ಕೇರಳ : actor dileeps friend arrested : ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರುವಾಸಿಯಾಗಿರುವ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪವನ್ನು ಎದುರಿಸುತ್ತಿರುವ ನಟ ದಿಲೀಪ್ ಸ್ನೇಹಿತ ಶರತ್ ಜಿ ನಾಯರ್ನನ್ನು ಕೇರಳದ ತಿರುವನಂತಪುರ ನಗರ ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಮಾಲೀಕನಾಗಿರುವ ಶರತ್ ಜಿ ನಾಯರ್ ವಿರುದ್ಧ ಸಾಕ್ಷ್ಯ ನಾಶ ಆರೋಪ ದಾಖಲಾಗಿದೆ.
ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಲು ದಿಲೀಪ್ ಪ್ಲಾನ್ ಮಾಡುತ್ತಿರುವ ಆಡಿಯೋ ವೈರಲ್ ಆದ ಬಳಿಕ ಅದನ್ನು ಟಿವಿಗಳಲ್ಲಿಯೂ ಪ್ರಸಾರ ಮಾಡಲಾಗಿತ್ತು. ಇದಾದ ಬಳಿಕ ನಟ ದಿಲೀಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣವು ದಾಖಲಾಗಿ ಅವರ ಬಂಧನ ಕೂಡ ಆಗಿತ್ತು. ಈ ಪ್ರಕರಣದಲ್ಲಿ ನಟ ದಿಲೀಪ್ ಜಾಮೀನು ಪಡೆದ ಬಳಿಕ ಅವರ ಮನೆಗೆ ತೆರಳಿದ್ದ ಶರತ್ ಜಿ ನಾಯರ್ ಸಾಕ್ಷ್ಯ ನಾಶದ ಸಂಚು ರೂಪಿಸಿದ್ದಾರೆ ಎಂದು ಸಿನಿಮಾ ನಿರ್ದೇಶಕ ಬಾಲಚಂದ್ರಕುಮಾರ್ ಆರೋಪಿಸಿರುವ ಹಿನ್ನೆಲೆಯಲ್ಲಿ ತಿರುವನಂತಪುರ ಠಾಣಾ ಪೊಲೀಸರು ಆರೋಪಿಯನ್ನು ಶರತ್ ಜಿ ನಾಯರ್ನನ್ನು ಬಂಧಿಸಿದ್ದಾರೆ. ಆದರೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ದಿಲೀಪ್ ಆರೋಪಿಸುತ್ತಲೇ ಬಂದಿದ್ದಾರೆ.
2017ರ ಫೆಬ್ರವರಿ 17 ರಾತ್ರಿ ಖ್ಯಾತ ನಟಿಯನ್ನು ವಾಹನದಲ್ಲಿ ಅಪಹರಿಸಿದ್ದ ಆರೋಪಿಗಳು ಅವರ ಮೇಲೆ ಸತತ ಎರಡು ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದರು. ಸಾಲದು ಎಂಬಂತೆ ಇಡೀ ಕೃತ್ಯವನ್ನು ವಿಡಿಯೋ ಮಾಡಿಕೊಂಡು ನಟಿಗೆ ಬೆದರಿಕೆ ಹಾಕುವ ಕೆಲಸವನ್ನೂ ಮಾಡಲಾಗಿತ್ತು ಎಂಬ ಆರೋಪ ದಿಲೀಪ್ ಮೇಲಿದೆ. ಈ ಪ್ರಕರಣದಲ್ಲಿ 10 ಮಂದಿಯ ಮೇಲೆ ಆರೋಪವಿದ್ದು ಇದರಲ್ಲಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ . ಇದೇ ಪ್ರಕರಣದ ಆರೋಪಿಯಾಗಿರುವ ನಟ ದಿಲೀಪ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ಇದನ್ನು ಓದಿ : Womens T20 Challenge 2022 : ಮಹಿಳಾ T20 ಚಾಲೆಂಜ್ 2022 ತಂಡಗಳನ್ನು ಪ್ರಕಟಿಸಿದ BCCI
ಇದನ್ನೂ ಓದಿ : KL Rahul, Rohit Sharma :ಕೆಎಲ್ ರಾಹುಲ್, ರೋಹಿತ್ ಶರ್ಮಾ ವಿಶ್ರಾಂತಿ; ದಕ್ಷಿಣ ಆಫ್ರಿಕಾ ಟಿ20ಗೆ ಟೀಂ ಇಂಡಿಯಕ್ಕೆ ನೂತನ ನಾಯಕ
assault case actor dileeps friend arrested