ಮಂಗಳವಾರ, ಏಪ್ರಿಲ್ 29, 2025
HomeCinemaVaishali Takkar : ಖ್ಯಾತ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ

Vaishali Takkar : ಖ್ಯಾತ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ

- Advertisement -

ಕಿರುತೆರೆಯ ಖ್ಯಾತ ನಟಿ ವೈಶಾಲಿ ಟಕ್ಕರ್ (Vaishali Takkar) ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದೋರ್ ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವೈಶಾಲಿ ಅವರ ಮೃತ ದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಹಿಂದಿ ಕಿರುತೆರೆ ಲೋಕದಲ್ಲಿ ವೈಶಾಲಿ ಟಕ್ಕರ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.ವೈಶಾಲಿ ಟಕ್ಕರ್ ಸಸುರಲ್ ಸಿಮಾರ್ ಕಾ ಚಿತ್ರದಲ್ಲಿ ಅಂಜಲಿ ಭಾರದ್ವಾಜ್, ಸೂಪರ್ ಸಿಸ್ಟರ್ಸ್ ನಲ್ಲಿ ಶಿವಾನಿ ಶರ್ಮಾ, ವಿಶ್ ಯಾ ಅಮೃತ್, ಸಿತಾರಾದಲ್ಲಿ ನೇತ್ರಾ ಸಿಂಗ್ ರಾಥೋಡ್ ಮತ್ತು ಮನಮೋಹಿನಿ 2 ನಲ್ಲಿ ಅನನ್ಯ ಮಿಶ್ರಾ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಟಿವಿಯಲ್ಲಿ ವೈಶಾಲಿ ಟಕ್ಕರ್ ಅವರ ಚೊಚ್ಚಲ ಧಾರವಾಹಿಯು ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಹಲವು ವರ್ಷಗಳ ಕಾಲ ಪ್ರಸಾರವಾಗಿತ್ತು. ಯೆ ರಿಶ್ತಾ ಕ್ಯಾ ಕೆಹ್ಲಾತಾ ಹೈ ಧಾರಾವಾಹಿ ಯಲ್ಲಿ ಅವರು 2015 ರಿಂದ 2016 ರವರೆಗೆ ಸಂಜನಾ ಪಾತ್ರವನ್ನು ನಿರ್ವಹಿಸಿದರು. 2016 ರಲ್ಲಿ ವೈಶಾಲಿ ಯೆ ಹೈ ಆಶಿಕಿಯಲ್ಲಿ ವೃಂದಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೊನೆಯದಾಗಿ ಟಿವಿ ಶೋ ರಕ್ಷಾಬಂಧನ್ ನಲ್ಲಿ ಕನಕ್ ಸಿಂಗ್ಸಾಲ್ ಸಿಂಗ್ ಠಾಕೂರ್ ಪಾತ್ರವನ್ನು ನಿರ್ವಹಿಸಿದ್ದರು.

ವೈಶಾಲಿ ಟಕ್ಕರ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಕಿನ್ಯಾದ ದಂತ ಶಸ್ತ್ರ ಚಿಕಿತ್ಸಕ ಅಭಿನಂದನ್ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಸಿಕೊಂಡಿದ್ದರು. ಅಲ್ಲದೇ ಸಮಾರಂಭದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕುಟುಂಬದವರು, ಆತ್ಮೀಯರು ಮಾತ್ರವೇ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ ಕೆಲವೇ ತಿಂಗಳುಗಳ ನಂತರದಲ್ಲಿ ವೈಶಾಲಿ ಅವರು ಅಭಿನಂದನ್ ಜೊತೆ ಮದುವೆ ಆಗುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಜೂನ್ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಮದುವೆಯನ್ನು ದಂಪತಿಗಳು ರದ್ದು ಮಾಡಿದ್ದರು. ಅಲ್ಲದೇ ವಿಡಿಯೋವನ್ನು ನಟಿ ವೈಶಾಲಿ ಟಕ್ಕರ್ ಡಿಲೀಟ್ ಮಾಡಿದ್ದರು.

ಕಳೆದ ಒಂದು ವರ್ಷದ ಹಿಂದೆಯಷ್ಟೇ ಅವರು ಇಂದೋರ್ ನಲ್ಲಿ ಬಂದು ನೆಲೆಸಲು ಆರಂಭಿಸಿದ್ದರು. ಕಳೆದ ಐದು ದಿನಗಳ ಹಿಂದೆಯಷ್ಟೇ ವೈಶಾಲಿ ಟಕ್ಕರ್ ಫನ್ನಿ ರೀಲ್ಸ್ ವೊಂದನ್ನು Instagram ನಲ್ಲಿ ಪೋಸ್ಟ್ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವರು ಸಾಕಷ್ಟು ಸಕ್ರೀಯರಾಗಿದ್ದರು. ಆದರೆ ಇದೀಗ ವೈಶಾಲಿ ನಿಗೂಢವಾಗಿ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ತೇಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Kantara Hindi Box Office : ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಹೊಸ ದಾಖಲೆ ಬರೆದ ಕಾಂತಾರ ಹಿಂದಿ

ಇದನ್ನೂ ಓದಿ : Dolly Dhananjay: ಡಾಲಿ ಧನಂಜಯ್, ಸತ್ಯದೇವ್ ಚಿತ್ರಕ್ಕೆ ನಾಯಕಿಯಾದ ತಮಿಳು ನಟಿ ಪ್ರಿಯಾ ಭವಾನಿ ಶಂಕರ್

Sasural Simar Ka actress Vaishali Takkar dies by Suicide found hanging at Indore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular