ಬುಧವಾರ, ಏಪ್ರಿಲ್ 30, 2025
HomeCinemaRakul Preet Singh : ನಟನೆ ಬಿಟ್ಟು ಕಾಂಡೋಮ್‌ ಟೆಸ್ಟ್ ಗೆ ಮುಂದಾದ ನಟಿ ರಕುಲ್...

Rakul Preet Singh : ನಟನೆ ಬಿಟ್ಟು ಕಾಂಡೋಮ್‌ ಟೆಸ್ಟ್ ಗೆ ಮುಂದಾದ ನಟಿ ರಕುಲ್ ಪ್ರೀತ್ ಸಿಂಗ್

- Advertisement -

ಮಡಿವಂತಿಕೆ ಬಿಟ್ಟು ಲೈಂಗಿಕತೆ ಬಗ್ಗೆ ಮುಕ್ತವಾಗಿ ಸಿನಿಮಾ ಮಾಡೋದರಲ್ಲಿ ಬಾಲಿವುಡ್ ಮಂದಿ ಮುಂದಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಸಲಿಂಗಕಾಮ, ವೀರ್ಯದಾನ ಸೇರಿದಂತೆ ಹಲವು ಲೈಂಗಿಕತೆಯ ಅಂಶಗಳ‌ ಸುತ್ತ ಹೆಣೆಯಲಾದ ಕತೆಗಳು ನವಿರು ಹಾಸ್ಯದ ಜೊತೆಗೆ ಬಾಲಿವುಡ್ ನಲ್ಲಿ ತೆರೆಕಂಡಿದೆ. ಈಗ ಇಂತಹುದೇ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದ್ದು ಈ ಸಿನಿಮಾದಲ್ಲಿ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಕಾಂಡೋಮ ಪರೀಕ್ಷಕಿ ( condom test) ಪಾತ್ರದಲ್ಲಿ‌ ನಟಿಸಿದ್ದಾರೆ.

ಛತ್ರಿವಾಲಿ ಸಿನಿಮಾ ಕಾಂಡೋಮ್ ಕುರಿತ ಕತೆಯನ್ನು ಹೊಂದಿದ್ದು, ಸಿನಿಮಾದ ಲೀಡ್ ರೋಲ್ ನಲ್ಲಿ ರಕುಲ್‌ಪ್ರೀತ್ ಸಿಂಗ್ (Rakul Preet Singh)ಕಾಣಿಸಿಕೊಂಡಿದ್ದು ಕಾಂಡೋಮ್ ಪರೀಕ್ಷಿಸುವ ಪಾತ್ರದಲ್ಲಿ ಮುಜುಗರ ಬಿಟ್ಟು ನಟಿಸಿದ್ದಾರಂತೆ. ಸಾರ್ವಜನಿಕವಾಗಿ ಪುರುಷರೇ ಕಾಂಡೋಮ್‌ಬಗ್ಗೆ ಮಾತನಾಡಲು ಮುಜುಗರ ಪಡುವ ಹೊತ್ತಿನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಇಂತಹದೊಂದು ಪಾತ್ರ ಆಯ್ಕೆ ಮಾಡಿಕೊಂಡಿದ್ದು ಬಾಲಿವುಡ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆದರೆ ರಕುಲ್ ಪ್ರೀತ್ ಪ್ರಕಾರ ಇದೊಂದು ಲೈಂಗಿಕತೆಗೆ ಸಂಬಂಧಿಸಿದ ಕತೆಯಾದರೂ ಕೂಡ ಫ್ಯಾಮಿಲಿ ಸ್ಟೋರಿಯಾಗಿದ್ದು, ಕೌಟುಂಬಿಕ ಸಿನಿಮಾ ಎಂದೇ ರಕುಲ್ ಪ್ರೀತ್ ಇದನ್ನು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲ ಸಿನಿಮಾದ ಬಗ್ಗೆಯೂ ಮಾತನಾಡಿರುವ ರಕುಲ್ ಪ್ರೀತ್ , ಇದೊಂದು (condom test) ಲೈಂಗಿಕತೆಯ ಬಗ್ಗೆ ಮುಕ್ತವಾದ ವಿಚಾರಗಳನ್ನು ಹಂಚಿಕೊಳ್ಳುವ‌ ಪ್ರಯತ್ನ. ಗಂಭೀರವಾದ ವಿಚಾರವನ್ನು ಸಿನಿಮಾ ಹಂಚಿಕೊಂಡರೂ ಅದನ್ನು ಲಘು ಹಾಸ್ಯದ ಮೂಲಕ ಪ್ರೇಕ್ಷಕರಿಗೆ ಉಣಬಡಿಸುವ ಪ್ರಯತ್ನವಿದೆ ಎಂದಿದ್ದಾರೆ.

ಕೇವಲ ಛತ್ರಿವಾಲಿ ಮಾತ್ರವಲ್ಲ, ಡಾಕ್ಟರ್‌ಜೀ ಎಂಬ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾ‌ಕೂಡ ಆರೋಗ್ಯದ ವಿಚಾರದ ಕುರಿತು ಸಿದ್ಧವಾಗುತ್ತಿರುವ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ನಟಿ ರಕುಲ್ ಪ್ರಸೂತಿ ತಜ್ಞೆ ಪಾತ್ರದಲ್ಲಿ ಮಿಂಚಿದ್ದಾರೆ. ಡಾಕ್ಟರ್ ಜೀ ಸಿನಿಮಾದಲ್ಲೂ ಮಹಿಳೆಯರ ಆರೋಗ್ಯ, ತಾಯ್ತನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ರಕುಲ್ ಮುಕ್ತವಾದ ನಟನೆಯಿಂದ ಗಮನಸೆಳೆದಿದ್ದಾರಂತೆ.

ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ನಟನೆ ಆರಂಭಿಸಿದ ರಕುಲ್ ಪ್ರೀತ್ ಸಿಂಗ್ ಸದ್ಯ ಬಾಲಿವುಡ್ ನಲ್ಲೇ ಬ್ಯುಸಿಯಾಗಿದ್ದು, ತೆಲುಗು, ತಮಿಳು ಸಿನಿಮಾದಲ್ಲೂ ರಕುಲ್ ಪ್ರೀತ್ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸದ್ಯ ರಕುಲ್ ಪ್ರೀತ್ ಸಿಂಗ್ ಕೈಯಲ್ಲಿ ಬರೋಬ್ಬರಿ 9 ಸಿನಿಮಾಗಳಿದ್ದು, ಅಟ್ಯಾಕ್, ರನ್ ವೇ 34, ಡಾಕ್ಟರ್ ಜೀ, ಅಯಲಾನ್, ಮಿಷನ್ ಸಿಂಡ್ರೆಲಾ, ಇಂಡಿಯನ್‌ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ : ಸಂಭಾವನೆ ತಾರತಮ್ಯದ ವಿರುದ್ಧ ಸ್ಯಾಂಡಲ್ ವುಡ್ ನಟಿಮಣಿಯರ ಸಮರ

ಇದನ್ನೂ ಓದಿ : ಸಂಭಾವನೆ ಬಗ್ಗೆ ಧ್ವನಿ ಎತ್ತಿ ಸಂಕಷ್ಟಕ್ಕೆ ಸಿಲುಕಿದ ಪೂಜಾ ಹೆಗ್ಡೆ

( Rakul Preet Singh actress ahead of condom test)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular