Alia Bhatt : ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ರಣಬೀರ್ ಕಪೂರ್ ಜೊತೆಯಲ್ಲಿ ಇರುವ ಆಸ್ಪತ್ರೆಯ ಫೋಟೋವನ್ನು ಶೇರ್ ಮಾಡಿರುವ ನಟಿ ಆಲಿಯಾ ಭಟ್ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟಿ ಆಲಿಯಾ ಭಟ್ ಎರಡು ಸಿಂಹಗಳು ಮರಿಯೊಂದಿಗೆ ಆಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ನಟಿ ಆಲಿಯಾ ಭಟ್ ನಮ್ಮ ಮಗು ಶೀಘ್ರದಲ್ಲಿಯೇ ಆಗಮಿಸುತ್ತಿದೆ ಎಂದು ಶೀರ್ಷಿಕೆ ನೀಡಿದ್ದಾರೆ.
ಆಲಿಯಾ ಭಟ್ ತಮ್ಮ ಪ್ರೆಗ್ನೆನ್ಸಿ ಅನೌನ್ಸ್ ಮಾಡುತ್ತಿದ್ದಂತೆಯೇ ಬಾಲಿವುಡ್ನ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಸಂದೇಶ ಹರಿದು ಬಂದಿದೆ. ರಣಬೀರ್ ಕಪೂರ್ ಸಹೋದರಿ ರಿಧಿಮಾ ಕಪೂರ್ ಕೂಡ ಈ ಸಿಹಿ ಸುದ್ದಿಯನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು ನನ್ನ ಮಕ್ಕಳಿಗೆ ಮಗುವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇದೇ ವರ್ಷ ಏಪ್ರಿಲ್ 14ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮುಂಬೈನಲ್ಲಿರುವ ರಣಬೀರ್ ಕಪೂರ್ ನಿವಾಸದಲ್ಲಿ ಈ ಜೋಡಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯದ ಬೆಸುಗೆ ಬೆಸೆದಿತ್ತು. ಕೆಲವು ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದ ನಟ ರಣಬೀರ್ ಕಪೂರ್. ಈ ವರ್ಷ ನನ್ನ ಪಾಲಿಗೆ ಶ್ರೇಷ್ಠವಾದ ವರ್ಷವಾಗಿದೆ , ನನ್ನ ಜೀವನದಲ್ಲಿ ಅತ್ಯಂತ ಸುಂದರವಾದ ಕ್ಷಣವು ಘಟಿಸಿದೆ ಎಂದು ಹೇಳಿದ್ದರು.
ಮದುವೆ ಎಂದರೆ 50 ವರ್ಷಗಳ ಕಾಲ ಅಥವಾ ನಾವು ಸಾಯುವವರೆ ಅನ್ನ ಸಾಂಬಾರು ತಿಂದಂತೆ ಎಂದು ನಾನೇ ಸಿನಿಮಾದ ಡೈಲಾಗ್ ಒಂದನ್ನು ಹೇಳಿದ್ದೆ. ಜೀವನದಲ್ಲಿ ಕಬಾಬ್, ಹಕ್ಕಾ ನ್ಯೂಡಲ್ಸ್ನಂತಹ ಫ್ಲೇವರ್ಸ್ ಇರಬೇಕು ಎಂದು ನಾನೇ ಹೇಳಿದ್ದೆ. ಆದರೆ ನನ್ನ ಜೀವನದ ಮದುವೆ ಅನುಭವವನ್ನು ಹೇಳಬೇಕು ಅಂದರೆ ಅನ್ನ ಸಾಂಬಾರಿಗಿಂತ ಒಳ್ಳೆಯ ಅಡುಗೆ ಇನ್ನೊಂದಿಲ್ಲ. ನನ್ನ ಪತ್ನಿ ಆಲಿಯಾ ಯಾವತ್ತಿಗೂ ಬೆಸ್ಟ್ .ನನ್ನ ಜೀವನವೆಂಬ ಅನ್ನ ಸಾಂಬಾರಿನಲ್ಲಿ ಎಲ್ಲ ರೀತಿಯ ಮಸಾಲೆಗಳೂ ಇವೆ.ಇದಕ್ಕಿಂತ ಬೆಸ್ಟ್ ಸಂಗಾತಿ ನನಗೆ ಸಿಗಲಿಕ್ಕಿಲ್ಲ ಎಂದು ಹೇಳಿದ್ದರು.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೊತೆಯಾಗಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಇದೇ ಸೆಪ್ಟೆಂಬರ್ನಲ್ಲಿ ತೆರೆ ಕಾಣಲಿದೆ. ಸಧ್ಯ ಆಲಿಯಾ ಕೈಯಲ್ಲಿ ಡಾರ್ಲಿಂಗ್ಸ್ ಹಾಗೂ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸೇರಿದಂತೆ ಹಲವಾರು ಸಿನಿಮಾಗಳಿವೆ.
ಇದನ್ನು ಓದಿ : ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !
Alia Bhatt, Ranbir Kapoor announce pregnancy, share photo from the hospital: ‘Baby coming soon’