ಮಂಗಳವಾರ, ಏಪ್ರಿಲ್ 29, 2025
HomeCinemaCharithriya Ganesh: ಬಣ್ಣ ಹಚ್ಚಿ ತೆರೆಗೆ ಬರ್ತಾರಾ ಗೋಲ್ಡನ್ ಸ್ಟಾರ್ ಪುತ್ರಿ : ಚಾರಿತ್ರ್ಯಾಗಣೇಶ್...

Charithriya Ganesh: ಬಣ್ಣ ಹಚ್ಚಿ ತೆರೆಗೆ ಬರ್ತಾರಾ ಗೋಲ್ಡನ್ ಸ್ಟಾರ್ ಪುತ್ರಿ : ಚಾರಿತ್ರ್ಯಾಗಣೇಶ್ ಪೋಟೋಶೂಟ್ ವೈರಲ್

- Advertisement -

ಸ್ಯಾಂಡಲ್ ವುಡ್ ಇರಲಿ ಬಾಲಿವುಡ್ ಇರಲಿ ಸ್ಟಾರ್ ಗಳ ಮಕ್ಕಳು ಸ್ಟಾರ್ ಗಳಾಗೋದು ಕಾಮನ್ ಸಂಗತಿ. 1980 ರ ದಶಕದಿಂದ ಆರಂಭಿಸಿ ಇಲ್ಲಿಯವರೆಗೂ ಅಸಂಖ್ಯ ಸ್ಟಾರ್ ಗಳ ಮಕ್ಕಳು ತೆರೆ ಮೇಲೆ ಮಿಂಚಿದ್ದಾರೆ. ಅದರಲ್ಲೂ ಕೆಲವರ ಕುಟುಂಬದ ಸದಸ್ಯರೆಲ್ಲರೂ ನಟರಾದ ಉದಾಹರಣೆಯೂ ಇದೆ. ಇಷ್ಟೆಲ್ಲ ಪೀಠಿಕೆ ಹಾಕೋಕೆ ಕಾರಣವಾಗಿದ್ದು ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯಾ ( Charithriya Ganesh ).

ಪುಟ್ಟ ಹುಡುಗಿ ಚಾರಿತ್ರ್ಯಾ ಗಣೇಶ್, ಕ್ಯೂಟ್ ಬೋಲ್ಡ್ ಹಾಗೂ ಬುದ್ಧಿವಂತ ಹುಡುಗಿ. ಅಪ್ಪನ ಕಣ್ಮಣಿ ಹಾಗೂ ಅಮ್ಮನ ಪ್ರೀತಿಯ ಮಗಳಾಗಿರೋ ಚಾರಿತ್ರ್ಯಾ ಬಗ್ಗೆ ಆಗಾಗ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡುತ್ತ ಲೇ ಇರುತ್ತಾರೆ. ಕೆಲ ದಿನಗಳ ಹಿಂದೆಯಷ್ಟೇ ಶಿಲ್ಪಾಗಣೇಶ್ ಮಗಳು ಫ್ರಾಕ್ ನಲ್ಲಿ ಮಿಂಚಿದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಟೋಗಳಲ್ಲಿ ಚಾರಿತ್ರ್ಯಾ ಮುದ್ದಾಗಿ ಕಾಣಿಸಿದ್ದು, ಕಾನ್ಪಿಡೆಂಟಾಗಿ ಪೋಸ್ ಕೊಡುವ ಮೂಲಕ ಗಮನ ಸೆಳೆದಿದ್ದಾರೆ.

Golden star Ganesh and Shilpa Ganesh Daughter Charithriya Ganesh photoshoot, entry into sandalwood 7

ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ಆರಂಭವಾಗಿದೆ. ಚಾರಿತ್ರ್ಯಾ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ. ಅದಕ್ಕಾಗೇ ಪೋಟೋ ಶೂಟ್ ನಡೆಸಲಾಗಿದೆ ಎಂಬೆಲ್ಲ ಮಾತುಗಳು ಕೇಳಿಬಂದಿದೆ.

