UPSC IFS Main Result 2021 : ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಯುಪಿಎಸ್ಸಿ ಐಎಫ್ಎಸ್ ಮುಖ್ಯ ಫಲಿತಾಂಶವನ್ನು ಗುರುವಾರ ಅಧಿಕೃತ ವೆಬ್ಸೈಟ್ upsc.gov.in ನಲ್ಲಿ ಘೋಷಣೆ ಮಾಡಿದೆ. ಭಾರತೀಯ ಅರಣ್ಯ ಸೇವೆಗಳ ಮುಖ್ಯ ಪರೀಕ್ಷೆಯು ಫೆಬ್ರವರಿ 27ರಿಂದ ಮಾರ್ಚ್ 6ರರವರೆಗೆ ನಡೆದಿದೆ. ಮುಖ್ಯ ಲಿಖಿತ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಈಗ ಪರ್ಸನಾಲಿಟಿ ಟೆಸ್ಟ್ಗೆ ಅರ್ಹರಾಗಿದ್ದಾರೆ.
ಪರ್ಸನಾಲಿಟಿ ಟೆಸ್ಟ್ ಸಂದರ್ಭದಲ್ಲಿ ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಸಮುದಾಯ, EWS, ಬೆಂಚ್‌ಮಾರ್ಕ್ ಅಸಾಮರ್ಥ್ಯ ಹೊಂದಿರುವ ವ್ಯಕ್ತಿ (PwBD) ಮತ್ತು TA ಫಾರ್ಮ್‌ನಂತಹ ಇತರ ದಾಖಲೆಗಳನ್ನು ತರುವುದು ಅವಶ್ಯವಾಗಿದೆ.
ಅಭ್ಯರ್ಥಿಗಳು ತಮ್ಮ ಪರ್ಸನಾಲಿಟಿ ಟೆಸ್ಟ್ ಸಂದರ್ಭದಲ್ಲಿ ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಸಮುದಾಯ. ಸೇರಿದಂತೆ ವಿವಿಧ ಮೂಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂದು ಯುಪಿಎಸ್ಸಿ ತನ್ನ ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.
ಅಭ್ಯರ್ಥಿಗಳಿಗೆ UPSC IFS 2021 ಪರ್ಸನಾಲಿಟಿ ಟೆಸ್ಟ್ ದಿನಾಂಕಗಳನ್ನು UPSC ಶೀಘ್ರದಲ್ಲೇ ಪ್ರಕಟಿಸಲಿದೆ. ಸಂದರ್ಶನದ ದೆಹಲಿಯಲ್ಲಿ ನಡೆಯಲಿದೆ. ನಿಗದಿಪಡಿಸಿದ ದಿನಾಂಕ ಮತ್ತು ಸಮಯದ ಬದಲಾವಣೆಗೆ ಯಾವುದೇ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ.
ಫಲಿತಾಂಶಗಳನ್ನು ವೀಕ್ಷಿಸಲು ಇಲ್ಲಿದೆ ಮಾರ್ಗ
upsc.gov.in ವೆಬ್ಸೈಟ್ಗೆ ಭೇಟಿ ನೀಡಿ.
ಹೋಂ ಪೇಜ್ನಲ್ಲಿ IFS Mains 2021 Exam Results ಆಯ್ಕೆ ಮೇಲೆ ಕ್ಲಿಕ್ ಮಾಡಿ.
ನಿಮ್ಮ ರೋಲ್ ನಂಬರ್ನ್ನು ಯುಪಿಎಸ್ಸಿ ರಿಸಲ್ಟ್ ಪಿಡಿಎಫ್ನಲ್ಲಿ ಸರ್ಚ್ ಮಾಡಿ.
ಪಿಡಿಎಫ್ ಡೌನ್ ಲೋಡ್ ಮಾಡಿ, ಅವಶ್ಯಕತೆ ಇದ್ದಲ್ಲಿ ಪ್ರಿಂಟ್ ಕೂಡ ಮಾಡಿಸಬಹುದು.
ಇದನ್ನು ಓದಿ : Degree Exams Postpone : ಪದವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಪರೀಕ್ಷೆ ಒಂದು ತಿಂಗಳು ಮುಂದೂಡಿಕೆ
ಇದನ್ನೂ ಓದಿ : CBSE Class 10 12 : ಸಿಬಿಎಸ್ಇ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ
UPSC IFS Main Result 2021 Released on upsc.gov.in: Here’s How to Check Score, Merit List