ಸೋಮವಾರ, ಏಪ್ರಿಲ್ 28, 2025
Homeನಮ್ಮ ಬೆಂಗಳೂರುರಸ್ತೆಗಿಳಿಯಲಿದೆ ವಿಶೇಷಚೇತನ ಸ್ನೇಹಿ ಬಸ್ : ಹೊಸ ಪ್ರಯೋಗಕ್ಕೆ ಸಜ್ಜಾದ ಬಿಎಂಟಿಸಿ

ರಸ್ತೆಗಿಳಿಯಲಿದೆ ವಿಶೇಷಚೇತನ ಸ್ನೇಹಿ ಬಸ್ : ಹೊಸ ಪ್ರಯೋಗಕ್ಕೆ ಸಜ್ಜಾದ ಬಿಎಂಟಿಸಿ

- Advertisement -

ಬೆಂಗಳೂರು : ಸಿಲಿಕಾನ್ ಸಿಟಿ ಜನರ ಜೀವನಾಡಿ ಬಿಎಂಟಿಸಿ (BMTC BUS). ಆದರೆ ಉದ್ಯೋಗ ಸೇರಿದಂತೆ ಹಲವು ಕಾರಣಕ್ಕೆ ಮನೆಯಿಂದ ಹೊರ ಬರೋ ವಿಶೇಷ ಚೇತನರಿಗೆ (handicapped) ಸಂಚಾರಕ್ಕೆ ಬಿಎಂಟಿಸಿ ಬಸ್ ಬಳಸೋದು ಅನಿವಾರ್ಯವಾಗಿದ್ದರೂ ಬಸ್ ಅವರಿಗೆ ಸ್ನೇಹಿಯಾಗಿರಲಿಲ್ಲ. ಎತ್ತರದ ಮೆಟ್ಟಿಲಿನಿಂದ ಬಸ್ ಹತ್ತೋದೇ ಸವಾಲಿನ ಕೆಲಸವಾಗಿತ್ತು. ಆದರೆ ಈಗ ಬಿಎಂಟಿಸಿ ವಿಶೇಷ ಚೇತನರಿಗಾಗಿಯೇ ಹೊಸ ಪ್ರಯೋಗಕ್ಕೆ ಮುಂದಾಗಿದೆ. ವಿಶೇಷಚೇತನರು ಇನ್ಮುಂದೆ ಬಿಎಂಟಿಸಿ ಬಸ್ ಗಳಲ್ಲಿ ಯಾರ ಸಹಾಯವಿಲ್ಲದೇ ಓಡಾಡಬಹುದಂತ ಹೊಸ ಅವಿಷ್ಕಾರದ ಬಸ್ ಖರೀದಿಗೆ ಬಿಎಂಟಿಸಿ ಮುಂದಾಗುತಿದೆ.

ಬಿಎಂಟಿಸಿ ಬಸ್ ಗಳಲ್ಲಿ(BMTC BUS) ವಿಶೇಷಚೇತನರ (handicapped) ಸಂಚಾರಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲ ಅಂತಾ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಇದರ ಜೊತೆಗೆ ಹಲವು ಬಾರಿ ಕೆಲವು ವಿಕಲಚೇತನರು ಸಹ ಬಿಎಂಟಿಸಿ ಹತ್ತುವಾಗ ಇಳಿಯುವಾಗ ಸಮಸ್ಯೆ ಎದುರಿಸುತ್ತಿರುವ ಸಂಗತಿಗಳು ಸುದ್ದಿಯಾಗಿದ್ದವು.

ಈ ಎಲ್ಲಾ ಸಮಸ್ಯೆಗಳ ಬಳಿಕ ಈಗ ವಿಕಲ ಚೇತನರ ಸ್ನೇಹಿ ವ್ಯವಸ್ಥೆ ರೂಪಿಸಲು ಮುಂದಾಗಿರೋ ಬಿಎಂಟಿಸಿ (BMTC BUS)ವಿಶೇಷ ಚೇತನರಿಗೆ (handicapped) ಪ್ರಯಾಣವನ್ನು ಸುಲಭವಾಗಿಸಲು ವ್ಹೀಲ್ ಚೇರ್ ಲಿಫ್ಟಿಂಗ್ ಸೌಲಭ್ಯವುಳ್ಳ 300 ಎಸಿ ರಹಿತ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲು ಮುಂದಾಗಿದೆ.

