ಹಿಮಾಚಲ ಪ್ರದೇಶ : tourist vehicle rolls off :ಬಂಡೆಯಿಂದ ಪ್ರವಾಸಿ ವಾಹನವೊಂದು ಉರುಳಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ ದಾರುಣ ಘಟನೆಯು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಂಜಾರ್ ಕಣಿವೆಯ ಘಿಯಾಗಿ ಎಂಬ ಪ್ರದೇಶದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಈ ಅಪಘಾತದಲ್ಲಿ ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಭಾನುವಾರ ರಾತ್ರಿ 8:30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 305ರಲ್ಲಿ ಈ ದುರಂತ ಸಂಭವಿಸಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಚಾಲಕ ಸೇರಿದಂತೆ ಹದಿನೇಳು ಮಂದಿ ಪ್ರವಾಸಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಕುಲು ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಅಶುತೋಷ್ ಗರ್ಗ್ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರೂ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ವರದಿಯ ಪ್ರಕಾರ, ವಾಹನದಲ್ಲಿ ಚಾಲಕ ಸೇರಿದಂತೆ ಹದಿನೇಳು ಮಂದಿ ಪ್ರಯಾಣಿಸುತ್ತಿದ್ದರು. ಪೊಲೀಸರು , ಹೋಮ್ ಗಾರ್ಡ್ಸ್ ಹಾಗೂ ಸ್ಥಳೀಯ ಆಡಳಿತ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಗಾಯಗೊಂಡವನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಕುಲು ಜಿಲ್ಲೆಯ ಡೆಪ್ಯೂಟಿ ಕಮಿಷನರ್ ಅಶುತೋಷ್ ಗರ್ಗ್ ಹೇಳಿದ್ದಾರೆ.
ಕುಲು ಪೊಲೀಸ್ ಅಧೀಕ್ಷಕ ಗುರುದೇವ್ ಸಿಂಗ್ ಕೂಡ ಈ ವಿಚಾರವಾಗಿ ಮಾತನಾಡಿದ್ದು, ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹತ್ತು ಮಂದಿ ಗಾಯಗೊಂಡಿದ್ದಾರೆ. ಐವರು ಗಾಯಾಳುಗಳನ್ನು ಕುಲುವಿನ ವಲಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಹಾಗೂ ಐವರನ್ನು ಸ್ಥಳೀಯ ಆಸ್ಪತ್ರೆ ಬಂಜಾರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಭಾರೀ ಮಳೆಯಿಂದಾಗಿ ಟ್ರಿಯುಂಡ್ ಗಿರಿಧಾಮದಲ್ಲಿ ಸಿಲುಕಿಕೊಂಡಿದ್ದ ಒಟ್ಟು ಎಂಬತ್ಮೂರು ಪ್ರವಾಸಿಗರನ್ನು ಭಾನುವಾರದಂದು ರಕ್ಷಿಸಲಾಗಿದೆ ಎಂದು ಧರ್ಮಶಾಲಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ, 11 ಜನರು ಟ್ರಿಯುಂಡ್ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು ಮತ್ತು ಸಂಜೆ 5 ಗಂಟೆಯ ಸುಮಾರಿಗೆ ನಮ್ಮ ರಕ್ಷಣಾ ತಂಡ ಅಲ್ಲಿಗೆ ತಲುಪಿತು. ಆದರೆ, ನಮ್ಮ ತಂಡವು ಒಟ್ಟು 83 ಜನರಿದ್ದಾರೆ ಎಂದು ನಮಗೆ ತಿಳಿಸಿತು ಎಂದು ಎಸ್ಡಿಎಂ ಹೇಳಿದರು.
ಇದನ್ನು ಓದಿ : terrorist organization ISIS:ನಿಷೇಧಿತ ಐಎಸ್ ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ : ಹಣ್ಣಿನ ವ್ಯಾಪಾರಿ ಬಂಧನ
ಇದನ್ನೂ ಓದಿ : Husband Married to Another Woman :ತಾನೇ ಮುಂದೆ ನಿಂತು ಪತಿಗೆ 2ನೇ ವಿವಾಹ ನೆರವೇರಿಸಿದ ಪತ್ನಿ : ಬೆರಗಾದ ನೆಟ್ಟಿಗರು
7 dead, 10 injured after tourist vehicle rolls off a cliff in Himachal’s Kullu