ಭಾನುವಾರ, ಏಪ್ರಿಲ್ 27, 2025
HomeCinemaSushmita Sen : ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜೊತೆ ಮಾಜಿ ಐಪಿಎಲ್ ಬಾಸ್ ಲಲಿತ್...

Sushmita Sen : ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜೊತೆ ಮಾಜಿ ಐಪಿಎಲ್ ಬಾಸ್ ಲಲಿತ್ ಮೋದಿ ಡೇಟಿಂಗ್

- Advertisement -

ಲಂಡನ್: ಲಲಿತ್ ಮೋದಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ? ಐಪಿಎಲ್ ಎಂಬ ಮಿಲಿಯನ್ ಡಾಲರ್ ಟೂರ್ನಿಯ ಸೂತ್ರಧಾರ ಈ ಲಲಿತ್ ಮೋದಿ. ದೇಶವನ್ನು ತೊರೆದು ಇಂಗ್ಲೆಂಡ್’ನಲ್ಲಿ ಸೆಟಲ್ ಆಗಿರುವ ಮೋದಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. 56 ವರ್ಷದ ಲಲಿತ್ ಮೋದಿ (Lalit Modi) ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ 45 ವರ್ಷದ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಸುಶ್ಮಿತಾ ಸೇನ್ (Sushmita sen is dating Lalit modi) ಜೊತೆ ತಾವು ಡೇಟಿಂಗ್ ನಡೆಸುತ್ತಿರುವ ವಿಚಾರವನ್ನು ಸ್ವತಃ ಲಲಿತ್ ಮೋದಿ (Lalit Modiಅವರೇ ಫೋಟೋ ಸಹಿತ ಟ್ವಿಟರ್’ನಲ್ಲಿ ಪ್ರಕಟಿಸಿದ್ದಾರೆ.

‘’ಸುಶ್ಮಿತಾ ಸೇನ್ ಜೊತೆ ಜೀವನದ ಹೊಸ ಆರಂಭ’’ ಎಂದು ಲಲಿತ್ ಮೋದಿ ಬರೆದುಕೊಂಡಿದ್ದಾರೆ. ಹಾಗಾದ್ರೆ ಬಾಲಿವುಡ್ ಬ್ಯೂಟಿ ಸುಶ್ಮಿತಾ ಸೇನ್ ಅವರನ್ನು ಲಲಿತ್ ಮೋದಿ ಮದುವೆಯಾಗಿದ್ದಾರಾ? ಈ ಪ್ರಶ್ನೆಗೆ ಸ್ವತಃ ಲಲಿತ್ ಮೋದಿಯವರೇ ಉತ್ತರ ಕೊಟ್ಟಿದ್ದಾರೆ.

‘’ನಾವಿಬ್ಬರೂ ಮದುವೆಯಾಗಿಲ್ಲ, ಡೇಟಿಂಗ್ ನಡೆಸುತ್ತಿದ್ದೇವೆ ಅಷ್ಟೇ. ಮದುವೆಯೂ ಒಂದು ದಿನ ಆಗಲಿದೆ’’ ಎಂದು ಟ್ವಿಟರ್’ನಲ್ಲಿ ಲಲಿತ್ ಮೋದಿ ಬರೆದುಕೊಂಡಿದ್ದಾರೆ.

ಐಪಿಎಲ್ ಅವ್ಯವಹಾರಹಳ ಹಿನ್ನೆಲೆಯಲ್ಲಿ ಲಲಿತ್ ಮೋದಿ ಅವರನ್ನು ಬಿಸಿಸಿಐ ಬ್ಯಾನ್ ಮಾಡಿದ ನಂತರ ದೇಶ ತೊರೆದಿರುವ ಮೋದಿ, ಲಂಡನ್’ನಲ್ಲಿ ನೆಲೆಸಿದ್ದಾರೆ.

ಇದನ್ನೂ ಓದಿ : manoranjan ravichandran : ಕ್ರೇಜಿಸ್ಟಾರ್​ ರವಿಚಂದ್ರನ್​ ಪುತ್ರನಿಗೆ ಕಂಕಣ ಭಾಗ್ಯ : ಮುಂದಿನ ತಿಂಗಳು ಮನೋರಂಜನ್​ ಮದುವೆ

ಇದನ್ನೂ ಓದಿ : Emergency Movie: ‘ಎಮರ್ಜೆನ್ಸಿ’ಯ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಕಂಗನಾ; ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ

ಇದನ್ನೂ ಓದಿ : Puneeth Rajkumar : ಟ್ವೀಟರ್ ನಿಂದ ಪುನೀತ್‌ ರಾಜ್‌ಕುಮಾರ್‌ಗೆ ಅವಮಾನ,ಅಭಿಮಾನಿಗಳ ಆಕ್ಷೇಪ : ಅಂತಹದ್ದೇನಾಯ್ತು ಗೊತ್ತಾ ?

Sushmita sen is dating Lalit modi, modi announce new beginning with Sushmitha sen

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular