ಗುರುವಾರ, ಮೇ 8, 2025
Homedistrict Newshill collapsed on a house : ಗೃಹಪ್ರವೇಶಕ್ಕೆ ಆರು ದಿನ ಬಾಕಿ ಇದ್ದಾಗಲೇ ಅವಘಡ...

hill collapsed on a house : ಗೃಹಪ್ರವೇಶಕ್ಕೆ ಆರು ದಿನ ಬಾಕಿ ಇದ್ದಾಗಲೇ ಅವಘಡ : ಗುಡ್ಡ ಕುಸಿದು ಮನೆ ನೆಲಸಮ

- Advertisement -

ಮಂಗಳೂರು : hill collapsed on a house : ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತಾರೆ. ಯಾಕೆಂದರೆ ಇವರೆಡೂ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಹಲವಾರು ವರ್ಷಗಳಿಂದ ಕೂಡಿಟ್ಟ ಹಣ, ಅದು ಸಾಕಾಗಿಲ್ಲವೆಂದರೆ ಸಾಲ ಸೋಲ ಮಾಡಿ ಮನೆಯನ್ನು ಕಟ್ಟಬೇಕಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಲ್ಲತಡ್ಕ ಎಂಬ ಗ್ರಾಮದಲ್ಲಿ ಇನ್ನೇನು ಗೃಹ ಪ್ರವೇಶ ಮಾಡಬೇಕಿದ್ದ ಮನೆ ನೆಲಸಮಗೊಂಡಿದೆ. ಇದಕ್ಕೆ ಕಾರಣ ಕಳೆದೊಂದು ವಾರದಿಂದ ಕರಾವಳಿ ಜಿಲ್ಲೆಯಲ್ಲಿ ಉಂಟಾಗಿರುವ ರಣ ಭೀಕರ ಮಳೆ..!


ಹೌದು..! ತೇಜ್​ಕುಮಾರ್​ ಹಾಗೂ ತಾರಾಮತಿ ದಂಪತಿ ಎಂಬವರಿ ಸೇರಿದ ಮನೆ ಇದಾಗಿದ್ದು ಜುಲೈ 18ರಂದು ಮನೆಯ ಗೃಹ ಪ್ರವೇಶವನ್ನು ನೆರವೇರಿಸಲು ಎಲ್ಲಾ ರೀತಿಯ ತಯಾರಿ ನಡೆದಿತ್ತು. ಲಕ್ಷಾಂತರ ಹಣ ಖರ್ಚು ಮಾಡಿ ತಾರಾಮತಿ ಹಾಗೂ ತೇಜ್​ಕುಮಾರ್​ ದಂಪತಿ ಈ ಮನೆಯನ್ನು ನಿರ್ಮಾಣ ಮಾಡಿದ್ದರು.


ಮೂರು ದಿನಗಳ ಹಿಂದೆ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆದರೆ ಮನೆಯವರು​ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಬಿರುಕು ಬಿಟ್ಟಿರುವ ಗೋಡೆ ರಿಪೇರಿ ಕಾರ್ಯವನ್ನು ಮಾಡಿಸಿದ್ದರು. ಬಳಿಕ ಗೃಹ ಪ್ರವೇಶಕ್ಕೆ ತಯಾರಿ ಕೂಡ ನಡೆಯುತ್ತಿತ್ತು. ಸಂಜೆ 6:30ರ ಸುಮಾರಿಗೆ ಇದೇ ಮನೆಯಲ್ಲಿದ್ದ ಪ್ರಜ್ವಲ್​ ಹಾಗೂ ಉಜ್ವಲ್​ ಸಹೋದರರು ಆಗ ತಾನೆ ಮನೆಯಿಂದ ಹೊರಗೆ ಬಂದಿದ್ದರು. ಅಷ್ಟರಲ್ಲಿ ಗುಡ್ಡ ಕುಸಿದ ಪರಿಣಾಮ ಮನೆಯ ಮೂರು ಬೆಡ್​ ರೂಮ್​ಗಳ ತುಂಬಾ ಮಣ್ಣು ಆವರಿಸಿದೆ.


ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಮನೆ ನೆಲಸಮಾಗಿದ್ದು ಮಾತ್ರವಲ್ಲದೇ ಮಣ್ಣಿನೊಳಗೆ ಸಿಲುಕಿ ಮೂರು ಬೈಕ್​​ಗಳು ಹಾನಿಗೊಳಗಾಗಿದೆ. ಗುಡ್ಡ ಕುಸಿತದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.

ಕರಾವಳಿ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನು ಓದಿ : Indian women’s cricket team : ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಲಿದೆ ಭಾರತ ಮಹಿಳಾ ಕಿಕೆಟ್ ತಂಡ ; ಹರ್ಮನ್‌ಪ್ರೀತ್ ಕೌರ್ ಕ್ಯಾಪ್ಟನ್

ಇದನ್ನೂ ಓದಿ : Unidentified body found ಒತ್ತಿನೆಣೆಯಲ್ಲಿ ಅಪರಿಚಿತ ಶವ ಪತ್ತೆ : ಆತಂಕದಲ್ಲಿ ಸ್ಥಳೀಯ ನಿವಾಸಿಗಳು

A hill collapsed on a house that was ready for entry

RELATED ARTICLES

Most Popular