IPL 2022 ಮೆಗಾ ಹರಾಜು ಕ್ಷಣಗಣನೆ ಶುರುವಾಗಿದೆ. ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಘೋಷಿವೆ. ಐಪಿಎಲ್ 2022 ರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು 57 ಕೋಟಿಗಳನ್ನು ಹಣವನ್ನು ತನ್ನಲ್ಲಿ ಇರಿಸಿಕೊಂಡಿದೆ. ಆರ್‌ಸಿಬಿ ತಂಡವು ವಿರಾಟ್ ಕೊಹ್ಲಿ ( 15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್ ( 11 ಕೋಟಿ), ಮತ್ತು ಮೊಹಮ್ಮದ್ ಸಿರಾಜ್ (I 7 ಕೋಟಿ) ಆಟಗಾರರನ್ನು ಉಳಿಸಿಕೊಂಡಿದೆ. ಇದೀಗ ಶ್ರೇಯಸ್ ಅಯ್ಯರ್ ಆರ್‌ಸಿಬಿ ನಾಯಕನಾಗಿ ಆಯ್ಕೆಯಾಗಲಿದ್ದಾರೆ. ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಹಾಗಾದ್ರೆ ಆರ್‌ಸಿಬಿ ಪ್ಲೇಯಿಂಗ್ XI (RCB Playing XI) ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.
ಐಪಿಎಲ್ 2022 ರ ಸೂಪರ್ ಹರಾಜಿನಲ್ಲಿ ನಾಯಕನ ಹುಡುಕಾಟದಲ್ಲಿದೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಗ್ರ ಟಿ20 ಆಟಗಾರರನ್ನು ಖರೀದಿಸಿತ್ತು. ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಫ್ರಾಂಚೈಸಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿರಾಟ್ ಕೊಹ್ಲಿ ರಾಜೀನಾಮೆ, ಎಬಿ ಡಿವಿಲಿಯರ್ಸ್ ನಿವೃತ್ತಿಯ ಬೆನ್ನಲ್ಲೇ ಫ್ರಾಂಚೈಸಿಗೆ ಸೂಕ್ತ ನಾಯಕನನ್ನು ಹೊಂದುವುದು ಕಷ್ಟಕರವಾಗಿದೆ. ಐಪಿಎಲ್ 2021 ರ ಐಪಿಎಲ್ ಆರಂಭಕ್ಕೂ ಮುನ್ನವೇ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸುವುದಾಗಿ ಹೇಳಿದ್ದರು.
IPL ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯೋಜಿಸುತ್ತಿದೆ. ಜೊತೆಗೆ ಡೇವಿಡ್ ವಾರ್ನರ್, ಶಿಕರ್ ಧವನ್, ಶ್ರೇಯಸ್ ಅಯ್ಯರ್ ಮತ್ತು ಆಡಮ್ ಝಂಪಾ ಅವರಂತಹ ದೊಡ್ಡ ಆಟಗಾರರು ಹರಾಜಿಗೆ ಲಭ್ಯವಿದ್ದಾರೆ. ಆರ್‌ಸಿಬಿ ತಂಡವು ಶ್ರೇಯಸ್ ಅಯ್ಯರ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸುಸಜ್ಜಿತ ತಂಡವನ್ನು ಕಟ್ಟಲು ಮುಂದಾಗಿದೆ.
ಆರ್‌ಸಿಬಿ ತಂಡದಲ್ಲಿ ಡೇವಿಡ್ ವಾರ್ನರ್ ಮತ್ತು ಶಿಕರ್ ಧವನ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಐದನೇ ಕ್ರಮಾಂಕದಲ್ಲಿ ಆಡಿದರೆ, ಆರು ಮತ್ತು ಏಳನೇ ಸ್ಥಾನದಲ್ಲಿರುವ ವಿಕೆಟ್ ಕೀಪರ್ ಕೆಎಸ್ ಭರತ್ ಮತ್ತು ಆಲ್ ರೌಂಡರ್ ಆಡಮ್ ಮಿಲ್ನೆ. ಎಂಟನೇ ಕ್ರಮಾಂಕದ ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಶ್ರೇಯಸ್ ಗೋಪಾಲ್ ಒಂಬತ್ತನೇ ಮತ್ತು ವೇಗಿ ಖಲೀಲ್ ಅಹ್ಮದ್ ಹತ್ತನೇ, ಆಡಮ್ ಝಂಪಾ ಹನ್ನೊಂದರಲ್ಲಿ ಆಡಲಿದ್ದಾರೆ. ಇದೇ ತಂಡವನ್ನು ಹರಾಜಿನಲ್ಲಿ ಖರೀದಿಸಬಹುದಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠವಾಗುವ ಸಾಧ್ಯತೆ ಇದೆ.
ತಂಡ : ಡೇವಿಡ್ ವಾರ್ನರ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ( ನಾಯಕ) , ಗ್ಲೆನ್ ಮ್ಯಾಕ್ಸ್‌ವೆಲ್, ಕೆಎಸ್ ಭರತ್ (ವಿ.ಕೀ), ಆಡಮ್ ಮಿಲ್ನೆ, ಮೊಹಮ್ಮದ್ ಸಿರಾಜ್, ಶ್ರೇಯಸ್ ಗೋಪಾಲ್, ಆಡಮ್ ಜಂಪಾ ಮತ್ತು ಖಲೀಲ್ ಅಹ್ಮದ್.
ಇದನ್ನೂ ಓದಿ : KKR Team : ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಆಂಡ್ರೆ ರಸೆಲ್ ನಾಯಕ, ತಂಡ ಸೇರ್ತಾರೆ ಬೈರ್‌ಸ್ಟೋ ಮತ್ತು ಉತ್ತಪ್ಪ
ಇದನ್ನೂ ಓದಿ : ರಣಜಿ ಟ್ರೋಫಿಗೆ ಕೇರಳ ತಂಡ ಪ್ರಕಟ, ಶ್ರೀಶಾಂತ್ ಇನ್, ಸಂಜು, ಉತ್ತಪ್ಪ ಔಟ್
ಇದನ್ನೂ ಓದಿ : IPL 2022 Mega Auction ನಲ್ಲಿ ಅನ್‌ಸೋಲ್ಡ್ ಆಗ್ತಾರಾ ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಸುರೇಶ್ ರೈನಾ
(Shreyas Iyer captain, David Warner and Shikar Dhawan, RCB Playing XI for IPL 2022)