ಭಾನುವಾರ, ಏಪ್ರಿಲ್ 27, 2025
HomekarnatakaPM Narendra Modi program : ನಾಳೆ ಬೆಂಗಳೂರಿಗೆ ಪ್ರಧಾನಿ : ಇಲ್ಲಿದೆ ನರೇಂದ್ರ ಮೋದಿ...

PM Narendra Modi program : ನಾಳೆ ಬೆಂಗಳೂರಿಗೆ ಪ್ರಧಾನಿ : ಇಲ್ಲಿದೆ ನರೇಂದ್ರ ಮೋದಿ ಕಾರ್ಯಕ್ರಮದ ವಿವರ

- Advertisement -

ಬೆಂಗಳೂರು : PM Narendra Modi program : ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿ ನೀಡಲಿದ್ದು, ಕೆಂಪೇಗೌಡ ಏರ್ಪೋರ್ಟ್ ನಲ್ಲಿ ನಿರ್ಮಾಣವಾದ ಟರ್ಮಿನಲ್ 2 ಹಾಗೂ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇನ್ನು ನಗರಕ್ಕೆ ಭೇಟಿ ನೀಡೋ ಪ್ರಧಾನಿಯವರ ಕಾರ್ಯಕ್ರಮ ಪಟ್ಟಿ ಏನು ಅನ್ನೋ ಮಾಹಿತಿ ಇಲ್ಲಿದೆ. ಬೆಳಗ್ಗೆ 10 ಗಂಟೆಗೆ ಹೆಚ್ ಎಎಲ್ ಏರ್ ಪೋರ್ಟ್ ಗೆ ಪ್ರಧಾನಿ ಆಗಮಿಸಲಿದ್ದಾರೆ.

PM Narendra Modi program : ಪ್ರಧಾನಿ ಮೋದಿ ಕಾರ್ಯಕ್ರಮದ ವಿವರ :

ಹೆಚ್ ಎಎಲ್ ನಿಂದ 10.05 ಕ್ಕೆ ರಸ್ತೆ ಮಾರ್ಗವಾಗಿ ವಿಧಾನಸೌಧಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 10.30 ಕ್ಕೆ ಶಾಸಕರ ಭವನದ ಆವರಣಕ್ಕೆ ತಲುಪಲಿರುವ ಪ್ರಧಾನಿ, 10.32 ರಿಂದ 10.36 ರವರೆಗೆ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ, ನಿರಂಜನಾನಂದಪುರಿ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. 10.36 ರಿಂದ 10.40 ರವರೆಗೆ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ನಡೆಯಲಿದ್ದು, ಪ್ರಸನ್ನಾನಂದಪುರಿ ಸ್ವಾಮೀಜಿ ಉಪಸ್ಥಿತರಿರುತ್ತಾರೆ. ಬಳಿಕ 10.42 ಕ್ಕೆ ಶಾಸಕರ ಭವನದಿಂದ ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 10.50 ಕ್ಕೆ ರೈಲ್ವೇ ನಿಲ್ದಾಣ ತಲುಪಲಿರುವ ಮೋದಿ, 10.52ರಿಂದ 10.59 ರ ವೇಳೆಗೆ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

11.01 ರಿಂದ ಭಾರತ್ ಗೌರವ್ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ ತೋರಲಿರುವ ಮೋದಿ, ಬಳಿಕ ಅಲ್ಲಿಂದರಸ್ತೆ ಮಾರ್ಗವಾಗಿ ಹೆಬ್ಬಾಳ ಎಟಿಸಿ ಕೇಂದ್ರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 11.20 ಕ್ಕೆ ಹೆಬ್ಬಾಳ ಎಟಿಸಿ ಕೇಂದ್ರದಿಂದ ಕೆಂಪೇಗೌಡ ಏರ್ ಪೋರ್ಟ್ ಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದು, 11.4ಕ್ಕೆ ಕೆಂಪೇಗೌಡ ಏರ್ಪೋರ್ಟ್ ಗೆ ಆಗಮಿಸಲಿದ್ದಾರೆ. 11.50 ಕ್ಕೆ ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್-2 ಗೆ ಆಗಮಿಸಿ,ಟರ್ಮಿನಲ್ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಬಳಿಕ ಕೆಂಪೇಗೌಡ ಪ್ರತಿಮೆ ಸ್ಥಳಕ್ಕೆ ಆಗಮಿಸಲಿದ್ದಾರೆ.

ಬಳಿಕ ಪ್ರತಿಮೆ ಸ್ಥಳದಲ್ಲಿ ಪ್ರಧಾನಿಗೆ ಸ್ವಾಗತ ನಡೆಯಲಿದ್ದು, ಬಳಿಕ‌ ಮೋದಿಯವರು ಪ್ರತಿಮೆ ಲೋಕಾರ್ಪಣೆ,ಗಣ್ಯರ ಜೊತೆ ಪ್ರಧಾನಿ ಫೋಟೋ ಸೆಷನ್, ಪ್ರತಿಮೆಗೆ ಪವಿತ್ರ ನೀರು ಮತ್ತು ಪುಷ್ಪಾರ್ಪಣೆ,ಪ್ರತಿಮೆ ಮುಂದೆ ಪ್ರಧಾನಿ ಫೋಟೋ ಸೆಷನ್ ನಡೆಯಲಿದ್ದು 12.40 ಕ್ಕೆ ಪ್ರತಿಮೆ ಸ್ಥಳದಿಂದ ಪ್ರಧಾನಿಯವರು ನಿರ್ಗಮಿಸಲಿದ್ದಾರೆ. ಪ್ರತಿಮೆ ಸ್ಥಳದಲ್ಲಿ ಒಟ್ಟು 20 ನಿಮಿಷಗಳ ಕಾರ್ಯಕ್ರಮವಿದ್ದು, 12.50 ಕ್ಕೆ ಸಾರ್ವಜನಿಕ ಸಮಾವೇಶ ಸ್ಥಳಕ್ಕೆ ಆಗಮಿಸುವ ಮೋದಿ ಬಳಿಕ ವೇದಿಕೆಯಲ್ಲಿ ಕೆಂಪೇಗೌಡ, ಒನಕೆ ಓಬವ್ವ ಮತ್ತು ಕನಕದಾಸ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸ್ಚಾಗತ ಭಾಷಣ, ಪ್ರಧಾನಿಗೆ ಅಭಿನಂದನೆ ಅಮೃತ್ 2.0 ಯೋಜನೆ ಉದ್ಘಾಟನೆ,ಕೆಂಪೇಗೌಡ ಕುರಿತ ವೀಡಿಯೋ ಪ್ರದರ್ಶನ, ಸಿಎಂ ಬೊಮ್ಮಾಯಿ ಭಾಷಣ, ನಿರ್ಮಲಾನಂದ ಸ್ವಾಮೀಜಿ ಭಾಷಣ, ಪ್ರಧಾನಿ ಮೋದಿ ಭಾಷಣವಿರಲಿದೆ

ಇದನ್ನೂ ಓದಿ : Statue of prosperity: ‘World Book of Records’ ಸೇರಿದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ..!

ಇದನ್ನೂ ಓದಿ : Kantara 1 crore ticket sale : ಒಂದು ಕೋಟಿ ಟಿಕೇಟ್ ಸೇಲ್ : ಕರ್ನಾಟಕದಲ್ಲಿ ಕಾಂತಾರ ಹೊಸ ದಾಖಲೆ

PM to Bengaluru tomorrow Here are the details of PM Narendra Modi program

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular