ಬಿಹಾರ : ನೀರಾವರಿ ಅಧಿಕಾರಿಗಳ ಸೋಗಿನಲ್ಲಿ ಬಂದು 60 ಅಡಿ ಹಳೆಯ ಸೇತುವೆಯನ್ನು (iron bridge) ಕಳ್ಳತನ ಮಾಡಿದ ಪ್ರಕರಣದ ಅಡಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗಾಧಿಕಾರಿ ಸೇರಿದಂತೆ ಎಂಟು ಮಂದಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ .
ಆರೋಪಿಗಳನ್ನು ಬಂಧಿಸಿದ ಪೊಲೀಸರು ಒಂದು ಜೆಸಿಬಿ ಹಾಗೂ ಸುಮಾರು 247 ಕೆಜಿ ತೂಕದ ಕಬ್ಬಿಣದ ಚಾನೆಲ್ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸೇತುವೆ ಕಳ್ಳತನಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆಯ ಎಸ್ಡಿಓ ಅಧಿಕಾರಿ ಸೇರಿದಂತೆ ಎಂಟು ಮಂದಿಯನ್ನು ನಾವು ಬಂಧಿಸಿದ್ದೇವೆ. ಕಳ್ಳರು ಎಸ್ಡಿಒ ಜೊತೆ ಶಾಮೀಲಾಗಿ ಸೇತುವೆಯನ್ನು ಕದ್ದಿದ್ದಾರೆ. ನಾವು ಒಂದು ಜೆಸಿಬಿ ಸುಮಾರು 247 ಕೆಜಿ ತೂಕದ ಕಬ್ಬಿಣದ ಚಾನೆಲ್ಗಳನ್ನು ಕದ್ದಿದ್ದಾರೆ .ಈ ಎಲ್ಲಾ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ರೋಹ್ತಾಸ್ ಎಸ್ಪಿ ಆಶಿಶ್ ಭಾರ್ತಿ ಹೇಳಿದ್ದಾರೆ.
ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ 60 ಅಡಿಯ ಬಳಕೆ ಮಾಡದ ಸೇತುವೆಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಬಂದು ಹಾಡಹಗಲೇ ಕದ್ದು ಕಳ್ಳರ ತಂಡವು ಪರಾರಿಯಾಗಿತ್ತು. ಕಳ್ಳರು ಜೆಸಿಬಿಗಳು, ಪಿಕಪ್ ವ್ಯಾನ್ಗಳು, ಗ್ಯಾಸ್ ಕಟರ್ಗಳು ಹಾಗೂ ವಾಹನಗಳೊಂದಿಗೆ ಬಂದು ಮೂರು ದಿನಗಳಲ್ಲಿ ಸೇತುವೆಯನ್ನು ಕದ್ದು ಪರಾರಿಯಾಗಿದ್ದರು .
gang rape on girl child : 16 ವರ್ಷದ ಬಾಲಕಿ ಮೇಲೆ 8 ಮಂದಿಯಿಂದ ಗ್ಯಾಂಗ್ ರೇಪ್: ಆರೋಪಿಗಳ ಬಂಧನ
ಬೆಂಗಳೂರು : ದೇಶದಲ್ಲಿ ಮಹಿಳೆಗೆ(gang rape on girl child) ಸುರಕ್ಷತೆ ಒದಗಿಸಬೇಕು ಎಂದು ಸಾಕಷ್ಟು ಕಾನೂನುಗಳನ್ನು ಜಾರಿಗೆ ತರಲಾಗಿದೆ. ಪೊಲೀಸ್ ಇಲಾಖೆ ಕೂಡ ಎಲ್ಲಾ ರೀತಿಯಲ್ಲಿ ಮಹಿಳೆಯರಿಗೆ ಭದ್ರತೆಯನ್ನು ಒದಗಿಸುವ ಕಾರ್ಯಗಳನ್ನು ಮಾಡುತ್ತಿದೆ. ಆದರೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಈ ಎಲ್ಲಾ ಪ್ರಯತ್ನಗಳ ನಡುವೆಯೇ ಅಲ್ಲಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದ್ದು ಆತಂಕ ಹೆಚ್ಚಾಗಿದೆ.
16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಾಲಕಿಯ ಮೇಲೆ 8 ಮಂದಿ ಕಾಮಿಕರು ನಿರಂತರ ಅತ್ಯಾಚಾರವೆಸಗಿದ್ದು ಈ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಈ ಪ್ರಕರಣ ಪ್ರಮುಖ ಆರೋಪಿಯು ಮೊದಲು ತಾನು ಬಾಲಕಿಯ ಮೇಲೆ ದೌರ್ಜನ್ಯ ಎಸಗಿ ಅದರ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ.ಬಳಿಕ ಈ ವಿಡಿಯೋವನ್ನು ತನ್ನ ಸ್ನೇಹಿತರಿಗೂ ತೋರಿಸಿದ್ದ.ಬಳಿಕ ಸ್ನೇಹಿತರ ಜೊತೆ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಲಕಿಯ ಪೋಷಕರು ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಕೂಡಲೇ ಅಲರ್ಟ್ ಆದ ಪೊಲೀಸರು ಈಗಾಗಲೇ 7 ಮಂದಿಯನ್ನು ಬಂಧಿಸಿದ್ದು ಕಣ್ಮರೆಯಾಗಿರುವ ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
.
ಇದನ್ನು ಓದಿ : Chemical factory : ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ : 6 ಮಂದಿ ಕಾರ್ಮಿಕರು ಸಾವು
ಇದನ್ನೂ ಓದಿ : Minor Daughter Rape Case : ಮಗಳ ಮೇಲೆ ನಿರಂತರ ಅತ್ಯಾಚಾರ : ಪಾಪಿ ತಂದೆಗೆ 25 ವರ್ಷ ಜೈಲು ಶಿಕ್ಷೆ
Bihar govt official among 8 held for stealing 60-feet long iron bridge in Rohtas