ಬೆಂಗಳೂರು : ಹಿಂದೂ ಕಾರ್ಯಕರ್ತ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ ತಣ್ಣಗಾಗುವ ಮುನ್ನವೇ ಮತ್ತೊಬ್ಬ ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಬೆದರಿಕೆ ಕರೆ ಬಂದಿದ್ದು ಸೋಷಿಯಲ್‌ಮೀಡಿಯಾದಲ್ಲಿ ಪೋನ್ ಕರೆ ಹಾಗೂ ಬೆದರಿಕೆ (Threat call )ವಿಚಾರ ಸಖತ್ ವೈರಲ್ ಆಗಿದೆ. ವಾಟ್ಸಪ್ ನಲ್ಲಿ ಆಡಿಯೋ ಮೆಸೆಜ್ ಮೂಲಕ ಪುನೀತ್ ಕೆರೆಹಳ್ಳಿಗೆ ಬೆದರಿಕೆ ಹಾಕಲಾಗಿದ್ದು, ಕೊಲೆ ಮಾಡುವುದಾಗಿ ಅಪರಿಚಿತರು ಬೆದರಿಸಿದ್ದಾರೆ.
ವಿವರವಾಗಿ ಮಾತನಾಡಿ ಧಮಕಿ ಹಾಕಿರುವ ದುಷ್ಕರ್ಮಿಗಳು ಹರ್ಷ ಆಯ್ತು ಮುಂದಿನ ತಯಾರಿ ನೀನೆ ಎಂದು ಬೆದರಿಕೆ ಒಡ್ಡಿದ್ದಾರೆ. ಹರ್ಷನ ಕತೆ ಮುಗಿತು.ಮುಂದಿನ ತಯಾರಿ ನೀನೆ. ಹರ್ಷನ್ನ ಯಾಕೆ ಮರ್ಡರ್ ಮಾಡಿದ್ವಿ ಗೊತ್ತಲ್ಲ. ನಾವು ಇಲ್ಲಿಂದಲೇ ಸ್ಕೆಚ್ ಹಾಕ್ತಿವಿ ಗೊತ್ತಲ್ಲಾ. ಹಿಜಾಬ್ ತಂಟೆಗೆ ಬಂದ್ರೇ ಅಷ್ಟೇ ಎಂದು ಬೆದರಿಕೆ ಹಾಕಿದ್ದಾರಂತೆ. ಮಾತ್ರವಲ್ಲ ನಾವು ಎಲ್ಲಿದ್ದೇವೋ ಅಲ್ಲಿಂದಲೇ ಸ್ಕೆಚ್ ಹಾಕ್ತೇವೆ. ಒಂದು ತಿಂಗಳಿನಲ್ಲಿ ನಿನ್ನ ಕತೆ ಮುಗಿಸೋದಂತು ಪಕ್ಕಾ. ನೀನು ಎಲ್ಲಿದ್ದೇಯೋ ಅಲ್ಲೇ ಬಂದು ಹತ್ಯೆ ಮಾಡ್ತೀವಿ. ಸಿದ್ದವಾಗಿರು ಎಂದು ಬೆದರಿಸಿದ್ದಾರಂತೆ. ಇದಲ್ಲದೇ ಪುತ್ತೂರಿನಲ್ಲಿ ಒಬ್ಬ ಇದ್ದಾನೆ ಭರತ್, ಅವನ ಜೊತೆಗೆ ಇನ್ನೊಬ್ಬ ಇದ್ದಾನೆ. ಅವರಿಬ್ಬರನ್ನು ಮುಗಿಸ್ತೀವಿ ಎಂದು ವಾಟ್ಸ್ ಪ್ ಆಡಿಯೋ ರೆಕಾರ್ಡ್ ನಲ್ಲಿ ಬೆದರಿಕೆ ಹಾಕಲಾಗಿದೆ.
966597505898 ನಂಬರ್ ನಿಂದ ಪುನೀತ್ ಕೆರೆಹಳ್ಳಿಗೆ ಬೆದರಿಕೆ ಆಡಿಯೋ ಕ್ಲಿಪ್ ಗಳು ಬಂದಿವೆ. ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಬಂದಿರೋ ಈ ಬೆದರಿಕೆ ಕರೆ ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಹಾಗಿದ್ದರೇ ಹಿಂದೂ ಪರ ಕಾರ್ಯಕರ್ತರಿಗೆ ರಕ್ಷಣೆಯೇ ಇಲ್ಲವೇ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ ಈ ಆಡಿಯೋ ಕ್ಲಿಪ್ ಗಳ ಹಿಂದಿನ ಶಕ್ತಿಗಳನ್ನು ಪತ್ತೆಹಚ್ಚಲು ಪೊಲೀಸರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಪುನೀತ್ ಕೆರೆಹಳ್ಳಿಗೆ ಮೆಸೆಜ್ ಬಂದಿರೋ ನಂಬರ್ ಟ್ರ್ಯಾಕಿಂಗ್ ಆರಂಭಿಸಿದ್ದಾರೆ. ಈ ಮೆಸೆಜ್ ಕೇವಲ ಅಶಾಂತಿ ಹರಡುವ ಹಾಗೂ ಬೆದರಿಸುವ ಉದ್ದೇಶಕ್ಕೆ ಮಾಡಲಾಗಿದ್ಯಾ ಅಥವಾ ಇದರ ಹಿಂದೆ ನಿಜವಾಗಿಯೂ ಹತ್ಯೆಯ ಪ್ಲ್ಯಾನ್ ಇದ್ಯಾ, ಈ ಬೆದರಿಕೆ ಕರೆಗೂ ಹರ್ಷ ಹತ್ಯೆಕೋರರಿಗೂ ಸಂಬಂಧ ಇದ್ಯಾ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪುನೀತ್ ಕೆರೆಹಳ್ಳಿ ಸಾಮಾಜಿಕ ಕಾರ್ಯಕರ್ತನಾಗಿದ್ದು ಹಿಂದೂ ಪರ ವಿಚಾರಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋಗಳನ್ನು ಹಂಚಿಕೊಳ್ಳುವ ಹವ್ಯಾಸ ಹೊಂದಿದ್ದಾರೆ.
ಇದನ್ನೂ ಓದಿ : ಮುಸ್ಲಿಂರನ್ನು ಗೂಂಡಾ ಎಂದ ಸಚಿವ ಈಶ್ವರಪ್ಪ: ಶಿವಮೊಗ್ಗದಲ್ಲಿ ಸಚಿವರ ವಿರುದ್ಧ ದೂರು
ಇದನ್ನೂ ಓದಿ : ಎನ್ಐಎ ಹೆಗಲೇರುತ್ತಾ ಹರ್ಷ ಕೊಲೆ ಪ್ರಕರಣ : ಸಿಎಂ ಬೊಮ್ಮಾಯಿ ಹೇಳಿದ್ದೇನು ?
( Karnataka Hijab Row, another Hindu Activist Get Death Threat in call after Shivamogga Harsha Murder )