ಕರಾವಳಿ ಯುವ ಪ್ರತಿಭೆ ನಟ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ನಿರ್ದೇಶನದ ಹೊಚ್ಚ ಹೊಸ ಚಿತ್ರ ಇನಾಮ್ದಾರ್ (Inamdar ) ಚಿತ್ರದ ಮೊದಲ ಹಂತ ಚಿತ್ರೀಕರಣ ಮುಗಿದಿದೆ. ಉತ್ತರ ಕರ್ನಾಟಕ ಮತ್ತು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆಯುವ ಕಥಾ ಹಂದರಕ್ಕೆ ಅನುಗುಣವಾಗಿ ಮೊದಲ ಹಂತದ ಚಿತ್ರೀಕರಣ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ಹುಕ್ಕೇರಿ ಸಮೀಪದ ಎಲಿಮನ್ನೋಳಿ ಗ್ರಾಮದಲ್ಲಿರುವ ಸುಮಾರು 300 ವರ್ಷಕ್ಕೂ ಅಧಿಕ ಹಳೆದಾದ ಪರಂಪರಾಗತವಾಗಿ ನಿಂತಿರುವ ವಾಡಿಯಲ್ಲಿ ಚಿತ್ರತಂಡ (Inamdar ) ಚಿತ್ರೀಕರಣ ನಡೆಸಿದೆ. ಕಥೆಯಲ್ಲಿ ಬರುವ ಇನಾಮ್ದಾರ್ ವಂಶಸ್ಥರ ಮೂಲದಿಂದಲೇ ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಹಿರಿಯ ನಟ ಎಂಕೆ ಮಠ ಮತ್ತು ಪ್ರತಿ ಚಿತ್ರದ ಮೂಲಕ ತಮ್ಮ ವಿಭಿನ್ನ ಛಾಪು ಮೂಡಿಸುತ್ತಿರುವ ಪ್ರಮೋದ್ ಶೆಟ್ಟಿ ಹಾಗೂ ಉಳಿದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಚಿತ್ರಕಥೆಯಲ್ಲಿ ಇನಾಮ್ದಾರ್ (Inamdar ) ಒಡೆಯನಾಗಿರುವ ಎಂಕೆ ಮಠ ಅವರು ವಿಶೇಷವಾದ ಪಾತ್ರದ ಮೂಲಕ ಕಾಣಿಸಿಕೊಂಡರೆ, ಇತ್ತ ಆಳೆತ್ತರದ ಅಜಾನುಬಾಹು ಪ್ರಮೋದ್ ಶೆಟ್ಟಿ ಅವರು ಇದುವರೆಗೂ ನೀವು ನೋಡಿರದ ವಿಭಿನ್ನ ಗೆಟಪ್ ನ ಮೂಲಕ ಚಿತ್ರರಸಿಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಸುಮಾರು 15 ದಿನಗಳ ಕಾಲ ಎಲಿಮನ್ನೋಳಿ ವಾಡೆಯಲ್ಲಿ ಒಳಾಂಗಣದಲ್ಲಿ ಚಿತ್ರತಂಡ ಚಿತ್ರೀಕರಣ ನಡೆಸಿದೆ.

ಚಿತ್ರದ (Inamdar ) ವಿಶೇಷ ಆಕರ್ಷಣೆಯಾಗಿರುವ ನಾಯಕ ರಂಜನ್ ಛತ್ರಪತಿ ಮತ್ತು ನಾಯಕಿ ಎಸ್ತಾರ್ ನೋರೊನ್ಹಾ ಡ್ಯಾನ್ಸ್ ಕೂಡ ಬೆಳಗಾವಿಯ ನಾಟಕದ ಸೆಟ್ ನಲ್ಲಿ ಚಿತ್ರೀಕರಣ ನಡೆದಿದ್ದು. ನಟಿ ಎಸ್ತಾರ್ ನೊರೋನ್ಹಾ , ನಾಯಕ ರಂಜನ್ ಛತ್ರಪತಿ ಮೊದಲ ಬಾರಿಗೆ ಅದ್ದೂರಿಯ ಐಟಂ ಸಾಂಗ್ ಗೆ ನೃತ್ಯ ಮಾಡುವ ಮೂಲಕ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸಿನೆಮಾ ಕ್ಷೇತ್ರದ ಉದಯೋನ್ಮುಖ ನೃತ್ಯ ನಿರ್ದೇಶಕಿ ಗೀತಾ ಮಾಸ್ಟರ್ ಈ ಗೀತೆಗೆ ನೃತ್ಯ ಸಂಯೋಜನ ಮಾಡಿದ್ದಾರೆ.

ಸಂದೇಶ್ ಶೆಟ್ಟಿ ಆಜ್ರಿ ಆಕ್ಷನ್ ಕಟ್ ಹೇಳಿದ್ದು, ಸುನೀಲ್ ನಾರಾಯಣ್ ಮೂರ್ತಿ ಕ್ಯಾಮೆರಾ ಹಿಡಿದಿದ್ದಾರೆ. ನಿರ್ಮಾಪಕ ಬಾಲಚಂದ್ರ ಇನಾಮ್ದಾರ್, ನಾಯಕ ನಟ ರಂಜನ್ ಛತ್ರಪತಿ, ಯಶ್ ಆಚಾರ್ಯ, ಕರಣ್ ಕುಂದರ್, ಚಿತ್ರಕಲಾ ರಾಜೇಶ್ ಮತ್ತು ಟೀಮ್ ತಸ್ಮಯ್ ಸೇರಿದಂತೆ ಬಹು ತಾರಾಗಣವೇ ಸಿನಿಮಾದಲ್ಲಿದೆ.
ಇದನ್ನೂ ಓದಿ : ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಮೊದಲ ಗಿಫ್ಟ್ ಎಲ್ಲಿಂದ ಬಂತು ಗೊತ್ತಾ?! ಇಲ್ಲಿದೆ ಡಿಟೇಲ್ಸ್
ಇದನ್ನೂ ಓದಿ : Aishwarya Rajinikanth : ನಟ ರಜನಿಕಾಂತ್‌ಗೆ ಶಾಕ್ : ಆಸ್ಪತ್ರೆಗೆ ದಾಖಲಾದ ಪುತ್ರಿ ಐಶ್ವರ್ಯಾ
( sandalwood new movie Inamdar film first Scheduled Shooting complete )