ಬುಧವಾರ, ಏಪ್ರಿಲ್ 30, 2025
Homekarnataka5G test Namma metro : ಭಾರತದಲ್ಲೇ ಮೊದಲ ಬಾರಿಗೆ 5ಜಿ ನೆಟ್ವರ್ಕ್ ಪರೀಕ್ಷೆ: ಹೊಸ...

5G test Namma metro : ಭಾರತದಲ್ಲೇ ಮೊದಲ ಬಾರಿಗೆ 5ಜಿ ನೆಟ್ವರ್ಕ್ ಪರೀಕ್ಷೆ: ಹೊಸ ಮೈಲಿಗಲ್ಲು ಸ್ಥಾಪಿಸಿದ ನಮ್ಮ ಮೆಟ್ರೋ

- Advertisement -

ಬೆಂಗಳೂರು : ಭಾರತದಾದ್ಯಂತ 5ಜೀ ನೆಟ್ವರ್ಕ್ (5G test Namma metro) ಬಗ್ಗೆ ಚರ್ಚೆಗಳು ನಡೆದಿರುವಾಗಲೇ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿ ನಲ್ಲಿ ನಮ್ಮ ಮೆಟ್ರೋ‌ದಲ್ಲಿ 5 ಜೀ ನೆಟ್ವರ್ಕ್ ಪರೀಕ್ಷೆ ನಡೆದಿದೆ. ಈ‌ಮಹತ್ವದ ವಿಚಾರವನ್ನು ಸ್ವತಃ ನಮ್ಮ‌ಮೆಟ್ರೋ ಸೋಷಿಯಲ್ ಮೀಡಿಯಾ ದಲ್ಲಿ‌ಹಂಚಿಕೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ ತನ್ನ ಪೈಲಟ್ ಪ್ರಾಜೆಕ್ಟ್ ನ ಅಡಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ 5 ಜೀ ನೆಟ್ವರ್ಕ್ ಪರೀಕ್ಷೆ ( India’s first 5G network test) ನಡೆದಿದೆ. 5 ಜೀ ನೆಟ್ವರ್ಕ್ ನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದು 4 ಜೀ ನೆಟ್ವರ್ಕ್ ಗಿಂತಲೂ ವೇಗವಾಗಿ ಕೆಲಸ ಮಾಡುತ್ತದೆ ಎಂದು ನಮ್ಮ‌ಮೆಟ್ರೋ ಅಭಿಪ್ರಾಯಿಸಿದೆ.

ಟೆಲಿಕಾಂ ಕ್ಷೇತ್ರದಲ್ಲಿ ದೈತ್ಯ ಶಕ್ತಿಯಾಗಿ ಬೆಳೆದು ನಿಂತಿರುವ ಜಿಯೋ ಕಂಪನಿ ಬೆಂಗಳೂರಿನ ಅತ್ಯಂತ ಪ್ರಮುಖವಾದ , ನಗರದ ಹೃದಯಭಾಗದಲ್ಲಿರೋ ಎಂಜಿ ರಸ್ತೆಯ ಮೆಟ್ರೋ‌ ನಿಲ್ದಾಣದಲ್ಲಿ 5 ಜೀ‌ ನೆಟ್ವರ್ಕ್ ಪರೀಕ್ಷಾರ್ಥವಾಗಿ ಆರಂಭಿಸಲಾಗಿದೆ. ಎಂ.ಜಿ.ರೋಡ್ ವ್ಯಾಪ್ತಿಯ ಮೆಟ್ರೋ ನಿಲ್ದಾಣದಲ್ಲಿ 200 ಮೀಟರ್ ವ್ಯಾಪ್ತಿಯಲ್ಲಿ 5 ಜೀ ನೆಟ್ವರ್ಕ್ ನ್ನು ಸ್ಥಾಪಿಸಿದೆ. ಪರೀಕ್ಷೆಯಲ್ಲಿ 1.45 ಜಿಬಿಪಿಎಸ್ ಡೌನ್ ಲೋಡ್ ಹಾಗೂ 65 ಎಂಬಿಪಿಎಸ್ ಅಪ್ಲೋಡ್ ವೇಗವನ್ನು ಸಾಧಿಸಿದ್ದು, ಇದು 4 ಜೀ ಗಿಂತಲೂ ವೇಗವಾಗಿ ಕೆಲಸ ಮಾಡಿದೆ ಎಂದು ನಮ್ಮ‌ಮೆಟ್ರೋ ಹೇಳಿಕೊಂಡಿದೆ.