Golden star Ganesh and Shilpa Ganesh Daughter Charithriya Ganesh photoshoot, entry into sandalwood 5

ಆದರೆ ಈ ವಿಚಾರಗಳ ಬಗ್ಗೆ ಸ್ವತಃ ನಟ ಗಣೇಶ್ ಅಥವಾ ಪತ್ನಿ ಶಿಲ್ಪಾ ಗಣೇಶ್ ಯಾವುದೇ ಅಧಿಕೃತ ಮಾಹಿತಿ‌ ನೀಡಿಲ್ಲ. ಆದರೆ ಗಣೇಶ್ ಹಾಗೂ ಶಿಲ್ಪಾ ಶೇರ್ ಮಾಡಿರೋ ಪೋಟೋಗೆ ಮಾತ್ರ ಸಖತ್ ಲೈಕ್ಸ್ ಹಾಗೂ ಕಮೆಂಟ್ ಹರಿದುಬಂದಿದೆ.

Golden star Ganesh and Shilpa Ganesh Daughter Charithriya Ganesh photoshoot, entry into sandalwood 6

ಇಷ್ಟಕ್ಕೂ ಗೋಲ್ಡನ್ ಸ್ಟಾರ್ ಪುತ್ರಿ ಚಾರಿತ್ರ್ಯಾ ಒಂದೊಮ್ಮೆ ಸಿನಿಮಾಗೆ ಎಂಟ್ರಿಕೊಟ್ರೇ ಅದು ಹೊಸ ಸುದ್ದಿ ಏನಲ್ಲ. ಕೇವಲ 5-6 ವರ್ಷ ಇದ್ದಾಗಲೇ ಗಣೇಶ್ ಪುತ್ರಿ ಚಾರಿತ್ರ್ಯ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಸಿನಿಮಾದ ಪಾತ್ರವೊಂದಕ್ಕೆ ಚಾರಿತ್ರ್ಯಾ ಆಯ್ಕೆಯಾಗಿದ್ದು, ಆಗಲೇತಂದೆಯ ಸಿನಿಮಾದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.

Golden star Ganesh and Shilpa Ganesh Daughter Charithriya Ganesh photoshoot, entry into sandalwood 1

ಈ ಹಿಂದೆ ನಟಿ ಅಮೂಲ್ಯ ಮೆಹೆಂದಿ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿ‌ಡ್ಯಾನ್ಸ್ ಮಾಡಿದ್ದ ಚಾರಿತ್ರ್ಯಾ ವಿಡಿಯೋ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗಿದ್ದಲ್ಲದೇ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಮತ್ತೊಮ್ಮೆ ಆಮ್ಲೇಟ್ ಮಾಡೋ ವಿಡಿಯೋ ಮೂಲಕ ಗಣೇಶ್ ತಮ್ಮ ಪುತ್ರಿಯನ್ನು ಸೋಷಿಯಲ್ ಮೀಡಿಯಾಕ್ಕೆ ಇಂಟರಡ್ಯೂಸ್ ಮಾಡಿಸಿದ್ದರು.

ಇದನ್ನೂ ಓದಿ : Nayanthara : ಕ್ಲೈಮ್ಯಾಕ್ಸ್ ಹಂತಕ್ಕೆ ಕಬ್ಜ ಶೂಟಿಂಗ್ : ಉಪ್ಪಿ-ಸುದೀಪ್ ಸಿನಿಮಾಕ್ಕೆ ನಾಯಕಿಯಾದ್ರಾ ನಯನತಾರಾ?!

ಇದನ್ನೂ ಓದಿ : ವೈರಲ್​ ಆಗುತ್ತಿರುವ ವಮಿಕಾಳ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ ವಿರುಷ್ಕಾ ದಂಪತಿ

(Golden star Ganesh and Shilpa Ganesh Daughter Charithriya Ganesh photoshoot, entry into sandalwood)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular