ಸ್ಯಾಂಡಲ್ ವುಡ್ ಸೇರಿದಂತೆ ಸಿನಿಮಾ ರಂಗದಲ್ಲಿ ಕೆಜಿಎಫ್-೨ ನಷ್ಟೇ ಸುದ್ದಿ ಮಾಡ್ತಿರೋ ಇನ್ನೊಂದು ಸಂಗತಿ ಹೊಂಬಾಳೆ ಫಿಲ್ಮ್ಸ್. ಸಾಲು ಸಾಲು ನಟರ ಜೊತೆ ಸಿನಿಮಾ ಘೋಷಿಸುತ್ತಿರುವ ಹೊಂಬಾಳೆ ಈಗಾಗಲೇ ಕನ್ನಡದ ಜೊತೆಗೆ ತೆಲುಗು,ತಮಿಳು ಹಾಗೂ ಮಲೆಯಾಳಂನಲ್ಲೂ ಸಿನಿಮಾ ಘೋಷಿಸಿದೆ. ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಂಗದೂರು ಇತ್ತೀಚಿಗೆ ಫೆಮಿನಾ ಮಿಸ್ ಇಂಡಿಯಾ ಹಾಗೂ ಬಾಲಿವುಡ್ ನಟಿ ಮಾನುಷಿ ಚಿಲ್ಲರ್ (Manushi Chhillar) ರನ್ನು ಭೇಟಿ ಮಾಡಿದ್ದು, ಕೆಜಿಎಫ್-3 (KGF-3)ಗೆ ಹಿರೋಯಿನ್ ಯಾರು ಎಂಬ ಪ್ರಶ್ನೆಗೆ ಈ ಭೇಟಿ ಉತ್ತರ ಎಂದು ಅರ್ಥೈಸಲಾಗುತ್ತಿದೆ.
2017 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆಗಿ ಆಯ್ಕೆಯಾದ ನೀಳಕಾಯದ ಸುಂದರಿ ಮಾನುಷಿ ಚಿಲ್ಲರ್ 2017 ರಲ್ಲೇ ಮಿಸ್ ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡರು. ಅಲ್ಲಿಯವರೆಗೂ ಮಾಡೆಲಿಂಗ್ ಹಾಗೂ ಸೋಷಿಯಲ್ ಸರ್ವಿಸ್ ನಲ್ಲಿ ಹೆಸರು ಮಾಡಿದ್ದ ಮಾನುಷಿ ಈಗ ಸಾಮ್ರಾಟದ ಪ್ರಥ್ವಿರಾಜ್ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ.
ಇಂತಿಪ್ಪ ಮಾನುಷಿ ಚಿಲ್ಲರ್ ಅವರನ್ನು ನಿರ್ಮಾಪಕ ವಿಜಯ್ ಕಿರಂಗದೂರು ತಮ್ಮ ಹೊಂಬಾಳೆ ಕಚೇರಿಯಲ್ಲೇ ಭೇಟಿ ಮಾಡಿದ್ದಾರೆ. ಅಲ್ಲದೇ ಈ ವಿಚಾರವನ್ನು ಸ್ವತಃ ಹೊಂಬಾಳೆ ಫಿಲ್ಮ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಆದರೆ ಮಾನುಷಿ ಚಿಲ್ಲರ ಈ ಭೇಟಿ ಹಿಂದಿನ ಸತ್ಯವೇನು ಎಂಬುದು ಇನ್ನಷ್ಟೇ ಬಯಲಾಗಬೇಕಿದೆ. ಹೊಂಬಾಳೆ ಫಿಲ್ಮ್ಸ್ ಬಾಲಿವುಡ್ ಸಿನಿಮಾಗೆ ಎಂಟ್ರಿಕೊಡಲಿದೆ ಎಂದು ಹೇಳಲಾಗಿತ್ತು.ಹೀಗಾಗಿ ಮಾನುಷಿ ಚಿಲ್ಲರ್ ರನ್ನು ಹೊಂಬಾಳೆ ಮೂವಿಸ್ ಬಾಲಿವುಡ್ ಸಿನಿಮಾಗಾಗಿ ಸಂಪರ್ಕಿಸಿದೆಯೋ ಅಥವಾ ಕೆಜಿಎಫ್-೩ ಹಿರೋಯಿನ್ ಸ್ಥಾನಕ್ಕಾಗಿ ಮಾತುಕತೆ ನಡೆದಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೆಜಿಎಫ್ ಮತ್ತು ಕೆಜಿಎಫ್-2 ಎರಡೂ ಸಿನಿಮಾದಲ್ಲೂ ಬಾಲಿವುಡ್ ನಂಟಿತ್ತು. ಮೊದಲ ಸಿನಿಮಾದಲ್ಲಿ ಬಾಲಿವುಡ್ ನಟಿ ಮೌನಿ ರಾಯ್ ಗಲಿ ಗಲಿ ಎಂದು ಕುಣಿದಿದ್ದರೇ, ಎರಡನೇ ಸಿನಿಮಾ ಅಂದ್ರೇ ಕೆಜಿಎಫ್-2 ದಲ್ಲಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಈಗ ಕೆಜಿಎಫ್-3 ಗಾಗಿ ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಕನ್ನಡಕ್ಕೆ ಬರ್ತಾರಾ ? ಅದೇ ಮಾತುಕತೆಗಾಗಿ ವಿಜಯ್ ಮಾನುಷಿಯವರನ್ನು ಭೇಟಿ ಮಾಡಿದ್ದಾರಾ ಎಂಬ ಅನುಮಾನ ಮೂಡಿದೆ.
A quick Rendezvous with our Miss World @ManushiChhillar at @Hombalefilms office, Bangalore.@VKiragandur pic.twitter.com/FdhJeSmgy3
— Hombale Films (@hombalefilms) June 24, 2022
ಇದನ್ನೂ ಓದಿ : Actress Pooja Hegde : ಭೀಸ್ಟ್ ಸಿನಿಮಾ ಸೋಲಿನ ಬೆನ್ನಲ್ಲೇ ನಟಿ ಪೂಜಾ ಹೆಗ್ಡೆಗೆ ಶಾಕ್ : ಸಹಾಯಕರ ವೆಚ್ಚ ವಾಪಾಸ್ ಮಾಡಿ ಎಂದ ನಿರ್ಮಾಪಕ
ಇದನ್ನೂ ಓದಿ : Book My Show ಆ್ಯಪ್ ಗೆ ಬಿತ್ತು ಬ್ರೇಕ್ : ಟಿಕೇಟ್ ಬುಕ್ಕಿಂಗ್ ಬರಲಿದೆ ಗೌರ್ಮೆಂಟ್ ಆ್ಯಪ್
Miss World Manushi Chhillar is the heroine of Rocking Star Yash KGF-3