ಭೋಪಾಲ್ : ಕೊರೊನಾ ಹಿನ್ನೆಲೆಯಲ್ಲಿ ಕಳೆದ 23 ದಿನಗಳಿಂದಲೂ ಲಾಕ್ ಡೌನ್ ಆದೇ ಜಾರಿಯಲ್ಲಿದೆ. ಮದ್ಯದ ಅಂಗಡಿಗಳಿಗೆ ಬೀಗ ಜಡಿಯಲಾಗಿದೆ. ಇದ್ರಿಂದಾಗಿ ಮದ್ಯಪ್ರಿಯರು ಕಂಗೆಟ್ಟು ಹೋಗಿದ್ದಾರೆ. ಇಲ್ಲೊಬ್ಬ ಕುಡುಕ ಬಿಯರ್ ಬಾಟಲಿಯಲ್ಲಿದ್ದ ಆಸಿಡ್ ಕುಡಿದು ಸಾವನ್ನಪ್ಪಿದ್ದಾನೆ.

ಅಷ್ಟಕ್ಕೂ ಈ ಘಟನೆ ನಡೆದಿರೋ ಮದ್ಯಪ್ರದೇಶದ ಭೋಪಾಲ್ ನಲ್ಲಿ. ಸುರೇಶ್ ಸಜಲ್ಕರ್ ಎಂಬಾತನೇ ಆಸಿಡ್ ಕುಡಿದು ಮೃತಪಟ್ಟಿರುವ ವ್ಯಕ್ತಿ. ದೇಶದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮದ್ಯ ಮಾರಾಟ ನಿಷೇಧ ಮಾಡಿವೆ.

ಈ ಹಿನ್ನೆಲೆಯಲ್ಲಿ ಹತಾಶೆಗೊಂಡು ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೀಗ ಸುರೇಶ್ ಸಜಲ್ಕರ್ ಎಂಬಾತ ಬಿಯರ್ ತುಂಬಿದ್ದ ಬಿಯರ್ ಬಾಟಲಿಯನ್ನು ನೋಡಿದ್ದಾರೆ.

ಬಾಟಲಿಯಲ್ಲಿರೋದು ಬಿಯರ್ ಅಂತಾ ಖುಷಿಯಿಂದ ಬಾಟಲಿಯಲ್ಲಿದ್ದ ಆಸಿಡ್ ಸೇವನೆ ಮಾಡಿದ್ದಾನೆ. ಇದರಿಂದಾಗಿ ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸೋ ಪ್ರಯತ್ನ ಮಾಡಲಾಯಿತು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಮೃತಪಟ್ಟಿದ್ದಾನೆ. ಈ ಕುರಿತು ಟಿಟಿನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.