ಭಾನುವಾರ, ಏಪ್ರಿಲ್ 27, 2025
HomebusinessBank Holidays : ದೇಶದಲ್ಲಿ 21 ದಿನ, ಕರ್ನಾಟಕದಲ್ಲಿ 11 ದಿನ ಬ್ಯಾಂಕ್‌ ರಜೆ

Bank Holidays : ದೇಶದಲ್ಲಿ 21 ದಿನ, ಕರ್ನಾಟಕದಲ್ಲಿ 11 ದಿನ ಬ್ಯಾಂಕ್‌ ರಜೆ

- Advertisement -

ನವದೆಹಲಿ : ಅಕ್ಟೋಬರ್‌ ತಿಂಗಳ ಬ್ಯಾಂಕ್‌ ರಜೆ (Bank Holidays) ಪಟ್ಟಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಿಡುಗಡೆ ಮಾಡಿದೆ. ಅಕ್ಟೋಬರ್‌ನಲ್ಲಿ ಸಾರ್ವಜನಿಕ ರಜಾದಿನಗಳು ಸೇರಿದಂತೆ ಹಲವು ರಜಾದಿನಗಳು ಇರುತ್ತದೆ. ಅಕ್ಟೋಬರ್ ಹಬ್ಬದ ತಿಂಗಳು ಆಗಿರುವುದರಿಂದ ಈ ತಿಂಗಳಲ್ಲಿ ಹಲವು ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಿರುತ್ತವೆ. ಅಕ್ಟೋಬರ್ ತಿಂಗಳಲ್ಲಿ ಒಟ್ಟು 21 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ಗಳಿಗೆ ಸಂಬಂಧಿಸಿದ ಕೆಲಸಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕಾಗಿದೆ.

ದೇಶದಾದ್ಯಂತ 21 ದಿನ ಬ್ಯಾಂಕುಗಳಿಗೆ ರಜೆ (Bank Holidays)ಇದ್ದರೂ ಕೂಡ ಈ ರಜೆ ಎಲ್ಲಾ ಬ್ಯಾಂಕುಗಳಿಗೆ ಅನ್ವಯ ಆಗುವುದಿಲ್ಲ. ಇದು ಸಾರ್ವಜನಿಕ ರಜಾದಿನಗಳು ಮತ್ತು RBI ನಿರ್ಧರಿಸಿದಂತೆ ಸ್ಥಳೀಯ ರಜಾದಿನಗಳನ್ನು ಒಳಗೊಂಡಿದೆ. ಅಕ್ಟೋಬರ್‌ನಲ್ಲಿ 21 ಸಾರ್ವಜನಿಕ ರಜಾದಿನಗಳು ಇದ್ದರೂ ಎಲ್ಲಾ ರಾಜ್ಯಗಳಿಗೆ ಇದು ಅನ್ವಯ ಆಗುವುದಿಲ್ಲ. ಕೆಲವು ರಾಜ್ಯಗಳಲ್ಲಿ ಹಾಗೂ ಕರ್ನಾಟಕದಲ್ಲಿ 11 ದಿನಗಳ ಕಾಲ ಮಾತ್ರವೇ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳ ಪ್ರಕಾರ, ಭಾನುವಾರಗಳನ್ನು ಹೊರತುಪಡಿಸಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಅಕ್ಟೋಬರ್ 2022 ರಲ್ಲಿ ದೇಶದಲ್ಲಿ ಬ್ಯಾಂಕ್ ರಜಾದಿನಗಳ (Bank Holidays) ಸಂಪೂರ್ಣ ಪಟ್ಟಿ:

