ಬೆಳ್ತಂಗಡಿ : ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ದುಡಿಮೆಯೇ ಇಲ್ಲದೇ ಬದುಕು ದುಸ್ಥರವಾಗಿದ್ದು, ಶ್ರಮಿಕರ ಬವಣೆ ಹೇಳ ತೀರದಾಗಿದೆ. ಒಪ್ಪತ್ತಿನ ಊಟಕ್ಕೂ ಪರದಾಡುತ್ತಿರೋ ಕುಟುಂಬಗಳ ನೆರವಿಗೆ ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕ ಸಹಾಯ ಹಸ್ತಚಾಚಿದೆ.

ಉದ್ಯಮಿ ಯಶವಂತ್ ಆರ್. ಬಾಳಿಗಾ ಅವರ ಸಹಕಾರದೊಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಬಿರುವೆರೆ ಕುಡ್ಲ ಬೆಳ್ತಂಗಡಿ ಘಟಕ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ, ಮದ್ದಡ್ಕ, ಕಿನ್ನಿಗೋಳಿ, ಮೇಲಂತಬೆಟ್ಟು, ಪುಂಜಾಲಕಟ್ಟೆ, ಉಜಿರೆ, ಬೆಳ್ತಂಗಡಿ, ಪಣೆಜಾಲು, ಕೆಯ್ಯೂರು, ಗುರಿಪಲ್ಲ, ಕುಕ್ಕಾವು, ಸಬರಬೈಲು, ಚಾರ್ಮಾಡಿ ಮುಂತಾದ ಪ್ರದೇಶಗಳಲ್ಲಿನ ಸುಮಾರು 60ಕ್ಕೂ ಅಧಿಕ ಕುಟುಂಬಗಳಿಗೆ ನಿತ್ಯೋಪಯೋಗಿ ವಸ್ತುಗಳನ್ನು ಹಸ್ತಾಂತರಿಸಲಾಗಿದೆ.
