ಉಡುಪಿ : Roshan’s dead body found : ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮರವಂತೆ ಬೀಚ್ ಬಳಿಯಲ್ಲಿ ಕಡಲಿಗೆ ಬಿದ್ದ ಪರಿಣಾಮ ಮೃತಪಟ್ಟವರಲ್ಲಿ ರೋಷನ್ ಎಂಬವರ ಮೃತದೇಹ ಇಂದು ಪತ್ತೆಯಾಗಿದೆ. ಶನಿವಾರ ತಡರಾತ್ರಿ 12 ಗಂಟೆ ಸುಮಾರಿಗೆ ಮರವಂತೆ ಬೀಚ್ಗೆ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಬಿದ್ದಿತ್ತು. ಭೀಕರ ಅಪಘಾತದಲ್ಲಿ ಕುಂದಾಪುರ ತಾಲೂಕಿನ ಬಿಜಾಡಿ ಮೂಲದ ವಿರಾಜ್ ಆಚಾರ್ ಬೀಜಾಡಿ ಹಾಗೂ ರೋಷನ್ ಸೇರಿದಂತೆ ಇನ್ನೂ ಇಬ್ಬರು ಪ್ರಯಾಣಿಸುತ್ತಿದ್ದರು. ಘಟನೆ ನಡೆದ ದಿನವೇ ವಿರಾಜ್ ಆಚಾರ್ ಬೀಜಾಡಿ ಮೃತದೇಹ ಪತ್ತೆಯಾಗಿತ್ತು. ನಾಪತ್ತೆಯಾಗಿದ್ದ ರೋಷನ್ಗಾಗಿ ಹುಡುಕಾಟ ನಡೆಸಲಾಗಿತ್ತು.
ಶನಿವಾರ ಮಧ್ಯರಾತ್ರಿ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ನಾಲ್ವರು ಸ್ನೇಹಿತರು ಕುಂದಾಪುರದಿಂದ ಮರವಂತೆ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಮರವಂತೆ ಬೀಚ್ನಲ್ಲಿ ಕಾರು ನಿಯಂತ್ರಣ ಕಳೆದುಕೊಂಡ ಪರಿಣಾಮ ಕಡಲಿಗೆ ಕಾರು ಹಾರಿತ್ತು. ಅಪಘಾತದ ತೀವ್ರತೆಗೆ ಕೆಂಪು ಬಣ್ಣದ ಕಾರು ಸಂಪೂರ್ಣ ಛಿದ್ರ ಛಿದ್ರಗೊಂಡಿತ್ತು. ಮೃತ ವಿರಾಜ್ ಆಚಾರ್ ಬೀಜಾಡಿ ಸೀಟ್ಬೆಲ್ಟ್ ಧರಿಸಿದ್ದರಿಂದ ಅವರ ಮೃತದೇಹ ಕಾರಿನಲ್ಲಿಯೇ ಪತ್ತೆಯಾಗಿತ್ತು. ಕಾರಿನಲ್ಲಿದ್ದ ಕಾರ್ತಿಕ್ ಹಾಗೂ ಸಂದೀಪ್ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂದು ಅಲೆಗಳ ಹೊಡೆತಕ್ಕೆ ರೋಷನ್ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ನಾಪತ್ತೆಯಾಗಿದ್ದ ರೋಶನ್ ಆಚಾರ್ಯ ಮೃತದೇಹ ಕಂಚುಗೋಡು ಮೃತದೇಹ ಹೊಸಾಡು ಬಳಿಕ ಕಂಚುಗೋಡು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Leena Manimekalai : ಸಿಗರೇಟ್ ಸೇದಿದಂತೆ ಕಾಳಿ ಮಾತೆಯನ್ನು ಚಿತ್ರಿಸಿದ ನಿರ್ಮಾಪಕಿ : ನೆಟ್ಟಿಗರಿಂದ ವ್ಯಾಪಕ ಆಕ್ರೋಶ
ಇದನ್ನೂ ಓದಿ : Himachal Pradesh : ಭೀಕರ ಬಸ್ ಅಪಘಾತ : ಶಾಲಾ ಮಕ್ಕಳು ಸೇರಿದಂತೆ 16 ಮಂದಿ ದುರ್ಮರಣ
ಇದನ್ನು ಓದಿ : Cruiser Accident 7 dies : ಕ್ರೂಸರ್ ಪಲ್ಟಿ 7 ಜನರು ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ
ಇದನ್ನೂ ಓದಿ :Rohit Sharma batting practice : ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವ 500 ಮೀ. ದೂರದಲ್ಲೇ ರೋಹಿತ್ ಬ್ಯಾಟಿಂಗ್ ಅಭ್ಯಾಸ
Car that fell into the sea: Roshan’s dead body found