  • ಅಕ್ಟೋಬರ್ 1 :- ಬ್ಯಾಂಕ್ ಖಾತೆಗಳ ಅರ್ಧ ವಾರ್ಷಿಕ ಮುಕ್ತಾಯ (ಗ್ಯಾಂಗ್ಟಾಕ್, ಸಿಕ್ಕಿಂ)
  • ಅಕ್ಟೋಬರ್ 2 :- ಗಾಂಧಿ ಜಯಂತಿ, ಭಾನುವಾರ(ರಾಷ್ಟೀಯ ರಜೆ)
  • ಅಕ್ಟೋಬರ್ 3 :- ದುರ್ಗಾ ಪೂಜೆ (ಅಗರ್ತಲಾ, ಸಿಕ್ಕಿಂ, ಭುವನೇಶ್ವರ, ಗುವಾಹಟಿ, ಇಂಫಾಲ್, ಕೋಲ್ಕತ್ತಾ, ಪಾಟ್ನಾ ಮತ್ತು ರಾಂಚಿ)
  • ಅಕ್ಟೋಬರ್ 4 :- ಶ್ರೀಮಂತ ಶಂಕರದೇವರ ಜನ್ಮೋತ್ಸವ, ದುರ್ಗಾ ಪೂಜೆ, ದಸರಾ, ಆಯುಧ ಪೂಜೆ(ಅಗರ್ತಲಾ, ಬೆಂಗಳೂರು, ಭುವನೇಶ್ವರ, ಚೆನ್ನೈ, ಸಿಕ್ಕಿಂ, ಗುವಾಹಟಿ, ಕಾನ್ಪುರ್, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಪಾಟ್ನಾ, ರಾಂಚಿ, ಶಿಲ್ಲಾಂಗ್ ಮತ್ತು ತಿರುವನಂತಪುರಂ)
  • ಅಕ್ಟೋಬರ್ 5 :- ದುರ್ಗಾ ಪೂಜೆ, ದಸರಾ ಹಬ್ಬ, ಶ್ರೀಮಂತ ಶಂಕರದೇವರ ಜನ್ಮೋತ್ಸವ (ಮಣಿಪುರ ಹೊರತುಪಡಿಸಿ ಎಲ್ಲಾ ರಾಜ್ಯಗಳು)
  • ಅಕ್ಟೋಬರ್ 6 :- ದುರ್ಗಾ ಪೂಜೆ (ಗ್ಯಾಂಗ್ಟಾಕ್, ಸಿಕ್ಕಿಂ)(ದೇಶದಾದ್ಯಂತ ರಜೆ)
  • ಅಕ್ಟೋಬರ್ 7 :- ದುರ್ಗಾ ಪೂಜೆ (ಗ್ಯಾಂಗ್ಟಾಕ್)
  • ಅಕ್ಟೋಬರ್ 8 :- ಎರಡನೇ ಶನಿವಾರದ ರಜೆ, ಈದ್-ಇ-ಮಿಲಾದ್-ಉಲ್-ನಬಿ (ಭೋಪಾಲ್, ಜಮ್ಮು ಮತ್ತು ಕಾಶ್ಮಿರ, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂ)
  • ಅಕ್ಟೋಬರ್ 9 :- ಭಾನುವಾರ
  • ಅಕ್ಟೋಬರ್ 13 :- ಕರ್ವಾ ಚೌತ್ (ಶಿಮ್ಲಾ ಮತ್ತು ಹಿಮಾಚಲ ಪ್ರದೇಶ)
  • ಅಕ್ಟೋಬರ್ 14 :- ಈದ್-ಇ-ಮಿಲಾದ್-ಉಲ್-ನಬಿ (ಜಮ್ಮು ಮತ್ತು ಶ್ರೀನಗರ) ಬ್ಯಾಂಕ್ ರಜಾದಿನಗಳ ನಂತರ ಶುಕ್ರವಾರ.
  • ಅಕ್ಟೋಬರ್ 16 :- ಭಾನುವಾರ
  • ಅಕ್ಟೋಬರ್ 18 :- ಕಟಿ ಬಿಹು (ಗುವಾಹಟಿ)
  • ಅಕ್ಟೋಬರ್ 22 :- ನಾಲ್ಕನೇ ಶನಿವಾರ
  • ಅಕ್ಟೋಬರ್ 23 :- ಭಾನುವಾರ
  • ಅಕ್ಟೋಬರ್ 24 :- ಕಾಳಿ ಪೂಜೆ, ದೀಪಾವಳಿ, ಲಕ್ಷ್ಮೀ ಪೂಜೆ, ನರಕ ಚತುರ್ದಶಿ (ಸಿಕ್ಕಿಂ, ತೆಲಂಗಾಣ ಮತ್ತು ಮಣಿಪುರ ಹೊರತುಪಡಿಸಿ ಎಲ್ಲಾ ರಾಜ್ಯಗಳು)
  • ಅಕ್ಟೋಬರ್ 25 :- ಲಕ್ಷ್ಮಿ ಪೂಜೆ, ದೀಪಾವಳಿ, ಗೋವರ್ಧನ ಪೂಜೆ (ಗ್ಯಾಂಗ್ಟಾಕ್, ಹೈದರಾಬಾದ್, ಇಂಫಾಲ್ ಮತ್ತು ಜೈಪುರ)
  • ಅಕ್ಟೋಬರ್ 26 :- ಗೋವರ್ಧನ ಪೂಜೆ, ಭಾಯಿ ದೂಜ್, ದೀಪಾವಳಿ, ವಿಕ್ರಮ್ ಸಂವಂತ್ ಹೊಸ ವರ್ಷದ ದಿನ (ಅಹಮದಾಬಾದ್, ಬೇಲಾಪುರ್, ಬೆಂಗಳೂರು, ಡೆಹ್ರಾಡೂನ್, ಗ್ಯಾಂಗ್ಟಾಕ್, ಜಮ್ಮು, ಕಾನ್ಪುರ, ಲಕ್ನೋ, ಮುಂಬೈ, ನಾಗ್ಪುರ, ಶಿಮ್ಲಾ ಮತ್ತು ಶ್ರೀನಗರ).
    ಅಕ್ಟೋಬರ್ 27 :- ಭಾಯಿ ದೂಜ್, ಲಕ್ಷ್ಮಿ ಪೂಜೆ, ದೀಪಾವಳಿ (ಗ್ಯಾಂಗ್ಟಾಕ್, ಇಂಫಾಲ್, ಕಾನ್ಪುರ್ ಮತ್ತು ಲಕ್ನೋ)
  • ಅಕ್ಟೋಬರ್ 30 :- ಭಾನುವಾರ
  • ಅಕ್ಟೋಬರ್ 31 :- ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ, ಸೂರ್ಯ ಪಷ್ಟಿ ದಲಾ ಛಾತ್, ಛತ್ ಪೂಜೆ (ಅಹಮದಾಬಾದ್, ಪಾಟ್ನಾ ಮತ್ತು ರಾಂಚಿ)

