ಮಂಗಳವಾರ, ಏಪ್ರಿಲ್ 29, 2025
HomeNationalDiwali Bonus For Central Govt Employees : ದೀಪಾವಳಿಯ ಗಿಫ್ಟ್ : ಸರಕಾರಿ ನೌಕರರ...

Diwali Bonus For Central Govt Employees : ದೀಪಾವಳಿಯ ಗಿಫ್ಟ್ : ಸರಕಾರಿ ನೌಕರರ ತುಟ್ಟಿಭತ್ಯೆ ಶೇ.38ಕ್ಕೆ ಏರಿಕೆ

- Advertisement -

ನವದೆಹಲಿ : (Diwali Bonus For Central Govt Employees)ದೇಶದಾದ್ಯಂತ ದೀಪಾವಳಿ ಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ಈ ವರ್ಷದ ದೀಪಾವಳಿ ಹಬ್ಬದಂದು ಉತ್ತರ ಪ್ರದೇಶ ಸರ್ಕಾರವು ತನ್ನ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ತುಟ್ಟಿ ಭತ್ಯೆಯನ್ನು ಪ್ರಸ್ತುತ ಇರುವ ಶೇ.34 ರಿಂದ ಶೇ.38ಕ್ಕೆ ಏರಿಕೆ ಮಾಡಿದೆ. ಈ ಹೊಸ ಆದೇಶ ಜುಲೈ 1ರಿಂದಲೇ ಜಾರಿಗೆ ಬರಲಿದೆ.

ಸೋಮವಾರ ಮಧ್ಯರಾತ್ರಿ ಮುಖ್ಯಮಂತ್ರಿ ಕಚೇರಿಯ ಟ್ವೀಟ್‌ ಮೂಲಕ, “ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ದರವನ್ನು ಪ್ರಸ್ತುತ ಇರುವ ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದಾರೆ. ಇದರಲ್ಲಿ ರಾಜ್ಯ ನೌಕರರು ಮತ್ತು ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರ ವ್ಯಾಪಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಉತ್ತರ ಪ್ರದೇಶಕ್ಕಿಂತ ಮೊದಲು ಹಲವಾರು ರಾಜ್ಯಗಳು ತಮ್ಮ ಉದ್ಯೋಗಿಗಳ ತುಟ್ಟಿಭತ್ಯೆಯಲ್ಲಿ ಹೆಚ್ಚಳವನ್ನು ಮಾಡಿದ್ದಾರೆ. ಅಕ್ಟೋಬರ್ 14 ರಂದು, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಯಲ್ಲಿ 5% ಹೆಚ್ಚಳವನ್ನು ಘೋಷಿಸಿ, ಒಟ್ಟು ತುಟ್ಟಿಭತ್ಯೆಯಲ್ಲಿ ಶೇಕಡವಾರು 33% ಕ್ಕೆ ಏರಿಕೆ ಮಾಡಿದ್ದಾರೆ. ಅಧಿಕಾರಿಗಳ ಪ್ರಕಾರ, ಈ ಹೆಚ್ಚಳವು ಸುಮಾರು 3.80 ಲಕ್ಷ ರಾಜ್ಯ ಸರ್ಕಾರಿ ನೌಕರರಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ, ದೆಹಲಿ ಸರ್ಕಾರವು ತನ್ನ ಸರ್ಕಾರಿ ನೌಕರರಲ್ಲಿ 4% ರಷ್ಟು ತುಟ್ಟಿಭತ್ಯೆ(DA)ಅನ್ನು ಹೆಚ್ಚಳವನ್ನು ಮಾಡಿದೆ. ಜಾರ್ಖಂಡ್ ಕ್ಯಾಬಿನೆಟ್ ಅಕ್ಟೋಬರ್ 10 ರಂದು ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆ (DA) ಮತ್ತು ಅದರ ಪಿಂಚಣಿದಾರರಿಗೆ ತುಟ್ಟಿಭತ್ಯೆ (DR) ಅನ್ನು ಈ ವರ್ಷ ಜುಲೈ 1 ರಿಂದ 4% ರಷ್ಟು ಹೆಚ್ಚಿಸುವ ಪ್ರಸ್ತಾಪಕ್ಕೆ ಸಮ್ಮತಿಯನ್ನು ನೀಡಿದ್ದಾರೆ.

ಇದನ್ನೂ ಓದಿ : Diwali 2022 Guildlines : ದೀಪಾವಳಿಗೆ ಮಾಲಿನ್ಯ ಮಂಡಳಿ ಹೊಸ ರೂಲ್ಸ್ : ರಾತ್ರಿ 8 ರಿಂದ 10ರ ವರೆಗೆ ಹಸಿರು ಪಟಾಕಿಗೆ ಅವಕಾಶ

ಇದನ್ನೂ ಓದಿ : Pm kisan : ರೈತರಿಗೆ ದೀಪಾವಳಿ ಗಿಫ್ಟ್ ಕೊಟ್ಟ ಮೋದಿ : ಪಿಎಂ ಕಿಸಾನ್ 12 ನೇ ಕಂತು ಬಿಡುಗಡೆ

ಕೇಂದ್ರ ಸರ್ಕಾರವು ಜುಲೈ 1, 2022 ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 4% ಹೆಚ್ಚುವರಿಯಾಗಿ ತುಟ್ಟಿಭತ್ಯೆಯನ್ನು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಇದ್ದರಿಂದಾಗಿ ಶೇ. 34% ತುಟ್ಟಿಭತ್ಯೆಯಿಂದ 38% ಕ್ಕೆ ಏರಿಕೆಯಾಗಿರುತ್ತದೆ. ಈ ಹಿಂದೆ 2022ರ ಜನವರಿಯಿಂದ ಜೂನ್‌ವರೆಗೆ ತುಟ್ಟಿಭತ್ಯೆಯಲ್ಲಿ ಶೇ. 34% ನೀಡಲಾಗಿತ್ತು.

Diwali bonus for central govt employees: dearness allowance hiked to 38%

RELATED ARTICLES

Most Popular