ಕಳೆದ ಕೆಲ ತಿಂಗಳಿನಲ್ಲಿ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ, ಬದಲಾದ ಸಿಎಂಗಿಂತ ಹೆಚ್ಚು ಸದ್ದು ಮಾಡಿದ್ದು ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಸೃಷ್ಟಿಸಿದ ವಿವಾದಗಳು ಹಾಗೂ ಮುಜುಗರಗಳು. ಅಷ್ಟೇ ಶೇಕಡಾ ೪೦ ರಷ್ಟು ಲಂಚದ ವಿಚಾರವಂತೂ ಬಿಜೆಪಿ ಈಶ್ವರಪ್ಪನವರ ಇನ್ನೊಂದು ಮುಖ್ಯವನ್ನೇ ಬಿಚ್ಚಿಟ್ಟಿತ್ತು. ಈಗ ಇದೆಲ್ಲದರ ಅಂತ್ಯ ಈಶ್ವರಪ್ಪ ರಾಜೀನಾಮೆಯೊಂದಿಗೆ (Eshwarappa resignation) ಅಂತ್ಯಕಾಣುವ ಸಾಧ್ಯತೆ ದಟ್ಟವಾಗಿದೆ.
ಈಶ್ವರಪ್ಪ ವಿರುದ್ಧ ಗುತ್ತಿಗೆ ಕಾಮಗಾರಿ ಹಣ ಬಿಡುಗಡೆ ವಿಚಾರಕ್ಕೆ ಶೇಕಡಾ ೪೦ ರಷ್ಟು ಲಂಚ ಕೇಳಿದ್ದಾರೆ ಎಂದು ಆರೋಪಿಸಿ ದಾಖಲ ಬಿಡುಗಡೆ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಟೇಲ್ , ತಮ್ಮ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಕಾರಣ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಸಂತೋಷ ಡೆತ್ ನೋಟ್ ನಲ್ಲಿ ನೇರವಾಗಿ ಈಶ್ವರಪ್ಪನವರೇ ತನ್ನ ಆತ್ಮಹತ್ಯೆಗೆ ನೇರ ಕಾರಣ ಎಂದು ಆರೋಪಿಸಿದ್ದಾರೆ. ಸಂತೋಷ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ತಮ್ಮ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ವಿರುದ್ಧ ಈಶ್ವರಪ್ಪ ಮಾನನಷ್ಟ ಮೊಕದ್ದಮೆ ಕೂಡ ದಾಖಲಿಸಿದ್ದರು. ಇದೇ ಕಾರಣಕ್ಕೆ ಸಂತೋಷ ಆತ್ಮಹತ್ಯೆ ಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಸಂತೋಷ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ತಕ್ಷಣ ಸಂತೋಷ ಸೊಸೈಡ್ ಕೇಸ್ ನಲ್ಲಿ ಈಶ್ವರಪ್ಪ ವಿರುದ್ದ ಕೊಲೆ ಪ್ರಕರಣ ದಾಖಲಿಸಿಕೊಳ್ಳಬೇಕು. ಈಶ್ವರಪ್ಪ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ತಕ್ಷಣ ಸಂತೋಷ ಆತ್ಮಹತ್ಯೆಗೆ ಕಾರಣವಾದ ಈಶ್ವರಪ್ಪ ಅವರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್ ಹೆಸರು ಕೇಳಿ ಬಂದಾಗ ಜಾರ್ಜ್ ರಾಜೀನಾಮೆ ಪಡೆದಿದ್ದರು. ಈಗ ಇದೇ ರೀತಿ ಗಂಭೀರ ಆರೋಪ ಕೇಳಿಬಂದಿರೋದರಿಂದ ಈಶ್ವರಪ್ಪ ಅವರಿಂದ ತಕ್ಷಣ ರಾಜೀನಾಮೆ ನೀಡವೇಕೆಂದು ಕೆಪಿಸಿಸಿ ಅದ್ಯಕ್ಷ ಡಿಕೆಶಿ ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಹೈಕಮಾಂಡ್ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಗೆ ಟೀಕಾಸ್ತ್ರ ನೀಡುವ ಬದಲು ಈಶ್ವರಪ್ಪ ರಾಜೀನಾಮೆ ಪಡೆಯುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆಯಂತೆ.
ಈ ಹಿಂದೆ ಈಶ್ವರಪ್ಪ ನಿರಾಣಿ ಸಿಎಂ ಆಗಲಿದ್ದಾರೆ ಎಂದಿದ್ದರು. ಅದಾದ ಬಳಿಕ ರಾಷ್ಟ್ರ ಧ್ವಜ ಬದಲಾವಣೆ ಸೇರಿದಂತೆ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದರು. ಹೀಗಾಗಿ ಈಶ್ವರಪ್ಪ ಪಕ್ಷದಲ್ಲೂ ಒಂಟಿಯಾಗೇ ಉಳಿದುಕೊಂಡಿದ್ದರು. ಆದರೆ ಈಗ ಅವರ ಮೇಲೆ ಕಮಿಷನ್ ಆರೋಪ ಮಾಡಿದ ಸಂತೋಷ ಸಾವಿನಿಂದಾಗಿ ಅಕ್ಷರಷಃ ಸಂಕಷ್ಟಕ್ಕೆ ಸಿಲುಕಿದ್ದು ಈಶ್ವರಪ್ಪ ಸಂಪುಟ ತೊರೆದು ಹೊರಗೆ ಬರೋದು ಬಿಜೆಪಿ ಇಮೇಜ್ ದೃಷ್ಟಿಯಿಂದ ಅನಿವಾರ್ಯ ಎನ್ನಲಾಗುತ್ತಿದೆ.
ಇದನ್ನೂ ಓದಿ : ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನದ ಹೋರಾಟದಲ್ಲಿ ಶಶಿಕಲಾಗೆ ಹಿನ್ನಡೆ
ಇದನ್ನೂ ಓದಿ : ಭಾನುವಾರದಂದು ಜೆಡಿಎಸ್ ರಾಜ್ಯಾಧ್ಯಕ್ಷನ ಪಟ್ಟ ಅಲಂಕರಿಸಲಿದ್ದಾರೆ ಸಿಎಂ ಇಬ್ರಾಹಿಂ
Congress demands Eshwarappa resignation as minister