ಕೋವಿಡ್ 19 ಸೋಂಕಿನಿಂದ ಬಳಲುತ್ತಿರುವ ಲತಾ ಮಂಗೇಶ್ಕರ್ ( Lata Mangeshkar health critical) ಕಳೆದ ಅನೇಕ ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕಳೆದೊಂದು ತಿಂಗಳಿನಿಂದ ದಾಖಲಾಗಿದ್ದಾರೆ. ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ದಿನದಿಂದ ದಿನಕ್ಕೆ ಗಂಭೀರ ಸ್ಥಿತಿ ತಲುಪಿದೆ. ಲತಾ ಮಂಗೇಶ್ಕರ್ರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದೆ. ಹಾಗೂ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎನ್ನಲಾಗಿದೆ.
ಕೋವಿಡ್ 19 ಸೋಂಕಿಗೆ ಒಳಗಾಗಿರುವ ಲತಾ ಮಂಗೇಶ್ಕರ್ರನ್ನು ಜನವರಿ ತಿಂಗಳಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ದಿನದಿಂದ ದಿನಕ್ಕೆ ಅವರ ಆರೋಗ್ಯವು ಕ್ಷೀಣಿಸುತ್ತಿದೆ. ಪ್ರಸ್ತುತ ಲತಾ ಮಂಗೇಶ್ಕರ್ರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದ್ದು ವೈದ್ಯರು ಭಾರತದ ಗಾನಕೋಗಿಲೆಯ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ ಎಂದು ಪ್ರತಿಷ್ಠಿತ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಜನವರಿ 27ರಂದು ಲತಾ ಮಂಗೇಶ್ಕರ್ರನ್ನು ವೆಂಟಿಲೇಟರ್ನಲ್ಲಿ ಇರಿಸಿರುವ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದರು. ಲತಾ ದೀದಿ ಅವರಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ. ಪ್ರಸ್ತುತ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. ಡಾ. ಪ್ರತೀತ್ ಸಮ್ದಾನಿ ನೇತೃತ್ವದ ತಂಡವು ಲತಾ ಮಂಗೇಶ್ಕರ್ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ನಿಮ್ಮ ಪ್ರಾರ್ಥನೆ ಹಾಗೂ ಹಾರೈಕೆಗಳಿಗಾಗಿ ಧನ್ಯವಾದಗಳು ಎಂದು ಲತಾ ಮಂಗೇಶ್ಕರ್ರ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಬರೋಬ್ಬರಿ 7 ದಶಕಗಳ ವೃತ್ತಿ ಜೀವನದಲ್ಲಿ ಇಂದೋರ್ ಮೂಲದ ಲತಾ ಮಂಗೇಶ್ಕರ್ 1000ಕ್ಕೂ ಅಧಿಕ ಬಾಲಿವುಡ್ ಸಿನಿಮಾಗಳಲ್ಲಿ ಹಾಡಿದ್ದಾರೆ. 2004ರ ಯಶ್ ಚೋಪ್ರಾ ನಿರ್ದೇಶನದ ವೀರ್ ಝಾರಾ ಸಿನಿಮಾದಲ್ಲಿ ಲತಾ ಮಂಗೇಶ್ಕರ್ ಕೊನೆಯ ಬಾರಿಗೆ ಹಾಡಿದ್ದಾರೆ. ಸೌಗಂಧ ಮುಝೆ ಇಸ್ ಮಿಟ್ಟಿ ಕಿ ಎಂಬ ಹಾಡು ಲತಾ ಮಂಗೇಶ್ಕರ್ ತಮ್ಮ ವೃತ್ತಿ ಜೀವನದಲ್ಲಿ ಹಾಡಿದ ಕೊನೆಯ ಹಾಡಾಗಿದೆ. ಇದು 2021ರ ಮಾರ್ಚ್ 30ರಂದು ರಿಲೀಸ್ ಆಗಿದೆ. ಇದು ಭಾರತೀಯ ಸೇನೆಗೆ ಗೌರವ ಸಲ್ಲಿಸುವ ಹಾಡಾಗಿದೆ. ಲತಾ ಮಂಗೇಶ್ಕರ್ರಿಗೆ 2001ರಲ್ಲಿ ಭಾರತದ ಅತ್ಯುನ್ನತ ಭಾರತ ರತ್ನವನ್ನು ನೀಡಿ ಗೌರವಿಸಲಾಗಿದೆ. ಇದನ್ನು ಹೊರತುಪಡಿಸಿ ಪದ್ಮಭೂಷಣ, ಪದ್ಮ ವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಸಾಕಷ್ಟು ರಾಷ್ಟ್ರೀಐ ಪ್ರಶಸ್ತಿಗಳು ಲತಾ ಮಂಗೇಶ್ಕರ್ ಮುಡಿಗೇರಿವೆ.
ಇದನ್ನು ಓದಿ : ಲೈಂಗಿಕ ಕಾರ್ಯಕರ್ತೆಯಾದ ಶ್ರುತಿ ಹರಿಹರನ್ : ಏನಿದು ಕಹಾನಿ ಇಲ್ಲಿದೆ ಡಿಟೇಲ್ಸ್
ಇದನ್ನೂ ಓದಿ : ಶಾಲೆಯಲ್ಲಿ ಹಿಜಾಬ್ ಕೇಳುವವರು, ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶ ಕೊಡಿ : ಸಚಿವ ಸುನೀಲ್ ಕುಮಾರ್
Lata Mangeshkar health critical, veteran singer put on ventilator