ಸೋಮವಾರ, ಏಪ್ರಿಲ್ 28, 2025
HomeCrimelabourers bludgeon jobless friend:500 ರೂಪಾಯಿಗಾಗಿ ಶುರುವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

labourers bludgeon jobless friend:500 ರೂಪಾಯಿಗಾಗಿ ಶುರುವಾದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ

- Advertisement -

ಲೂಧಿಯಾನ : labourers bludgeon jobless friend : ಯಾವುದೇ ಸಂಬಂಧವಿರಲಿ ಅಲ್ಲಿ ಹಣದ ವ್ಯವಹಾರ ಬಂತು ಅಂದರೆ ಮುಗೀತು. ಆ ಸಂಬಂಧ ಎಷ್ಟೇ ಗಾಢವಾಗಿದ್ದರೂ ಸಹ ಹಳಸಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ. ಇದೇ ರೀತಿ ಕೇವಲ ಐದುನೂರು ರೂಪಾಯಿಗಾಗಿ ಶುರುವಾದ ಜಗಳವು ನಿರುದ್ಯೋಗಿಯೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆಯು ಲೂಧಿಯಾನಾದ ಮಾಯಾ ನಗರದಲ್ಲಿ ಸಂಭವಿಸಿದೆ. ಇಸ್ಪೀಟು ಆಡುತ್ತಿದ್ದ ಸಂದರ್ಭದಲ್ಲಿ 500 ರೂಪಾಯಿಗಾಗಿ ಜಗಳ ಶುರುವಾದ ಪರಿಣಾಮ ಐವರು ಕಾರ್ಮಿಕರು ಸೇರಿ ಡಾಬಾದಲ್ಲಿ ನಿರುದ್ಯೋಗಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ.

ಕೊಲೆಯಾದ ವ್ಯಕ್ತಿಯನ್ನು ಮಾಯಾ ನಗರದ ಜಮ್​ ಕುಮಾರ್ ಚೌಧರಿ (31) ಎಂದು ಗುರುತಿಸಲಾಗಿದೆ.ಜಮ್​ ಕುಮಾರ್​ ಚೌಧರಿಯನ್ನು ಆತನ ಸ್ನೇಹಿತರೇ ಆದ ಅನುಜ್​ ಕುಮಾರ್​, ಅಮಿತ್​ ಕುಮಾರ್​, ಸಾಗರ್​ , ಕಲಾ ಹಾಗೂ ಧರ್ಮ್​ಜಿತ್​ ಮಿಶ್ರಾ ಎಂದು ಗುರುತಿಸಲಾಗಿದೆ. ಈ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಮಾತನಾಡಿದ ಸಹಾಯಕ ಪೊಲೀಸ್​ ಕಮಿಷನಟರ್​​ ಸಂದೀಪ್​ ವಧೇರಾ, ದೀಪಾವಳಿಯ ರಾತ್ರಿಯಂದು ಆರೋಪಿಗಳು ಮದ್ಯ ಸೇವನೆ ಮಾಡುತ್ತಿದ್ದರು.ಇದಾದ ಬಳಿಕ ಅವರು ಇಸ್ಪೀಟ್​​ ಆಡುತ್ತಿದ್ದರು . ಈ ವೇಳೆ ಐದು ನೂರು ರೂಪಾಯಿಗಾಗಿ ಜಗಳ ಶುರುವಾಗಿದೆ ಎಂದು ಹೇಳಿದ್ದಾರೆ.

ಇಸ್ಪೀಟ್​ ಆಟದ ಸಂದರ್ಭದಲ್ಲಿ 500 ರೂಪಾಯಿಗಾಗಿ ಜಗಳ ಆರಂಭಗೊಂಡಿತ್ತು. ಈ ವಿಚಾರವಾಗಿ ಒಬ್ಬರಿಗೊಬ್ಬರು ಮಾರಾಮಾರಿ ನಡೆಸಿದ್ದಾರೆ. ಆರೋಪಿಗಳು ಇಟ್ಟಿಗೆಯನ್ನು ತೆಗೆದುಕೊಂಡು ಜಮ್​ ಕುಮಾರ್ ಚೌಧರಿ ಮೇಲೆ ಹಲ್ಲೆ ನಡೆಸಿದರು. ದಾಳಿ ಬಳಿಕ ಜಮ್​ ಕುಮಾರ್​ ಚೌಧರಿ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದನು. ಆತ ಮೃತಪಟ್ಟಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಎಸಿಪಿ ತಿಳಿಸಿದ್ದಾರೆ.

ಸ್ಥಳೀಯರು ಕೊಲೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ ಎಂದು ಎಸಿಪಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್​ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನು ಓದಿ : Archana Joyis Photoshoot : ದೀಪಾವಳಿ ಪ್ರಯುಕ್ತ ಹೊಸ ಫೋಟೋಶೂಟ್ – ಬೆಳಕಿನ ನಡುವೆ ಕಂಗೊಳಿಸಿದ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್

ಇದನ್ನೂ ಓದಿ : India Offered Bad Sandwich : ಸಿಡ್ನಿಯಲ್ಲಿ ಭಾರತ ತಂಡಕ್ಕೆ “ಕೆಟ್ಟು ಹೋಗಿದ್ದ ಸ್ಯಾಂಡ್ ವಿಚ್” ನೀಡಿದ ವಿಶ್ವಕಪ್ ಆಯೋಜಕರು, ಐಸಿಸಿಗೆ ದೂರಿತ್ತ ಟೀಮ್ ಇಂಡಿಯಾ

Ludhiana | 5 labourers bludgeon jobless friend for ₹500 on Diwali

RELATED ARTICLES

Most Popular