ಕರ್ನಾಟಕದಲ್ಲಿ 11 ದಿನಗಳ ಬ್ಯಾಂಕ್‌ ರಜೆಗಳ (Bank Holidays) ಪಟ್ಟಿ:

  • ಅಕ್ಟೋಬರ್‌ 2 :- ಗಾಂಧಿ ಜಯಂತಿ ಹಾಗೂ ಭಾನುವಾರದ ರಜೆ
  • ಅಕ್ಟೋಬರ್‌ 4 :- ಮಹಾನವಮಿ
  • ಅಕ್ಟೋಬರ್ 5 :- ವಿಜಯದಶಮಿ
  • ಅಕ್ಟೋಬರ್ 9 :- ಭಾನುವಾರದ ರಜೆ ಹಾಗೂ ವಾಲ್ಮೀಕಿ ಜಯಂತಿ
  • ಅಕ್ಟೋಬರ್ 24 :- ನರಕ ಚತುರ್ದಶಿ
  • ಅಕ್ಟೋಬರ್ 26 :- ದೀಪಾವಳಿ

ಇದನ್ನೂ ಓದಿ : ‘ಆರ್​ಎಸ್​ಎಸ್​ ಬ್ಯಾನ್​ ಮಾಡಿ ಎನ್ನುವವರು ಮೂರ್ಖರು’ : ಸಿಎಂ ಬೊಮ್ಮಾಯಿ ತಿರುಗೇಟು

ಇದನ್ನೂ ಓದಿ : ರಾಜ್ಯದ ಹಲವು RTO ಚೆಕ್‌ ಪೋಸ್ಟ್‌ಗಳ ಮೇಲೆ ಏಕಾಏಕಿ ಲೋಕಾಯುಕ್ತರ ದಾಳಿ

ಇದನ್ನೂ ಓದಿ : ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮರುಜೀವ: ಸಂತ್ರಸ್ಥರ ಕುಟುಂಬದ ಜೊತೆ ರಾಹುಲ್‌ ಗಾಂಧಿ ಸಂವಾದ

ಈ ಎಲ್ಲಾ ಬ್ಯಾಂಕ್‌ ರಜಾದಿನಗಳಲ್ಲಿ ಬ್ಯಾಂಕ್‌ ವ್ಯವಹಾರಗಳು ಮಾತ್ರ ಇರುವುದಿಲ್ಲ. ಆದರೆ ಗ್ರಾಹಕರು ಆನ್‌ಲೈನ್‌, ಇಂಟರ್ನೆಟ್‌ ಬ್ಯಾಂಕಿಂಗ್‌, ಎಟಿಎಂ ಸೇವೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

21 days bank holiday in the country, 11 days in Karnataka

RELATED ARTICLES

Most Popular