ಈ ಬಗ್ಗೆ ವಿಸ್ಕೃತವಾಗಿ ಟ್ವೀಟ್ ಮಾಡಿರೋ ನಮ್ಮ ಮೆಟ್ರೋ, ಬಿಎಂಆರ್ ಸಿಎಲ್ 5 ಜೀ ನೆಟ್ವರ್ಕ್ ನ್ನು ಟೆಸ್ಟ್ ಮಾಡಿದ ದೇಶದ ಮೊದಲ ಮೆಟ್ರೋ ಎಂಬ ಖ್ಯಾತಿ ಪಡೆದುಕೊಂಡಿದೆ ಎಂದಿದೆ. ಇನ್ನು 5ಜೀ ನೆಟ್ವರ್ಕ್ ಪರೀಕ್ಷೆಗೆ ಜಿಯೋ ನೆಟ್ವರ್ಕ್ ಮಾಪನ ಅಳವಡಿಸಿದ್ದು, ಪರೀಕ್ಷಾರ್ಥವಾಗಿ ಈ ಅಳವಡಿಕೆ ನಡೆದಿದೆ. ಈ ಪರೀಕ್ಷೆಯೂ ಯಶಸ್ವಿಯಾಗಿದೆ ಎಂದು ಬಿ ಎಂ ಆರ್ ಸಿಎಲ್ ಎಂಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ. ಇನ್ನೂ ಈ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ‌ ನಿಲ್ದಾಣಗಳಲ್ಲಿ 5 ಜೀ ನೆಟ್ವರ್ಕ್ ಲಭ್ಯವಾಗಲಿದೆ.

ಟ್ರಾಯ್ ಸಂಸ್ಥೆಯೂ ದೇಶದಾದ್ಯಂತ ಸರ್ಕಾರದ ಮೂಲಭೂತ ಸೌಕರ್ಯವಿರುವ ಕೆಲವು ವಿಮಾನ ನಿಲ್ದಾಣ, ಬಂದರು,ರೇಲ್ವೈ ನಿಲ್ದಾಣ ಹಾಗೂ ಮೆಟ್ರೋ ಮೊದಲಾದ ಕಡೆಗಳಲ್ಲಿ 5 ನೆಟ್ವರ್ಕ್ ಕಾರ್ಯನಿರ್ವಹಿಸುವಿಕೆ ಬಗ್ಗೆ ಪೈಲಟ್ ಯೋಜನೆ ಕೈಗೆತ್ತಿಕೊಂಡಿದೆ. ಈ ಪೈಕಿ ನಮ್ಮ ಮೆಟ್ರೋ ಎಂಜಿ ರಸ್ತೆಯಲ್ಲಿ ಪರೀಕ್ಷೆ ನಡೆಸಿದೆ.

ಇದನ್ನೂ ಓದಿ : big news : ದೇಶದ ಜನತೆಗೆ ಬಿಗ್​ ಶಾಕ್​ : ಶೀಘ್ರದಲ್ಲೇ ಏರಲಿದೆ ವಿದ್ಯುತ್​ ದರ

ಇದನ್ನೂ ಓದಿ : Indian Passport : ಭಾರತೀಯ ಪಾಸ್‌ಪೋರ್ಟ್ ಎಷ್ಟು ಪ್ರಬಲವಾಗಿದೆ ಗೊತ್ತಾ! 60 ದೇಶಗಳಿಗೆ ಭಾರತೀಯರು ವೀಸಾ ಮುಕ್ತ ಪ್ರವೇಶವನ್ನು ಪಡೆಯಬಹುದು

India’s first 5G test Namma metro new Milestone

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular