JEE Main Result 2022 Session 2 : ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, ಎನ್ಟಿಎ ಜಂಟಿ ಪ್ರವೇಶ ಪರೀಕ್ಷೆ, ಜೆಇಇ ಸೆಷನ್ 2ರ ಮುಖ್ಯ ಫಲಿತಾಂಶವು ಇಂದು ಬಿಡುಗಡೆ ಗೊಂಡಿದೆ. ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮುಖ್ಯ ವೆಬ್ಸೈಟ್ jeemain.nta.nic.inಗೆ ಭೇಟಿ ನೀಡುವ ಮೂಲಕ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಪಡೆದುಕೊಳ್ಳಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಜನ್ಮ ದಿನಾಂಕ ಹಾಗೂ ಅರ್ಜಿ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ. ಇದರ ಜೊತೆಯಲ್ಲಿ ಜೆಇಇ 2022 ಕಟ್ ಆಫ್ನ್ನೂ ಬಿಡುಗಡೆ ಮಾಡಿದ್ದು ವಿದ್ಯಾರ್ಥಿಘಳು ಜೆಇಇ ಮೇನ್ ವರ್ಗವಾರು ಕಟ್ಆಫ್ಗಳನ್ನು ವೀಕ್ಷಿಸಬಹುದಾಗಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಜೆಇಇ ಮೇನ್ ಪರೀಕ್ಷೆಗೆ ಹಾಜರಾದವರ ಅಂಕಗಳು ಮೆರಿಟ್ ಪಟ್ಟಿಯಲ್ಲಿ ಸಿಗಲಿದೆ .
ಜೆಇಇ ಮುಖ್ಯ ಫಲಿತಾಂಶ ವೀಕ್ಷಿಸಲು ಇಲ್ಲಿದೆ ಮಾರ್ಗ :
NTA JEE, jeemain.nta.nic.in ಅಥವಾ nta.ac.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ .
ಹೋಮ್ಪೇಜ್ನಲ್ಲಿ JEE ಮುಖ್ಯ ಫಲಿತಾಂಶ 2022 ರ ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ.
ಅರ್ಜಿ ಸಂಖ್ಯೆ ಹಾಗೂ ನಿಮ್ಮ ಜನ್ಮದಿನಾಂಕವನ್ನು ಬಳಕೆ ಮಾಡಿ ಲಾಗಿನ್ ಆಗಿ ಇದಾದ ಬಳಿಕ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಲಿದೆ. ಭವಿಷ್ಯದ ಬಳಕೆಗಾಗಿ ಇದನ್ನು ಡೌನ್ಲೋಡ್ ಮಾಡಿಕೊಳ್ಳಿ.
JEE ಮೇನ್ ಫಲಿತಾಂಶ ಪರಿಶೀಲಿಸಲು ವೆಬ್‌ಸೈಟ್‌ಗಳು :
jeemain.nta.nic.in ಫಲಿತಾಂಶ 2022
ntaresults.nic.in 2022
www.nta.ac.in 2022
ಜೆಇಇ ಮೇನ್ 2022 ರ ವರ್ಗವಾರು ಕಟ್-ಆಫ್ :
Common Rank List – 88.4121383
GEN-EWS – 63.1114141
OBC-NCL – 67.0090297
SC – 43.0820954
ST – 26.7771328
PwD – 0.0031029
ಐಐಟಿ ಜೆಇಇ ಅಡ್ವಾನ್ಸ್ಗೆ ಇಂದಿನಿಂದ ನೋಂದಣಿ ಆರಂಭ :
ಜುಲೈ 25 ರಿಂದ ಜುಲೈ 30ರವರೆಗೆ ಎರಡು ಪಾಳಿಗಳಲ್ಲಿ 2022ನೇ ಸಾಲಿನ ಜೆಇಇ ಮೇನ್ ಪರೀಕ್ಷೆಯನ್ನು ನಡೆಸಲಾಗಿದೆ. ಇದಾದ ಬಳಿಕ ಕೀ ಆನ್ಸರ್ಗಳನ್ನೂ ಬಿಡುಗಡೆ ಮಾಡಲಾಗಿತ್ತು. ಇದೀಗ ಜೆಇಇ ಮೇನ್ 2022ರ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಇಂದಿನಿಂದ IIT JEE ಅಡ್ವಾನ್ಸ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ : Indian Cricket Team: ಮೊಬೈಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡದ ಫೈನಲ್ ವೀಕ್ಷಿಸಿದ ರೋಹಿತ್ ಶರ್ಮಾ & ಟೀಮ್
ಇದನ್ನೂ ಓದಿ : India Women Cricket Team : 5 ವರ್ಷ 3 ಫೈನಲ್ 3 ಸೋಲು… ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಕಾಡುತ್ತಿದೆ “ಫೈನಲ್ ಫೋಬಿಯಾ”
JEE Main Result 2022 Session 2 : JEE Mains result at jeemain.nta.nic.in, cut off of top IITs, NITs