ಸೋಮವಾರ, ಏಪ್ರಿಲ್ 28, 2025
HomeWorldRishi Sunak PM : ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ: ರಿಷಿ ಸುನಕ್‍ಗೆ...

Rishi Sunak PM : ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ: ರಿಷಿ ಸುನಕ್‍ಗೆ ಒಲಿಯುತ್ತಾ ಪಟ್ಟ..?

- Advertisement -

ಬ್ರಿಟನ್: Rishi Sunak PM : ಮಹತ್ತರ ಬೆಳವಣಿಗೆ ಎಂಬಂತೆ ಪ್ರಧಾನಿ ಪಟ್ಟ ಅಲಂಕರಿಸಿಕೊಂಡ 45ನೇ ದಿನಗಳಲ್ಲೇ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಪಟ್ಟ ಅಲಂಕರಿಸುವ ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಲಿಜ್ ಟ್ರುಸ್ ರಾಜೀನಾಮೆಯಿಂದ ಬ್ರಿಟನ್ ರಾಜಕೀಯದಲ್ಲಿ ಸಂಚಲನ ಮೂಡಿದೆ.

‘ತಮ್ಮ ನಾಯಕತ್ವದ ಬಗ್ಗೆ ಯಾರೂ ವಿಶ್ವಾಸ ತೋರಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, ತಾನು ಅಂದುಕೊಂಡಂತೆ ಸರ್ಕಾರ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕಾಗಿ ತಾನು ರಾಜೀನಾಮೆ ನೀಡಿದ್ದಾಗಿ ಲಿಜ್ ಟ್ರುಸ್ ಸ್ಪಷ್ಟನೆ ನೀಡಿದ್ದಾರೆ. ಉತ್ತರಾಧಿ ಆಯ್ಕೆ ಆಗುವವರೆಗೂ ತಾನು ಪ್ರಧಾನಿ ಆಗಿ ಮುಂದುವರೆಯುತ್ತೇನೆ. ಮುಂದಿನ ವಾರದಲ್ಲಿ ಉತ್ತರಾಧಿಕಾರಿ ಆಯ್ಕೆ ಪೂರ್ಣಗೊಳ್ಳಲಿದೆ.’ ಎಂದು ಲಿಜ್ ಟ್ರುಸ್ ತಿಳಿಸಿದ್ದಾರೆ.

ಬ್ರಿಟನ್‍ನಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಕನ್ಸರ್ವೇಟಿವ್ ಪಕ್ಷದ ಲಿಜ್ ಟ್ರುಸ್ ಅಧಿಕಾರಕ್ಕೆ ಬಂದಿದ್ದರು. ಅಧಿಕಾರಕ್ಕೆ ಬಂದ ಕೂಡಲೇ ಇಂಧನ ದರಗಳ ನಿಯಂತ್ರಣ ಹಾಗೂ ಆರ್ಥಿಕ ಸ್ಥಿರತೆಗೆ ಸುಧಾರಣೆ ಕ್ರಮಗಳನ್ನು ಜಾರಿ ಮಾಡುವುದಾಗಿ ಅವರು ಭರವಸೆ ನೀಡಿದ್ದರು. ತೆರಿಗೆ ಕಡಿತ ಸಂಬಂಧ ಲಿಜ್ ಕೈಗೊಳ್ಳಲು ಹೊರಟಿದ್ದ ಕ್ರಮಗಳ ಬಗ್ಗೆ ವ್ಯಾಪಕ ವಿರೋಧಗಳು ಕೇಳಿಬಂದಿತ್ತು. ಬ್ರಿಟನ್ ಪ್ರಧಾನಿ ಆಗುವ ಮುನ್ನ ತೆರಿಗೆ ಕಡಿತ ಬೆಂಬಲಿಸಿದ್ದ ಅವರು, ಪ್ರಧಾನಿ ಆದ ಬಳಿಕ ತೆರಿಗೆ ಕಡಿತ ಸಾಧ್ಯವಿಲ್ಲ ಎಂದಿದ್ದರು. ಇದರಿಂದ ಸ್ವಪಕ್ಷದೊಳಗೇ ಕೋಲಾಹಲ ಎದ್ದಿತ್ತು.

ದಿವಂಗತ ರಾಣಿ ಎಲಿಜಬೆತ್ ಗಾಗಿ 10 ದಿನಗಳ ಶೋಕಾಚರಣೆ ಮುಗಿಯುತ್ತಿದ್ದಂತೆ ಲಿಜ್ ಹುದ್ದೆ ಅಲಂಕರಿಸಿದ್ದರು. ಒಂದು ವಾರದ ಹಿಂದಷ್ಟೇ ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರನ್ನು ವಜಾಗೊಳಿಸಿದ್ದರು. ಇದೀಗ ಲಿಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಮೂಲಕ ಬ್ರಿಟನ್ ಇತಿಹಾಸದಲ್ಲಿ ಅತೀ ಕಡಿಮೆ ಅವಧಿಯ ಪ್ರಧಾನಿಯಾಗಿ ಲಿಜ್ ಟ್ರುಸ್ ಗುರುತಿಸಿಕೊಳ್ಳುವಂತಾಗಿದೆ.

ಭಾರತೀಯ ರಿಷಿ ಸುನಕ್‍ಗೆ (Rishi Sunak PM) ಬ್ರಿಟನ್ ಪ್ರಧಾನಿ ಪಟ್ಟ..?

ಹಿಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರ ವಿರುದ್ಧ ಸಾವಿರಾರು ಮತಗಳ ಅಂತರದಿಂದ ಲಿಜ್ ಕ್ರುಸ್ ಗೆದ್ದು ಪ್ರಧಾನಿಯಾಗಿ ಆಯ್ಕೆ ಆಗಿದ್ದರು. ಸದ್ಯ ಲಿಜ್ ಟ್ರುಸ್ ರಾಜೀನಾಮೆಯಿಂದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಈ ಮಧ್ಯೆ ರಿಷಿ ಸುನಕ್ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದ ಭಾರತೀಯ ಮೂಲದ ರಿಷಿ ಬ್ರಿಟನ್ ಪ್ರಧಾನಿಯ ಸ್ಥಾನ ಅಲಂಕರಿಸುವ ನಿರೀಕ್ಷೆ ಮೂಡಿದೆ. ಪ್ರಧಾನಿ ಸ್ಥಾನಕ್ಕೆ ರಿಷಿ ಸುನಕ್ ಅವರೇ ಸೂಕ್ತ ಅಭ್ಯರ್ಥಿ ಎಂದು ಪಕ್ಷದ ಸದಸ್ಯರಿಗೆ ಮನವರಿಕೆ ಮಾಡುವ ಪ್ರಯತ್ನಗಳೂ ನಡೆಯುತ್ತಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Shivrajkumar Movie: ಶಿವಣ್ಣನ 125ನೇ ಸಿನಿಮಾ ರಿಲೀಸ್‍ಗೆ ಮುಹೂರ್ತ ಫಿಕ್ಸ್..!

ಇದನ್ನೂ ಓದಿ: Diwali 2022 : ಈ ದೀಪಾವಳಿಗೆ ನಿಮ್ಮ ಮನೆಯನ್ನು ಹೀಗೆ ಸಿಂಗರಿಸಿ ; ಇವು ಬಜೆಟ್‌- ಫ್ರೆಂಡ್ಲಿ ಐಡಿಯಾಗಳು

UK PM Liz Truss resigns: who will be the next PM.

RELATED ARTICLES

Most Popular