ಯೆಗಳನ್ನು ನೀಡುತ್ತಿದ್ದಾರೆ.  ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಇಂತಹ ಭತ್ಯೆಗಳಿಗೆ ಅನುಗುಣವಾಗಿ ತೆರಿಗೆ ವಿಭಾಗದದಿಂದ 50,000 ರೂಪಾಯಿಗಳ ಹೆಚ್ಚಿನ ವೇತನ ಕಡಿತ ಮಿತಿಯನ್ನು ನಿರೀಕ್ಷಿಸುತ್ತಿದ್ದಾರೆ.

ಪರಿಷ್ಕೃತ ತೆರಿಗೆ ದಾಖಲಾತಿಗಳನ್ನು ಸಲ್ಲಿಸಲು ಈಗಿರುವ ಕಡೆಯ ದಿನಾಂಕವನ್ನು ವಿಸ್ತರಿಸಬೇಕು

ಪರಿಷ್ಕೃತ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವ ಕಡೆಯ ದಿನಾಂಕವು ಮೊದಲು 12 ತಿಂಗಳ ಅವಧಿಯದಾಗಿದ್ದು ಈಗ ಅದನ್ನು 3 ತಿಂಗಳು ಕಡಿಮೆ ಮಾಡಲಾಗಿದೆ. ಅಂದರೆ, ಉದಾಹರಣಗೆ, 2021-22ರ ಆರ್ಥಿಕ ವರ್ಷಕ್ಕೆ ಪರಿಷ್ಕೃತ ಆದಾಯ ತೆರಿಗೆ ರಿಟರ್ನ್‌ ಅನ್ನು ಸಲ್ಲಿಸಲು ಮೊದಲು ಮಾರ್ಚ್‌ 31, 2023ರಂದು ಕೊನೆಯ ದಿನಾಂಕವಾಗಿದ್ದರೆ ಈಗ ಅದು ಡಿಸೆಂಬರ್ 31, 2022 ಆಗಿದೆ.

ವಿದೇಶಗಳಲ್ಲಿ ಸೇವೆ ಸಲ್ಲಿಸುವ ಉದ್ಯೋಗಿಗಳು ವಿದೇಶಗಳಲ್ಲಿ ಪಾವತಿಸಿರುವ ತೆರಿಗೆಗಳನ್ನು ಕ್ಲೈಮ್‌ ಮಾಡಲು ಅವುಗಳ ವಿವರಗಳನ್ನು ಅದೇ ಕ್ಯಾಲೆಂಡರ್‌ ವರ್ಷದಲ್ಲಿ ಪಡೆಯಲು ಸಾಧ್ಯವಿಲ್ಲದಿರುವುದರಿಂದ ತೆರಿಗೆಗಳ ಲೆಕ್ಕಾಚಾರ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಅಂಥವರಿಗೆ ಪರಿಷ್ಕೃತ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಭಾರತೀಯ ತೆರಿಗೆ ವರ್ಷದಿಂದ 12 ತಿಂಗಳ ಸಮಯ ಇರುತ್ತದೆ.

ಉದ್ಯೋಗದಾತರು ನೀಡುವ ಭವಿಷ್ಯನಿಧಿ ಭಾಗಾಂಶದ ಮೇಲಿನ ಬಡ್ಡಿಯ ಸ್ಪಷ್ಟತೆ

2021ರ ಬಜೆಟ್‌ನಲ್ಲಿ ಉದ್ಯೋಗಿಗಳು ನೀಡುವ ಭವಿಷ್ಯನಿಧಿ ಕೊಡುಗೆಯು 2,50,000 ರೂಪಾಯಿಗಳಿಗೂ ಮೇಲ್ಪಟ್ಟಿದ್ದರೆ ಅದಕ್ಕೆ ತೆರಿಗೆ ಹಾಕಬಹುದಾಗಿದೆ. ಈ ಮಿತಿಯನ್ನು 5,00,000 ರೂಪಾಯಿಗಳಿಗೆ ವಿಸ್ತರಿಸಬಹುದು. ಉದ್ಯೋಗದಾತರು ನೀಡುವ ಭವಿಷ್ಯನಿಧಿ ಭಾಗಾಂಶವನ್ನು ಹಿಂಪಡೆಯುವಾಗ ಅದರ ಮೇಲೆ ತೆರಿಗೆ ಕಟ್ಟಬೇಕಾಗುವುದೇ ಎಂದು ಸ್ಪಷ್ಟಪಡಿಸುವುದು ಅವಶ್ಯವಾಗಿದೆ.

ಮೇಲ್ಕಂಡ ಸಲಹೆಗಳನ್ನು 2022ರ ಬಜೆಟ್‌ನಲ್ಲಿ ಜಾರಿಗೆ ತಂದರೆ ಅದು ನಿಶ್ಚಿತವಾಗಿಯೂ ತೆರಿಗೆ ಪಾವತ ಮಾಡುವವರಿಗೆ ಸೂಕ್ತ ಪರಿಹಾರ ಸಿಗಲಿದೆ.

(Central Budget 2022 2023 Hopes and Expectations)

ಇದನ್ನೂ ಓದಿ: RBI ಹೊಸ ಹಣಕಾಸು ನೀತಿ : IMPS ವಹಿವಾಟು ನಿಯಮ ಬದಲಾವಣೆ

ಇದನ್ನೂ ಓದಿ: Personal Finances Advisors Help: ವೈಯಕ್ತಿಕ ಹಣಕಾಸು ನಿರ್ವಹಣೆ; ಉತ್ತಮ ಸಲಹೆಗಾರರ ಅವಶ್ಯಕತೆ ಯಾವಾಗ? ಏಕೆ?

(Central Budget 2022 2023 Hopes and Expectations)

RELATED ARTICLES

Most Popular