ಬೆಂಗಳೂರು : MP Tejaswi Surya : ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿರೋದಕ್ಕೆ ಕಾಂಗ್ರೆಸ್ ನ ಕೆಲವರಿಗೆ ಒಂದೇ ಕಣ್ಣಿನಲ್ಲಿ ಅಳುವಂತಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಪಿಎಫ್ಐ ಕಾಂಗ್ರೆಸ್ ನವರ ಬ್ರದರ್ಸ್ ಇದ್ದಂತೆ, ಇದು ಕಾಂಗ್ರೆಸ್ ನವರೇ ಹೇಳಿಕೊಂಡಿರುವ ವಿಚಾರ ಎಂದು ಹೇಳಿದರು.
ಪಿಎಫ್ಐ ಸಂಘಟನೆ ಟೆರರಿಸ್ಟ್ ಆರ್ಗನೈಸೇಶನ್ ಅಂತ ಎಲ್ಲರಿಗೂ ಗೊತ್ತಿದೆ ಎಂದ ತೇಜಸ್ವಿ ಸೂರ್ಯ ಎಂಟತ್ತು ವರ್ಷಗಳಿಂದ ಪಿಎಫ್ಐ ಬ್ಯಾನ್ ಮಾಡುವ ವಿಚಾರವಾಗಿ ಹಲವು ಚರ್ಚೆಗಳು ನಡೆದಿತ್ತು. ಕೇರಳ, ಗುಜರಾತ್, ಉತ್ತರ ಪ್ರದೇಶ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಉಚ್ಚ ನ್ಯಾಯಾಲಯವು ಕೂಡ ಕೇಂದ್ರ ಸರ್ಕಾರಕ್ಕೆ ಟಿಪ್ಪಣಿಯನ್ನ ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಅಮಿತ್ ಶಾ ನೇತೃತ್ವದಲ್ಲಿ 26 ರಾಜ್ಯಗಳಲ್ಲಿ ಪಿಎಫ್ಐ ಬ್ಯಾನ್ ಮಾಡಲು ಹೊರಟಿದೆ ಎಂದರು.
ಪಿಎಫ್ಐ ಬ್ಯಾನ್ ಒಂದೆಡೆಯಾದ್ರೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಅದನ್ನ ಕಾಂಗ್ರೆಸ್ ನವರು ಹೊರಗೆ ಹೇಳಿಕೊಳ್ಳಲಾಗದೆ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರೇ ಪಿಎಫ್ಐ ನವರು ನಮ್ಮ ಬ್ರದರ್ಸ್ ಇದ್ದಂತೆ ಹೇಳಿದ್ದಾರೆ, ಬ್ರದರ್ಸ್ ಗೆ ನೋವಾದಾಗ ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ವ್ಯಂಗ್ಯವಾಡಿದರು. ರಾಷ್ಟ್ರದ ಸುರಕ್ಷತೆ ಮುಖ್ಯನೋ ಅಥವಾ ವೋಟ್ ಬ್ಯಾಕಿಂಗ್ ಮುಖ್ಯನೋ ಎಂದು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಬಗ್ಗೆಯು ಮಾತನಾಡಿದ ಅವರು ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಭಾರತ್ ತೋಡೋ ಯಾತ್ರೆಯ ಮೂಲಕ ಬಂದಿದ್ದಾರೆ. ಅದು ತೋಡೋ ಯಾತ್ರೆ, ಅವರು ಕರೆಯುತ್ತಿರೋದು ಜೋಡೋ ಯಾತ್ರೆ ಎಂದು ಭಾರತವನ್ನು ಜೋಡೋ ಮಾಡುವುದಕ್ಕೆ ಮುಂಚೆ ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರನ್ನ ಜೋಡಣೆ ಮಾಡಲಿ ಹಾಗೂ ರಾಜಸ್ಥಾನದಲ್ಲಿ ಸಚಿನ್ ಪೈಯೋಟ್ ಮತ್ತೆ ಅಶೋಕ್ ಗೆಹ್ಲೋಟ್ ರನ್ನ ಜೋಡಣೆ ಮಾಡಲಿ. ಅದಾದ ಬಳಿಕ ಭಾರತ್ ಜೋಡೋ ಕಡೆ ಮುಂದಾಗಲಿ ಎಂದು ತೇಜಸ್ವಿ ಸೂರ್ಯ ವ್ಯಂಗ್ಯವಾಡಿದರು.
ಇದನ್ನು ಓದಿ : Mallikarjuna Kharge : ಎಐಸಿಸಿ ಅಧ್ಯಕ್ಷರಾಗ್ತಾರಾ ಖರ್ಗೆ: ದಲಿತ ನಾಯಕನ ಆಯ್ಕೆಗೆ ಕಾರಣಗಳೇನು ಗೊತ್ತಾ?
PFI is like Congress’s brother: MP Tejaswi Surya