ಕೆಜಿಎಫ್-2 (KGF-2 promotion) ಹೆಸರಿನಿಂದಲೇ ಹವಾ ಸೃಷ್ಟಿಸಿದ ಈ ಸಿನಿಮಾಗಾಗಿ ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಎಲ್ಲ ಚಿತ್ರರಂಗವೂ ಕಾಯುತ್ತಿದೆ. ಮೊನ್ನೆ ಮೊನ್ನೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಹಾಗೂ ಮ್ಯೂಸಿಕ್ ಫೈನಲ್ ಮಾಡೋ ಕೆಲಸದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಈಗ ನಾಯಕ ಯಶ್ ಜೊತೆ ಮುಂಬೈಗೆ ಹಾರಿದ್ದು ಸಿನಿಪ್ರಿಯರ ಎದೆಯಲ್ಲಿ ಮತ್ತೆ ಕುತೂಹಲ ಸಿನಿಮಾದ ಮೇಲಿನ ನೀರಿಕ್ಷೆ ಹೆಚ್ಚುತ್ತಿದೆ.
ಮೊನ್ನೆ ಮೊನ್ನೆ ಕೆಜಿಎಫ್-2 ಸಿನಿಮಾ ಯಶಸ್ಸಿಗೆ ಪ್ರಾರ್ಥಿಸಿ ದಕ್ಷಿಣ ಕನ್ನಡ ಜಿಲ್ಲೆಯ ದೇವಾಲಯಗಳಿಗೆ ಟೆಂಪಲ್ ರನ್ ಮಾಡಿದ್ದ ನಾಯಕ ಯಶ್ ಮತ್ತು ಚಿತ್ರತಂಡ ಈಗ ಸದ್ದಿಲ್ಲದೆ ಮುಂಬೈಗೆ ಹಾರಿದೆ. ಮೂರೂವರೆ ವರ್ಷಗಳಿಂದ ಸಿನಿಮಾ ಗಾಗಿ ಕಾದಿದ್ದ ಚಿತ್ರರಸಿಕರಿಗೆ ಇನ್ನೆರಡು ತಿಂಗಳಲ್ಲಿ ಕೆಜಿಎಫ್-2 ಸಿನಿಮಾ ರಸದೌತಣ ನೀಡಲಿದೆ. ಏಪ್ರಿಲ್ 14 ರಂದು ಸಿನಿಮಾ ತೆರೆಗೆ ಬರಲಿದ್ದು, ಇದಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಿತ್ರತಂಡ ಪ್ರಮೋಶನ್ ಕಾರ್ಯ ಆರಂಭಿಸಿದೆ.
ದಕ್ಷಿಣ ಭಾರತದ ಸಿನಿಮಾಗಳ ದಾಖಲೆ ಬರೆದು, ವಿಶ್ವ ಮಟ್ಟದಲ್ಲಿ ಸಿನಿಮಾ ಸದ್ದು ಮಾಡಬಹುದೆಂಬ ನೀರಿಕ್ಷೆಯಲ್ಲಿರೋ ಚಿತ್ರತಂಡ ಹಿಂದಿ ಭಾಷೆಯಿಂದ ಪ್ರಮೋಶನ್ ಆರಂಭ ಮಾಡಲಿದೆ ಅಂತೆ. ಇದಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಮುಂಬೈಗೆ ತೆರಳಿದ್ದಾರೆ. ಯಶ್ ಗೆ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂಗದೂರ್ ಹಾಗೂ ಕಾರ್ಯಕಾರಿ ನಿರ್ಮಾಪಕ ಕಾರ್ತೀಕ್ ಗೌಡ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಸಿನಿಮಾ ವಿತರಣೆ, ಪ್ರಮೋಶನ್ ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ಯಶ್ ಬ್ಯುಸಿಯಾಗಿದ್ದು, ಮುಂಬೈಗೆ ಸಖತ್ ರಾಯಲ್ ಲುಕ್ ನಲ್ಲಿ ವಿಸಿಟ್ ಮಾಡಿ ಪೋಟೋ ಶೇರ್ ಮಾಡಿದ್ದಾರೆ. ಕೆಜಿಎಫ್ ಚಾಪ್ಟರ್ 1 ವಿತರಣೆ ಮಾಡಿದ ನಟಿ ರವೀನಾ ಟಂಡನ್ ಪತಿ ಅನಿಲ್ ತಡಾನೀಯ ಮಾಲಿಕತ್ವದ ಎಎ ಫಿಲ್ಸ್ಂ ಹಾಗೂ ಎಕ್ಸೈಲ್ ಎಂಟರ್ಟೈನ್ಮೆಂಟ್ ನ ರಿತೇಶ್ ಸಿದ್ವಾನಿಕೆಜಿಎಫ್-2 ಹಿಂದಿ ಚಾಪ್ಟರ್ ನ್ನು ವಿತರಣೆ ಮಾಡಲಿದ್ದಾರಂತೆ.
ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿರೋ ಕೆಜಿಎಫ್-2 ಪ್ರತಿ ಭಾಷೆಯಲ್ಲೂ ಅದ್ದೂರಿ ಪ್ರಮೋಶನ್ ಗೆ ಚಿತ್ರತಂಡ ಪ್ಲ್ಯಾನ್ ಮಾಡಿದೆ. ಇತ್ತೀಚಿಗಷ್ಟೇ ಕೆಜಿಎಫ್-2 ನಟಿ-ನಟರು ತಾವು ಡಬ್ಬಿಂಗ್ ಮುಗಿಸಿರೋ ಪೋಟೋಗಳನ್ನು ಶೇರ್ ಮಾಡೋ ಮೂಲಕ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ ಅನ್ನೋ ಮಾಹಿತಿ ನೀಡ್ತಿದ್ದರು. ಈಗ ಯಶ್ ಮುಂಬೈಗೆ ಭೇಟಿ ನೀಡಿರೋದು ಕೆಜಿಎಫ್-2 ತೆರೆಗೆ ಬರೋ ಸಿದ್ಧತೆಗಳ ಆರಂಭದ ಮುನ್ಸೂಚನೆ ನೀಡಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ.
ಇದನ್ನೂ ಓದಿ : ಗೋಲ್ಡನ್ ಗ್ಯಾಂಗ್ ನಲ್ಲಿ ಮೇಘನಾ ರಾಜ್ : ಚಿರು ಕೊಟ್ಟ ಸ್ಪೆಶಲ್ ಗಿಫ್ಟ್ ಶೇರ್ ಮಾಡಿದ ನಟಿ
ಇದನ್ನೂ ಓದಿ : Rakshit Shetty- Ramya: ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಮದುವೆಯಾಗ್ತಾರಾ? ಇಲ್ಲಿದೆ ಬಿಗ್ ಅಪ್ಡೇಟ್
(Actor Yash starrer film KGF-2 promotion will start in Mumbai)