ಎಫ್‌ಎಎಂಇ ಎರಡನೇ ಯೋಜನೆಯಡಿ ಬಿಎಂಟಿಸಿ 300 (Non Ac) (BMTC BUS)ನಾನ್ ಎಸಿ 300 ಬಸ್ ಖರೀದಿಗೆ ಮುಂದಾಗಿದ್ದು, ಸದ್ಯದಲ್ಲೇ ಬಸ್‌ಗಳು ನಗರದ ರಸ್ತೆಗೆ ಇಳಿಯಲಿವೆ. ಈ ಬಸ್ ಗಳಲ್ಲಿ ವಿಶೇಷಚೇತನರು (handicapped) ಹತ್ತುವಾಗ ಮತ್ತು ಬಸ್ ನಿಂದ ಇಳಿಯುವ ವೇಳೆ ವೀಲ್ ಛೇರ್ ಲಿಫ್ಟಿಂಗ್ ವ್ಯವಸ್ಥೆಗಳಿರಲಿದ್ದು ವಿಶೇಷ ಚೇತನರಿಗೆ ಸಮಸ್ಯೆಯಾಗದಂತೆ ಪ್ರಯಾಣಿಸಬಹುದಾದ ವ್ಯವಸ್ಥೆ ಮಾಡುವ ಉತ್ಸಹದಲ್ಲಿದೆ ಬಿಎಂಟಿಸಿ.

ಇನ್ನೂ ಈ ಬಸ್‌ಗಳಲ್ಲಿನ ವ್ಹೀಲ್ ಚೇರ್ ಲಿಫ್ಟಿಂಗ್ ವ್ಯವಸ್ಥೆಯ ನಿರ್ವಹಣೆಯನ್ನು ಬಿಎಂಟಿಸಿ (BMTC BUS)ಸಿಬ್ಬಂದಿಯೇ ನಿರ್ವಹಿಸಲಿದ್ದಾರೆ. ಮುಂಬರುವ ಎರಡು ಮೂರು ತಿಂಗಳಲ್ಲಿ ಈ ಬಸ್ ಗಳು ಸಾರ್ವಜನಿಕರ ಬಳಕೆಗೆ ಬರುವ ಸಾಧ್ಯತೆ ಇದ್ದು, ಜೊತೆಗೆ ಬಸ್ ಗಳ ಬಂದ ಬಳಿಕ ಬೇಡಿಕೆಗನುಗುಣವಾಗಿ ರೂಟ್ ಗಳನ್ನ ಸಿದ್ದಪಡಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.

ಇದನ್ನೂ ಓದಿ :ಸಮಿತಿ ವಿಸರ್ಜನೆಯಾದ್ರೂ‌ ನಿಂತಿಲ್ಲ ಪಠ್ಯಕ್ರಮ ವಿವಾದ: ಪರಿಷ್ಕರಣೆ ಹಿಂಪಡೆಯಲು ಟ್ವೀಟ್ ಅಭಿಯಾನ

ಇದನ್ನೂ ಓದಿ : ಶಾಲೆಗಳಲ್ಲಿ ಮತ್ತೆ ಕೊರೊನಾ ಸ್ಪೋಟ : ಬೆಂಗಳೂರಿನ 2 ಶಾಲೆಯ 31 ಮಕ್ಕಳಿಗೆ ಕೊರೊನಾ ಸೋಂಕು

ಒಂದೊಮ್ಮೆ ಈ ವ್ಯವಸ್ಥೆ ಜಾರಿಗೆ ಬಂದ್ರೇ ವಿಶೇಷ ಚೇತನರು (handicapped) ಉದ್ಯೋಗ ಸೇರಿದಂತೆ ಇತರ ಕೆಲಸಗಳಿಗಾಗಿ ಓಡಾಡಲು ಸುಲಭವಾಗಲಿದೆ. ಅಲ್ಲದೇ ದುಬಾರಿ ಅಟೋ, ಓಲಾ, ಊಬರ್ ಗಳಿಗೆ ಹಣ ಸುರಿಯೋದು ಕೂಡ ತಪ್ಪಲಿದೆ. ಆದರೆ ಈಗಾಗಲೇ ಹಲವು ಜನಸ್ನೇಹಿ ಯೋಜನೆ ಆರಂಭಿಸಿ ಸೂಕ್ತ ನಿರ್ವಹಣೆ ಇಲ್ಲದೇ ಹಾಳುಗೆಡವಿದೆ. ಹೀಗಾಗಿ ಇದನ್ನಾದರೂ ಸೂಕ್ತವಾಗಿ ಜಾರಿಗೆ ತರಲಿದ್ಯಾ ಅನ್ನೋದು ಸದ್ಯದ ಕುತೂಹಲ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular