ಉಡುಪಿ : ಕಾಲೇಜಿನಲ್ಲಿ ಆರಂಭಗೊಂಡಿದ್ದ ಹಿಜಾಬ್‌ಹಾಗೂ ಕೇಸರಿ ಶಾಲು ವಿವಾದ ಇದೀಗ ಯಕ್ಷಗಾನಕ್ಕೂ(Yakshagana ) ಕಾಲಿಟ್ಟಿದೆ. ಕಾರ್ಕಳ ಉತ್ಸವದಲ್ಲಿ ಆಯೋಜಿಸಲಾದ ಯಕ್ಷಗಾನದ ದೃಶ್ಯವೊಂದು ಸದ್ಯ ವೈರಲ್ ಆಗಿದೆ. ತೆಂಕುತಿಟ್ಟಿನ ಯಕ್ಷಗಾನ ಪ್ರಸಂಗವೊಂದರಲ್ಲಿ ಕೇಸರಿ ಶಾಲು ಧರಿಸಿದ್ದ ಕಲಾವಿದರು ಹಿಜಾಬ್ ಹಾಗೂ ಕೇಸರಿ ಶಾಲು ವಿಷಯ ಪ್ರಸ್ತಾಪ ಮಾಡಿದ್ದಾರೆ.
ತೆಂಕು ತಿಟ್ಟಿನ ಖ್ಯಾತ ಕಲಾವಿದರಾಗಿರುವ ಸೀತಾರಾಮ ಕುಮಾರ್ ಕಟೀಲು ಅವರು ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ವಿಶ್ಲೇಷಣೆ ಮಾಡಿದ್ದಾರೆ. ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಸೈನಿಕರಿಗೆ ಹೋಲಿಸಿ ಸಂಭಾಷಣೆ ಆರಂಭಿಸಿದ ಸೀತಾರಾಮ ಕುಮಾರ್ ಕಟೀಲು ಅವರು, ಹಿಜಾಬ್ ನ್ನು ಕಪ್ಪು ಬಟ್ಟೆಗೆ ಹೋಲಿಸಿ ಹಾಸ್ಯ ಪ್ರಸ್ತುತ ವಿದ್ಯಾಮಾನಗಳ ಕುರಿತು ವಿವರಣೆಯನ್ನು ನೀಡಿದ್ದಾರೆ.
ಮೂವರು ಹಾಸ್ಯ ಕಲಾವಿದರ ನಡುವೆ ನಡೆದ ಸಂಭಾಷಣೆಯನ್ನು ಕೇಳುತ್ತಿದ್ದಂತೆಯೇ ನೆರೆದಿದ್ದ ಕೆಲವು ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಯ ಮೂಲಕ ಕಲಾವಿದರನ್ನು ಪ್ರೋತ್ಸಾಹ ನೀಡಿದ್ದಾರೆ. ಸದ್ಯ ಕಾರ್ಕಳ ಉತ್ಸವದಲ್ಲಿ ನಡೆದ ಹಾಸ್ಯ ಸಂಭಾಷಣೆಯ ತುಣುಕು ಇದೀಗ ಕರಾವಳಿಯಾದ್ಯಂತ ಬಾರೀ ವೈರಲ್ ಆಗಿದೆ.
ಇದನ್ನೂ ಓದಿ : ದುಬಾರಿಯಾಗಲಿದೆ ನಂದಿನಿ ಹಾಲು : ದರ ಏರಿಕೆಗೆ ಕೆಎಂಎಫ್ ಸಿದ್ಧತೆ
ಇದನ್ನೂ ಓದಿ : ಕೊನೆಗೂ ತಾಯ್ನಾಡು ತಲುಪುತ್ತಿದೆ ನವೀನ್ ಮೃತದೇಹ : ಸೋಮವಾರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
( Hijab VS saffron shawl controversy in Yakshagana)