ಉಡುಪಿ : ಕೊರೊನಾ ಸೋಂಕಿಗೆ ಉಡುಪಿ ಜಿಲ್ಲೆಯಲ್ಲಿ ಮೂವರು ತುತ್ತಾಗಿದ್ದಾರೆ. ಈ ಪೈಕಿ ಮಣಿಪುರ ಸಮೀಪದ ದೆಂದೂರುಕಟ್ಟೆಯ ಕೊರೊನಾ ಸೋಂಕಿತ ಕೊರಂಟೈನ್ ಪಾಲಿಸಿಲ್ಲ. ಇದರಿಂದಾಗಿ ಅಲೆವೂರು, ಮಣಿಪುರ, ದೆಂದೂರುಕಟ್ಟೆಯಲ್ಲಿ ಆತಂಕ ಸೃಷ್ಟಿಯಾಗಿದೆ.

ದುಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಮಣಿಪುರದ ದೆಂದೂರುಕಟ್ಟೆಉ 29 ವರ್ಷದ ಯುವಕ ದುಬೈನಿಂದ ಕೇರಳದ ತಿರುವನಂತಪುರಕ್ಕೆ ಆಗಮಿಸಿದ್ದ, ಅಲ್ಲಿಂದ ತನ್ನೂರಿಗೆ ಮಾರ್ಚ್ 17ರಂದು ಬಂದು ತಲುಪಿದ್ದಾನೆ. ಆದರೆ ಶಂಕಿತ ಕೊರೊನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ ಈತನ ಗಂಟಲಿನ ದ್ರವ ಪರೀಕ್ಷಾ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಯುವಕನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಮಣಿಪುರದ ದೆಂದೂರು ಕಟ್ಟೆಯ ಯುವಕನಿಗೆ ಕೊರೊನಾ ಸೋಂಕು ತಗಲಿರುವುದು ಉಡುಪಿಯ ಜನರಿಗೆ ಆತಂಕವನ್ನು ತಂದೊಡ್ಡಿದೆ. ವಿದೇಶದಿಂದ ಬಂದವರು ಕಡ್ಡಾಯವಾಗಿ ಕೊರಂಟೈನ್ ಪಾಲನೆ ಮಾಡಬೇಕೆಂದು ಆದೇಶ ಹೊರಡಿಸಿದ್ದರೂ ಕೂಡ ಯುವಕ ಕೊರಂಟೈನ್ ಆದೇಶ ಪಾಲನೆ ಮಾಡಿಲ್ಲ. ನಿತ್ಯವೂ ಸ್ನೇಹಿತರ ಜೊತೆಗೆ ಕ್ರಿಕೆಟ್ ಆಡುವುದು, ಕೋಳಿ ಅಂಕ, ಹೊಳೆಯಲ್ಲಿ ಈಜುವುದಕ್ಕೂ ತೆರಳಿದ್ದಾನೆ. ಮಾತ್ರವಲ್ಲ ಮಣಿಪುರ, ಅಲೆವೂರು, ದೆಂದೂರುಕಟ್ಟೆ ಹಾಗೂ ಉಡುಪಿಯಲ್ಲಿ ಅಡ್ಡಾಡಿದ್ದಾನೆ. ಹೀಗಾಗಿ ಜನರು ಆತಂಕ್ಕೆ ಒಳಗಾಗುತ್ತಿದ್ದಾರೆ.

ಈ ನಡುವಲ್ಲಿಯೇ ಸಾಮಾಜಿಕ ಜಾಲತಾಣಗಳಲ್ಲಿ ಯುವಕ ಕೊರಂಟೈನ್ ಪಾಲನೆ ಮಾಡದಿರುವ ಕುರಿತು ಆಡಿಯೋಗಳು ಹರಿದಾಡುತ್ತಿವೆ. ಜಿಲ್ಲಾಡಳಿತ ಈ ಕುರಿತು ಮುನ್ನೆಚ್ಚರಿಕೆಯ ಕ್ರಮಗಳನ್ನುಕೈಗೊಳ್ಳಲುವ ಅಗತ್ಯವಿದೆ.