ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು(KSLU Recruitment 2022) ಸಹಾಯಕ ಪ್ರಾಧ್ಯಾಪಕರು ಮತ್ತು ಅತಿಥಿ ಅಧ್ಯಾಪಕರ ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯವು ಅಕ್ಟೋಬರ್ 2022 ರ KSLU ಅಧಿಕೃತ ಅಧಿಸೂಚನೆಯ ಮೂಲಕ 13 ಸಹಾಯಕ ಪ್ರಾಧ್ಯಾಪಕರು ಮತ್ತುಅತಿಥಿ ಅಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಹುಬ್ಬಳ್ಳಿ – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನವೆಂಬರ್ 03 ರ ಮುಂಚಿತವಾಗಿ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
KSLU ಹುದ್ದೆಗಳ ಸಂಪೂರ್ಣ ವಿವರ :
ವಿಶ್ವವಿದ್ಯಾಲಯದ ಹೆಸರು : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU)
ಹುದ್ದೆಗಳ ಸಂಖ್ಯೆ : 13
ಉದ್ಯೋಗ ಸ್ಥಳ : ಹುಬ್ಬಳ್ಳಿ – ಕರ್ನಾಟಕ
ಹುದ್ದೆಯ ಹೆಸರು : ಸಹಾಯಕ ಪ್ರಾಧ್ಯಾಪಕರು, ಅತಿಥಿ ಅಧ್ಯಾಪಕ
ಸಂಬಳ ವಿವರ: ರೂ.25000-50000/- ಪ್ರತಿ ತಿಂಗಳು
KSLU ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ ವಿವರ :
- ಸಹಾಯಕ ಪ್ರಾಧ್ಯಾಪಕರು : 7 ಹುದ್ದೆಗಳು
- ಅತಿಥಿ ಅಧ್ಯಾಪಕರು : 5 ಹುದ್ದೆಗಳು
- ಸಹಾಯಕ ಪ್ರೋಗ್ರಾಮರ್ : 1 ಹುದ್ದೆಗಳು
KSLU ನೇಮಕಾತಿ 2022 ಅರ್ಹತಾ ವಿವರ :
ವಿದ್ಯಾರ್ಹತೆ ವಿವರ :
ಸಹಾಯಕ ಪ್ರಾಧ್ಯಾಪಕರು ಮತ್ತು ಅತಿಥಿ ಅಧ್ಯಾಪಕರ ಹುದ್ದೆಗಾಗಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಶಿಕ್ಷಣವನ್ನು ಪಡೆದುಕೊಂಡಿರಬೇಕು.
ಸಹಾಯಕ ಪ್ರೋಗ್ರಾಮರ್ ಹುದ್ದೆಗಾಗಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ B.E ಅಥವಾ B.Tech, B.Sc, BCA ಶಿಕ್ಷಣವನ್ನು ಪಡೆದಿರಬೇಕು.
ವಯೋಮಿತಿ ವಿವರ :
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು KSLU ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕಾಗುತ್ತದೆ.
ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹುದ್ದೆಯ ಹೆಸರು ಹಾಗೂ ವೇತನ ವಿವರ :
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ : ರೂ.50000/- ಪ್ರತಿ ತಿಂಗಳು
ಅತಿಥಿ ಅಧ್ಯಾಪಕರ ಹುದ್ದೆಗೆ : ರೂ.150-525/- ಗಂಟೆಗೆ
ಸಹಾಯಕ ಪ್ರೋಗ್ರಾಮರ್ ಹುದ್ದೆಗೆ : ರೂ.25000/- ಪ್ರತಿ ತಿಂಗಳು
KSLU ನೇಮಕಾತಿ (ಸಹಾಯಕ ಪ್ರಾಧ್ಯಾಪಕರು, ಅತಿಥಿ ಅಧ್ಯಾಪಕರು) ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಅಗತ್ಯ(ಇಮೇಲ್ ಐಡಿ,ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ) ದಾಖಲೆಗಳೊಂದಿಗೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ಗಳ ಮೂಲಕ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ-580025 ಇವರಿಗೆ ನವೆಂಬರ್ 03, 2022ರ ಮೊದಲು ಕಳುಹಿಸಬೇಕಾಗಿದೆ.
ಪ್ರಮುಖ ದಿನಾಂಕಗಳು:
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-10-2022
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-ನವೆಂಬರ್-2022
ಸಂದರ್ಶನದ ದಿನಾಂಕ: 08-11-2022 11:00 AM
ಇದನ್ನೂ ಓದಿ : Job news : 10th,12th,ಪದವೀಧರಿಗೆ ಇಲ್ಲಿದೆ ಸುವರ್ಣಾವಕಾಶ ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದನ್ನೂ ಓದಿ : BESCOM Recruitment 2022:400 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬೆಸ್ಕಾಂ
ಇದನ್ನೂ ಓದಿ : KSP Recruitment 2022 : 1591 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
KSLU ಅಧಿಸೂಚನೆ ಪ್ರಮುಖ ಲಿಂಕ್ :
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: kslu.karnataka.gov.in
KSLU Recruitment 2022: Applications invited for Assistant Professor, Guest Professor Posts