LPG Cylinder Subsidy : ಜನಸಾಮಾನ್ಯರಿಗೆ ಬಿಗ್ ರಿಲೀಫ್ ಎಂಬಂತೆ ಕಳೆದ ವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಎಲ್ಪಿಜಿ ಸಬ್ಸಿಡಿ ಘೋಷಣೆ ಮಾಡಿದ್ದರು. ಇದು ನಿರಂತರವಾಗಿ ಏರುತ್ತಿರುವ ಹಣದುಬ್ಬರ ನಡುವೆ ಕೋಟಿಗಟ್ಟಲೇ ಭಾರತೀಯ ಕುಟುಂಬಗಳಿಗೆ ಗುಡ್ ನ್ಯೂಸ್ ನೀಡಿದಂತಾಗಿತ್ತು. ಕೇಂದ್ರದ ಈ ಯೋಜನೆಯು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಕುಟುಂಬಗಳಿಗೆ ಸಹಾಯ ಮಾಡುತ್ತದೆ.
ಮೇ 21ರಂದು ಸರಣಿ ಘೋಷಣೆಯನ್ನು ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 9 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್ಗೆ (12 ಸಿಲಿಂಡರ್ಗಳವರೆಗೆ) 200 ರೂಪಾಯಿ ಸಬ್ಸಿಡಿಯನ್ನು ನೀಡುತ್ತೇವೆ. ಇದು ನಮ್ಮ ದೇಶದ ಎಲ್ಲಾ ತಾಯಂದಿರು ಹಾಗೂ ಸಹೋದರಿಯರಿಗೆ ನೆರವಾಗಲಿದೆ. ಇದು ವರ್ಷಕ್ಕೆ 6100 ಕೋಟಿ ರೂಪಾಯಿಗಳ ಆದಾಯದ ಪ್ರಭಾವವನ್ನು ಹೊಂದಿರುತ್ತದೆ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕದ ಆರ್ಥಿಕ ಪರಿಣಾಮಗಳಿಂದಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು 2020ರ ಜೂನ್ನಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ನಿರ್ಮಲಾ ಸೀತಾರಾಮನ್ ಈ ಘೋಷಣೆ ಮಾಡಿದ ಬಳಿಕ ಶ್ರೀ ಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಸ್ತುತ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಎಷ್ಟು?
ಕಳೆದ ಕೆಲವು ತಿಂಗಳಿಂದ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆ ಏರಿಕೆ ಕಾಣುತ್ತಲೇ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 1003 ರೂಪಾಯಿ ನಿಗದಿಯಾಗಿದೆ. ಇದೀಗ ಕೇಂದ್ರ ಘೋಷಣೆಯ ಬಳಿಕ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಪ್ರತಿ ಸಿಲಿಂಡರ್ಗೆ 200 ರೂಪಾಯಿ ಸಿಲಿಂಡರ್ ಸಬ್ಸಿಡಿ ಸಿಗಲಿದೆ. ಈ ಸಬ್ಸಿಡಿಯ ಬಳಿಕ ಎಲ್ಪಿಜಿ ಸಿಲಿಂಡರ್ಗೆ 803 ರೂಪಾಯಿ ಆಗಲಿದೆ.
ಇದನ್ನು ಓದಿ : acid attack victim : ಆ್ಯಸಿಡ್ ಸಂತ್ರಸ್ತೆಗೆ 5ನೇ ಶಸ್ತ್ರಚಿಕಿತ್ಸೆ: ಅನಾರೋಗ್ಯಕ್ಕೊಳಗಾದ ಯುವತಿ ಐಸಿಯುಗೆ ಶಿಫ್ಟ್
ಇದನ್ನೂ ಓದಿ : ಕುಂದಾಪುರ ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸಾವಿನ ಹಿಂದೆ ಲವ್ ಜಿಹಾದ್ ಆರೋಪ
Eligibility For LPG Cylinder Subsidy Changes. Check New Rules Here
Comments are closed.