ಮಂಗಳವಾರ, ಏಪ್ರಿಲ್ 29, 2025
HomeCinemaSudeep : ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾದಲ್ಲಿ‌ಕಿಚ್ಚ ಸುದೀಪ್ : ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ

Sudeep : ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾದಲ್ಲಿ‌ಕಿಚ್ಚ ಸುದೀಪ್ : ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ

- Advertisement -

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಬಹುಭಾಷಾ ನಟರಾಗಿಯೂ ಫೇಮಸ್.‌ ಚಿತ್ರಬ್ರಹ್ಮ ಎಂದು ಕರೆಯಿಸಿಕೊಳ್ಳೋ ರಾಜ್ ಮೌಳಿ ಜೊತೆಗೆ ಎರಡೆರಡು ಸಿನಿಮಾದಲ್ಲಿ ನಟಿಸಿರೋ ಸುದೀಪ್ (Sudeep) ಈಗ ರಾಜಮೌಳಿ ಮೂರನೇ ಬಹುನೀರಿಕ್ಷಿತ ಸಿನಿಮಾ RRR ರಲ್ಲೂ ಎಂಟ್ರಿ ಪಡೆಯುತ್ತಿದ್ದಾರೆ. ನಟ ಸುದೀಪ್ ಗಾಗಿ ರಾಜಮೌಳಿ ಸದಾ ತುಡಿಯುತ್ತಿರುತ್ತಾರೆ. ಅವಕಾಶ ಸಿಕ್ಕಾಗಲೆಲ್ಲ ರಾಜಮೌಳಿಯವರು ಸುದೀಪ್ ನಟನೆಯನ್ನು ಆಸ್ವಾದಿಸಿ ಪ್ರೇಕ್ಷಕರಿಗೆ ಉಣಬಡಿಸಲು ಸಿದ್ಧವಾಗುತ್ತಾರೆ. ಸುದೀಪ್ ಗಾಗಿ ಈಗದಂತಹ ಸಿನಿಮಾ ನಿರ್ಮಿಸಿದ್ದ ರಾಜಮೌಳಿ ಬಾಹುಬಲಿಯಲ್ಲೂ ಸುದೀಪ್ ಗೆ ಅವಕಾಶ ನೀಡಿದ್ದರು.

ಈಗ ತಮ್ಮ ಬಹುನೀರಿಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾ RRR ದಲ್ಲೂ ಸುದೀಪ್ ಗೆ ಅವಕಾಶ ನೀಡಿದ್ದಾರೆ ರಾಜಮೌಳಿ. ರಿಲೀಸ್ ಗೆ ಸಿದ್ಧವಾಗಿರೋ ಸಿನಿಮಾದಲ್ಲಿ ಸುದೀಪ್ ಗೆ ಈಗ ಹೇಗೆ ಅವಕಾಶ ಕೊಟ್ಟರು ಅಂತ ನೀವು ಕನ್ ಪ್ಯೂಸ್ ಆದ್ರಾ, ಇಷ್ಟಕ್ಕೂ ರಾಜ್ ಮೌಳಿ ಅವಕಾಶ ಮಾಡಿಕೊಟ್ಟಿರೋದು ಸುದೀಪ್ ನಟನೆಗಲ್ಲ. ಬದಲಾಗಿ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟ್ರೇಲರ್ ರೂಪದಲ್ಲಿ.

