ಮಂಗಳವಾರ, ಏಪ್ರಿಲ್ 29, 2025
Homedistrict NewsDr. C Aswattha Narayan : ಅಗತ್ಯಬಿದ್ದರೆ ದುಷ್ಕರ್ಮಿಗಳ ಎನ್​ಕೌಂಟರ್​ ಮಾಡಲೂ ಸರ್ಕಾರ ಸಿದ್ಧವಿದೆ :...

Dr. C Aswattha Narayan : ಅಗತ್ಯಬಿದ್ದರೆ ದುಷ್ಕರ್ಮಿಗಳ ಎನ್​ಕೌಂಟರ್​ ಮಾಡಲೂ ಸರ್ಕಾರ ಸಿದ್ಧವಿದೆ : ಸಚಿವ ಡಾ. ಅಶ್ವತ್ಥ ನಾರಾಯಣ ಗುಡುಗು

- Advertisement -

ರಾಮನಗರ :Dr. C Aswattha Narayan: ಕರಾವಳಿಯನ್ನು ಬೆಚ್ಚಿ ಬೀಳಿಸಿರುವ ಸರಣಿ ಕೊಲೆಗಳ (Dakshina Kannada murder cases) ಪ್ರಕರಣದಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ವಿಚಾರವಾಗಿ ಇಂದು ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಾ. ಅಶ್ವತ್ಥ ನಾರಾಯಣ, ಕೆಲವು ಮತಾಂಧರು ಜನರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದಾರೆ. ಇಂತವರು ಕನಸಿನಲ್ಲಿಯೂ ಮತ್ತೆ ಇನ್ನೊಬ್ಬರ ಹತ್ಯೆ ಮಾಡಲು ಹೆದರಿಕೊಳ್ಳಬೇಕು. ಆ ರೀತಿಯಲ್ಲಿ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತೇವೆ . ಅಗತ್ಯ ಬಿದ್ದರೆ ಎನ್​ಕೌಂಟರ್​ ಮಾಡಲೂ ಸಹ ನಮ್ಮ ಸರ್ಕಾರ ಸಿದ್ಧವಿದೆ ಎಂದು ಗುಡುಗಿದರು.

ರಾಜ್ಯದಲ್ಲಿ ಇನ್ಯಾರದ್ದೂ ಹತ್ಯೆ ನಡೆಯದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಗೂಂಡಾ ಸ್ಕ್ವಾಡ್​ ರಚಿಸಲು ಗೃಹ ಇಲಾಖೆ ಪ್ಲಾನ್ ಮಾಡುತ್ತಿದೆ. ಈಗ ಎನ್​ಕೌಂಟರ್​ ಕಾಲವಿದೆ. ರಾಜ್ಯದಲ್ಲಿ ಮತ್ತೊಮ್ಮೆ ಇಂತಹ ಘಟನೆಗಳು ಜರುಗದಂತೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರ ಆಕ್ರೋಶದ ವಿಚಾರವಾಗಿ ಮಾತನಾಡಿದ ಅವರು, ಕಾರ್ಯಕರ್ತರ ಆಕ್ರೋಶವನ್ನು ನಾವು ಗೌರವಿಸುತ್ತೇವೆ. ಉತ್ತರ ಪ್ರದೇಶಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಆರೋಪಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಕರ್ನಾಟಕ ಎಲ್ಲಾ ವಿಚಾರದಲ್ಲಿಯೂ ಮಾದರಿ ಎನಿಸಿದೆ ಎಂಬುದನ್ನು ನಾವು ಮರೆಯಬಾರದು .ಹತ್ಯೆಗೈದವರಿಗೆ ನಡುಕ ಹುಟ್ಟಿಸುವ ಕೆಲಸವನ್ನು ನಾವು ಮಾಡಿ ತೋರಿಸುತ್ತೇವೆ . ಬೇಕಿದ್ದರೆ ನಮ್ಮ ಆ್ಯಕ್ಷನ್​ ಏನು ಎಂಬುವುದನ್ನು ನೀವೆಲ್ಲರೂ ಕಾದು ನೋಡಿ. ಕರ್ನಾಟಕದ ಮಾಡೆಲ್​ ಏನು ಎನ್ನುವುದನ್ನು ಇತರೆ ರಾಜ್ಯಗಳಿಗೆ ತೋರಿಸುತ್ತೇವೆ ಎಂದು ಗುಡುಗಿದ್ದಾರೆ .

ಕಾಂಗ್ರೆಸ್​ ನಾಯಕರ ಆಕ್ರೋಶದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು ನೈತಿಕತೆ ಇಲ್ಲದ ಕಾಂಗ್ರೆಸ್​ ಬಗ್ಗೆ ಏಕೆ ಮಾತನಾಡಬೇಕು..? ರಾಜ್ಯದಲ್ಲಿ ಸೃಷ್ಟೀಕರಣ ರಾಜಕೀಯ ಮಾಡ್ತಿರುವುದೇ ಕಾಂಗ್ರೆಸ್​, ಡಿ.ಕೆ ಶಿವಕುಮಾರ್​ ಭ್ರಷ್ಟಾಚಾರದ ಸಂಸ್ಕೃತಿಯವರು. ನಮ್ಮ ಸರ್ಕಾರ ಇಂತವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಇದನ್ನು ಓದಿ : Praveen Nettaru murder case : ಪ್ರವೀಣ್​ ಹತ್ಯೆ ಪ್ರಕರಣ ಎನ್​ಐಎಗೆ ವಹಿಸಿ ಸಿಎಂ ಬೊಮ್ಮಾಯಿ ಆದೇಶ

ಇದನ್ನೂ ಓದಿ : closure of shops : ದಕ್ಷಿಣ ಕನ್ನಡದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಜೆ 6 ಗಂಟೆಗೆ ಬಂದ್​ : ಜಿಲ್ಲಾಧಿಕಾರಿ ಆದೇಶ

Minister Dr. C Aswattha Narayan’s reaction on Dakshina Kannada murder cases

RELATED ARTICLES

Most Popular