ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತಮ್ಮ 4ನೇ ಬಜೆಟ್ ಅನ್ನು ಮಂಡಿಸಿದ್ದು, ಸಾಮಾಜಿಕ ಜಾಲತಾಣ ಕೂ ನಲ್ಲಿ ಅನೇಕ ಜನರು ತಮ್ಮ ಅಭಿಪ್ರಾಯವನ್ನು (Budget 2022 People Opinion) ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಧ್ಯಮ ವರ್ಗದವರು ಈಬಾರಿ ಬಜೆಟ್ ಕುರಿತು ಕೂ ವೇದಿಕೆಯಲ್ಲಿ ‘ಮಧ್ಯಮ ವರ್ಗದವರಿಗೆ ಹೆಚ್ಚು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನುಕೂಲವಾಗಿಲ್ಲ’ ಎನ್ನುವ ನೋವಿನ ಹೊರತು ಇದೊಂದು ಒಳ್ಳೆಯ ಬಜೆಟ್ ಎಂದು ಅನೇಕರು ಪ್ರಸ್ತಾಪಿಸಿದ್ದಾರೆ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾರಾದರೂ ಮಧ್ಯಮ ವರ್ಗದವರ ಬಗ್ಗೆಯೂ ಸ್ವಲ್ಪ ಯೋಚಿಸಿ ಅಂತ’ ತರುಣ್ ದೀಪ್ ಎನ್ನುವರು ಕೂ ಮಾಡಿದ್ದಾರೆ.
UnionBudget2022 ಮಧ್ಯಮ ವರ್ಗದ ತೆರಿಗೆದಾರರಿಗೆ ಒಂದು ಉಪಯೋಗವಿಲ್ಲದ ಅಂಶವಾಗಿದ್ದು, ಕನಿಷ್ಠ @nsitharaman @FinMinIndia ಸ್ಟ್ಯಾಂಡರ್ಡ್ ಕಡಿತವನ್ನು ಪ್ರಸ್ತುತ ₹50000 ರಿಂದ ₹100000 ಕ್ಕೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿಟ್ಟು ಈ 2 ವರ್ಷಗಳಲ್ಲಿ ವಿದ್ಯುಚ್ಛಕ್ತಿ ಮತ್ತು ಮನೆಯ ವೆಚ್ಚಗಳಿಗೆ ಸಂಬಂಧಿಸಿದ ವೆಚ್ಚಗಳು ದುಪ್ಪಟ್ಟಾಗಿದೆ’ ಎಂದು ಮಧುಕರ್ ಹೇಳಿದ್ದಾರೆ.
ಈ ಬಜೆಟ್ ಶ್ರೀಮಂತರು, ಕೈಗಾರಿಕೆಗಳು ಮತ್ತು ಬಡವರಿಗೆ ಒಳ್ಳೆಯದು ಆದರೆ ಮಧ್ಯಮ ವರ್ಗದ ಜನರಿಗೆ ಏನೂ ಇಲ್ಲ’ ಎಂದು ರವಿ ಎನ್ನುವರು ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ಬಗ್ಗೆ ಮಧ್ಯಮ ವರ್ಗದವರಿಗೆ ತೃಪ್ತಿ ಇಲ್ಲ. ಅವರೆ ನಿಯತ್ತಾಗಿ ತೆರಿಗೆ ಕಟ್ಟುವುದು, ಆ ಕಾರಣಕ್ಕೆ ಅವರಿಗೆ ತೃಪ್ತಿ ಪಡಿಸುವುದು ಬಜೆಟ್ ಮುಖ್ಯ ಆಂಶವಾಗಬೇಕು’ ಎಂದಿದ್ದಾರೆ ಸುನೀಲ್.
Meanwhile salaried taxpayers waiting for new tax regime!#NirmalaSitharaman #Budget2022 #EconomicSurvey #BudgetSession2022 pic.twitter.com/JFOcEIrVjv
— Hrishikesh Janjal (@janjal_rishi) January 31, 2022
Discussion between Government and Salaried Employees..#Budget2022 pic.twitter.com/jMLndjCL96
— ನಿರ್ಮಲಾ ಮೇಡಂ decide ಮಾಡ್ತಾರೆ… (@UppinaKai) January 31, 2022
ಕೇಂದ್ರ ಬಜೆಟ್‌ನ ಬಹು ನಿರೀಕ್ಷಿತ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಹಲವರ ನಿರೀಕ್ಷೆ ಹುಸಿಯಾದಂತಾಗಿದೆ’ ಎಂದು ನರೇಶ್ ಕಾಮತ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Budget 2022: ಕೇಂದ್ರ ಬಜೆಟ್ 2022: ಡಿಜಿಟಲ್ ಕರೆನ್ಸಿಗೆ ತೆರಿಗೆ; ವಿದೇಶಿ ಮೊಬೈಲ್ ದರ ಏರಿಕೆ
ಇದನ್ನೂ ಓದಿ: Kisan Drone : ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕೃಷಿ ಕ್ಷೇತ್ರ, ಮಹಿಳೆಯರಿಗೆ ಸಿಕ್ಕಿದ್ದೇನು?
(Budget 2022 People Opinion of FM Nirmala Sitharaman union budget)