ಹೌದು ಸುದೀಪ್‌ ನಟನೆಯ ಬಹುನೀರಿಕ್ಷಿತ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಮೂವಿ ವಿಕ್ರಾಂತ್ ರೋಣ ಸದ್ಯದಲ್ಲೇ ತೆರೆಗೆ ಬರಲಿದೆ. ಇಂಗ್ಲೀಷ್ ಸೇರಿದಂತೆ ಬಹು ಭಾಷೆಯಲ್ಲಿ ತೆರೆ ಕಾಣ್ತಿರೋ ಸಿನಿಮಾ ಸಖತ್ ಹೈಪ್ ಸೃಷ್ಟಿ ಮಾಡಿದೆ. ಈಗ ಈ ಸಿನಿಮಾದ ಪ್ರಚಾರಕ್ಕೆ ರಾಜ್ ಮೌಳಿ ಸಹ ಸುದೀಪ್ ಜೊತೆ ಕೈಜೋಡಿಸಿದ್ದಾರೆ. ಆರ್ ಆರ್ ಆರ್ ಸಿನಿಮಾ ಪ್ರದರ್ಶನದ ಬ್ರೇಕ್ ಅವಧಿಯಲ್ಲಿ ವಿಕ್ರಾಂತ್ ರೋಣ ಟ್ರೇಲರ್ ರಿಲೀಸ್ ಮಾಡಲು ಸುದೀಪ್ ಗೆ ರಾಜಮೌಳಿ ಅವಕಾಶ ನೀಡಿದ್ದಾರಂತೆ. ರಾಜಮೌಳಿ ಆರ್ ಆರ್ ಆರ್ ಸಿನಿಮಾದಲ್ಲೇ ಸುದೀಪ್ ಗೆ ಪಾತ್ರವೊಂದನ್ನು ಕೊಡಲು ನಿರ್ಧರಿಸಿದ್ದರಂತೆ. ಆದರೆ ಅಲ್ಲಿ ಸುದೀಪ್ ಸರಿಹೊಂದುವ ಪಾತ್ರವಿಲ್ಲದ ಕಾರಣ ರಾಜಮೌಳಿ ಈಗ ಸುದೀಪ್ ಟ್ರೇಲರ್ ಗೆ ತಮ್ಮ ಸಿನಿಮಾದ ಇಂಟರವೆಲ್ ನಲ್ಲಿ ಅವಕಾಶ ನೀಡಿದ್ದಾರೆ.

ರಾಮಮೌಳಿ ಬಹುನೀರಿಕ್ಷಿತ ಆರ್ ಆರ್ ಆರ್ ಸಿನಿಮಾದ ಮಧ್ಯಂತರದಲ್ಲಿ ಪ್ರದರ್ಶನವಾಗೋಕೆ ನೊರೆಂಟು ಸಿನಿಮಾ ನಿರ್ದೇಶಕರು ತಮ್ಮ ಟ್ರೇಲರ್ ನೀಡಿದ್ದರಂತೆ. ಆದರೆ ಆರ್ ಆರ್ ಆರ್ ಸಿನಿಮಾದ ಕತೆಯೂ ದೀರ್ಘ ವಾಗಿದೆ ಎಂಬ ಕಾರಣಕ್ಕೆ ರಾಜಮೌಳಿ ನಿರಾಕರಿಸಿದ್ದರಂತೆ. ಆದರೆ ಸುದೀಪ್ ಮತ್ತು ರಾಜಮೌಳಿ ನಡುವಿನ ಬಾಂಧವ್ಯದ ಕಾರಣಕ್ಕೆ ವಿಕ್ರಾಂತ್ ರೋಣಾಗೆ ಆರ್ ಆರ್ ಆರ್ ಸಿನಿಮಾದ ನಡುವೆ ಪ್ರದರ್ಶನ ಕಾಣೋ ಯೋಗ ಸಿಕ್ಕಿದೆ.

ಇದನ್ನೂ ಓದಿ :  ರಿಲೀಸ್ ಗೆ ರೆಡಿಯಾಯ್ತು ರಶ್ಮಿಕಾ ಬಾಲಿವುಡ್ ಮೂವಿ ಮಿಶನ್ ಮಜ್ನು

ಇದನ್ನೂ ಓದಿ : Jaggesh : ಪುನೀತ್ ವಿಶ್ ಮಾಡದ ಬರ್ತಡೇ ಆಚರಣೆಯೇ ಬೇಡ ಎಂದ ನವರಸ ನಾಯಕ ಜಗ್ಗೇಶ್

(Sudeep acting in Rajamouli RRR cinema)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular