ಮಂಗಳವಾರ, ಜೂನ್ 17, 2025
HomeWorldRishi Sunak : ಇನ್ಫೋಸಿಸ್​ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ ಬ್ರಿಟನ್​ನ ಮುಂದಿನ ಪ್ರಧಾನಿ ಸಾಧ್ಯತೆ

Rishi Sunak : ಇನ್ಫೋಸಿಸ್​ ಮುಖ್ಯಸ್ಥ ನಾರಾಯಣ ಮೂರ್ತಿ ಅಳಿಯ ಬ್ರಿಟನ್​ನ ಮುಂದಿನ ಪ್ರಧಾನಿ ಸಾಧ್ಯತೆ

- Advertisement -

rishi sunak : ಬ್ರಿಟನ್​​ನ ಸಂಪುಟದಲ್ಲಿರುವ ಪ್ರತಿನಿಧಿಗಳು ಬಂಡಾಯವೆದ್ದ ಪರಿಣಾಮ ಬೋರಿಸ್​ ಜಾನ್ಸನ್​ ತಮ್ಮ ಪ್ರಧಾನಿ ಪಟ್ಟವನ್ನು ಕಳೆದುಕೊಂಡಿದ್ದಾರೆ. ಆಡಳಿತಾರೂಢ ಕನ್ಸರ್ವೇಟಿವ್​ ಪಾರ್ಟಿಯ ಸಂಸದರ ಬಂಡಾಯದ ಎದುರು ಸೋತ ಬೋರಿಸ್​ ಜಾನ್ಸನ್​ ಪ್ರಧಾನಿ ಸ್ಥಾನಕ್ಕೆ ಇಂದು ರಾಜೀನಾಮೆಯನ್ನು ಘೋಷಿಸಿದ್ದಾರೆ. ಸಚಿವರು ಒಬ್ಬರಾದ ಮೇಲೆ ಒಬ್ಬರಂತೆ ರಾಜೀನಾಮೆ ನೀಡುತ್ತಿದ್ದಂತೆಯೇ ಬೋರಿಸ್​ ಜಾನ್ಸನ್​ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ.

ಬ್ರಿಟನ್​​ ಸಂಪುಟದಲ್ಲಿ ಹಣಕಾಸು ಸಚಿವನಾಗಿದ್ದ ಭಾರತೀಯ ಮೂಲದ ರಿಷಿ ಸುನಕ್​ ಕೋವಿಡ್​ನಂತಹ ಕಠಿಣ ಸಂದರ್ಭದಲ್ಲಿ ಆರ್ಥಿಕತೆ ವಿಚಾರದಲ್ಲಿ ತಾವು ಕೈಗೊಂಡ ಕೆಲವು ದಿಟ್ಟ ನಿರ್ಧಾರಗಳ ಮೂಲಕ ವಿಶ್ವಾದ್ಯಂತ ಸುದ್ದಿಯಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ರಿಷಿ ಸುನಕ್​ ಬ್ರಿಟನ್​​ನ ಹಣಕಾಸು ಸಚಿವನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಬ್ರಿಟನ್​ನ ಪ್ರಧಾನಿ ರೇಸ್​ನಲ್ಲಿ ಭಾರತೀಯ ಮೂಲದ ರಿಷಿ ಸುನಕ್​​ ಹೆಸರು ಕೂಡ ಮುಂಚೂಣಿಯಲ್ಲಿ ಸ್ಥಾನ ಪಡೆದಿದೆ. ಅಂದಹಾಗೆ ಭಾರತೀಯ ಮೂಲದ ರಿಷಿ ಸುನಕ್ ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯರಾಗಿದ್ದಾರೆ .

ಅನೇಕ ಹಗರಣಗಳು ಹಾಗೂ ಕೋವಿಡ್​ ನಿಯಮಗಳ ಉಲ್ಲಂಘನೆ ಮಾಡಿ ಔತಣಕೂಟಗಳನ್ನು ಆಯೋಜಿಸುವ ಮೂಲಕ ಬೋರಿಸ್​ ಜಾನ್ಸನ್​​ ಕಾನೂನನ್ನು ಉಲ್ಲಂಃಘಿಸಿದ್ದರು. ಮೊದ ಮೊದಲು ಯಾವುದೇ ಆಪಾದನೆಗಳಿಗೆ ತಲೆ ಕೆಡಿಸಿಕೊಳ್ಳದ ಬೋರಿಸ್​ ಜಾನ್ಸನ್​ ಪ್ರಧಾನಿ ಕುರ್ಚಿಯಲ್ಲಿ ಬಲವಾಗಿ ಕುಳಿತುಕೊಳ್ಳುವ ಇಂಗಿತವನ್ನೇ ಹೊಂದಿದ್ದರು. ಆದರೆ ಆಡಳಿತಾರೂಢ ಕನ್ಸರ್ವೇಟಿವ್​ ಪಾರ್ಟಿಯ ಅನೇಕ ಸಂಸದರು ಬೋರಿಸ್​ ಜಾನ್ಸನ್​ ವಿರುದ್ಧ ಬಂಡಾಯ ಸೂಚಿಸುವ ಸಲುವಾಗಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಸಂಸದರ ಈ ನಡೆ ಬಳಿಕ ಬೋರಿಸ್​ ಜಾನ್ಸನ್​ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿ ಸಂಭವಿಸಿತ್ತು.

ಇದನ್ನು ಓದಿ : MS Dhoni 41st birthday : ಎಂಎಸ್ ಧೋನಿಗೆ 41ನೇ ಹುಟ್ಟುಹಬ್ಬ: ವಿಶೇಷ ಗಿಫ್ಟ್‌ ಕೊಟ್ಟ ಪತ್ನಿ ಸಾಕ್ಷಿ, ರಿಷಬ್ ಪಂತ್

ಇದನ್ನೂ ಓದಿ : Holiday announcement : ಭಾರೀ ಮಳೆ ಹಿನ್ನೆಲೆ ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ 2 ದಿನ ರಜೆ ಘೋಷಣೆ

ಇದನ್ನೂ ಓದಿ : Hair Oil For Strong Hair : ಕೂದಲಿನ ಆರೋಗ್ಯವನ್ನು ಹೆಚ್ಚಿಸುವ ತೈಲಗಳು ; ಈ ತೈಲಗಳನ್ನು ಹಚ್ಚಿ ಕೂದಲ ಸಮಸ್ಯೆಗೆ ಗುಡ್ ಬೈ ಹೇಳಿ

indian origin rishi sunak among leaders in race to be next uk pm

RELATED ARTICLES

Most Popular