ಬುಧವಾರ, ಜೂನ್ 18, 2025
HomeNationalAmarnath cloudburst : ಅಮರನಾಥ ಗುಹೆಯ ಬಳಿ ಮೇಘಸ್ಫೋಟ : ಇಬ್ಬರ ಮೃತದೇಹ ಪತ್ತೆ

Amarnath cloudburst : ಅಮರನಾಥ ಗುಹೆಯ ಬಳಿ ಮೇಘಸ್ಫೋಟ : ಇಬ್ಬರ ಮೃತದೇಹ ಪತ್ತೆ

- Advertisement -

ಜಮ್ಮು & ಕಾಶ್ಮೀರ : Amarnath cloudburst : ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥ ಪವಿತ್ರ ಗುಹೆಯ ಬೇಸ್​ ಕ್ಯಾಂಪ್​ ಬಳಿಯಲ್ಲಿ ಇಂದು ಮೇಘಸ್ಪೋಟ ಸಂಭವಿಸಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ರಕ್ಷಣಾ ಸಿಬ್ಬಂದಿ ಇಬ್ಬರು ಪ್ರವಾಸಿಗರ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. ಅಮರನಾಥ ಗುಹೆಯ ಕೆಳಭಾಗದಲ್ಲಿ ಸಂಜೆ 5:30ರ ಸುಮಾರಿಗೆ ಮೇಘ ಸ್ಫೋಟಕ್ಕೆ ಸಾಕ್ಷಿಯಾಗಿದೆ. ಘಟನೆಯಲ್ಲಿ ಐದಕ್ಕೂ ಅಧಿಕ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ.

ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಪ್ರವಾಸಿಗರ ರಕ್ಷಣಾ ಕಾರ್ಯಚರಣೆಯನ್ನು ಭರದಿಂದ ನಡೆಸುತ್ತಿವೆ ಎಂದು ಜಂಟಿ ಪೊಲೀಸ್​ ನಿಯಂತ್ರಣ ಕೊಠಡಿ ಪಹಲ್ಗಾಮ್​ನಿಂದ ಮಾಹಿತಿ ನೀಡಲಾಗಿದೆ. ಮೇಲ್ಭಾಗದಲ್ಲಿ ಭಾರೀ ಮಳೆ ಉಂಟಾದ ಹಿನ್ನೆಲೆಯಲ್ಲಿ ಗುಹೆಯ ಮೇಲಿನಿಂದ ನೀರು ಬಂದಿದೆ. ಸಧ್ಯಕ್ಕೆ ಈ ಭಾಗದಲ್ಲಿ ಮಳೆ ನಿಂತಿದೆ. ಮೇಘ ಸ್ಪೋಟದಿಂದಾಗಿ ಅಮರನಾಥ ದೇಗುಲದ ಲಂಗರ್​ಗಳು ಹಾಗೂ ಟೆಂಟ್​ಗಳು ಕೊಚ್ಚಿ ಹೋಗಿವೆ. ಗಾಯಾಳುಗಳನ್ನು ರಕ್ಷಣೆ ಮಾಡಲು ಹೆಲಿಕಾಪ್ಟರ್ ಕೂಡ ಆಗಮಿಸಿದೆ.


ಈ ಹಿಂದೆ ಬಾಲ್ಟಾಲ್​ ಹಾಗೂ ಪಹಲ್ಗಾಮ್ ಮಾರ್ಗಗಳೆರಡಲ್ಲಿಯೂ ಹವಾಮಾನ ವೈಪರಿತ್ಯದಿಂದಾಗಿ ಅಮರನಾಥ ಗುಹೆಯಲ್ಲಿ ಯಾತ್ರಾರ್ಥಿಗಳ ಆಗಮನಕ್ಕೆ ನಿರ್ಬಂಧ ಹೇರಲಾಗಿತ್ತು. ಯಾತ್ರಾರ್ಥಿಗಳಿಗೆ ಜಮ್ಮುವಿನ ಕಣಿವೆ ಭಾಗಗಳಿಗೆ ತೆರಳಲು ಸಹ ಅವಕಾಶವಿರಲಿಲ್ಲ. ಎರಡೂ ಮಾರ್ಗಗಳಲ್ಲಿ ಹವಾಮಾನ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಬುಧವಾರದಂದು ಒಂದು ದಿನ ಅಮರನಾಥಾ ಯಾತ್ರೆಗೆ ಅವಕಾಶ ನೀಡಲಾಗಿತ್ತು.

ಇದನ್ನು ಓದಿ : Mad Dog Bitten : ಕೋಟದಲ್ಲಿ ಹುಚ್ಚುನಾಯಿ ಭೀತಿ : ಹತ್ತಕ್ಕೂ ಅಧಿಕ ಮಂದಿಗೆ ಕಚ್ಚಿದ ನಾಯಿ

ಇದನ್ನು ಓದಿ : Sachin Vs Kohli 33 phobia: ಅಂದು ಸಚಿನ್, ಇಂದು ವಿರಾಟ್.. ಬ್ಯಾಟಿಂಗ್ ದಿಗ್ಗಜರಿಗೆ ‘33’ ಫೋಬಿಯಾ

ಇದನ್ನು ಓದಿ : ಲಂಡನ್‌ನಲ್ಲಿ ದಾದಾ 50ನೇ ಹುಟ್ಟುಹಬ್ಬದ “ಪ್ರೀ ಬರ್ತ್’ಡೇ ಸೆಲೆಬ್ರೇಷನ್”.. ಗಂಗೂಲಿಗೆ ಕೇಕ್ ತಿನ್ನಿಸಿದ ತೆಂಡೂಲ್ಕರ್

ಇದನ್ನೂ ಓದಿ : Exclusive : secret of Hardik Pandya’s Success : ಹಾರ್ದಿಕ್ ಪಾಂಡ್ಯ ಯಶೋಗಾಥೆಯ ಹಿಂದಿನ ಶಿಲ್ಪಿ ನಮ್ಮ ಕನ್ನಡಿಗ..!

Amarnath cloudburst LIVE : Two bodies recovered, rescue operation underway

RELATED ARTICLES

Most Popular