ಉಡುಪಿ : ಮುಂಬೈನಿಂದ ವಾಪಾಸಾಗಿ ಕ್ವಾರಂಟೈನ್ ನಲ್ಲಿದ್ದ 54 ವರ್ಷದ ವ್ಯಕ್ತಿಯೋರ್ವರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಕೊರೊನಾ ಶಂಕೆ ವ್ಯಕ್ತವಾಗಿದೆ.

ವ್ಯಕ್ತಿ ಮುಂಬೈನಿಂದ ಕುಂದಾಪುರ ತಾಲೂಕಿನ ಜಪ್ತಿಯ ವ್ಯಕ್ತಿ ತನ್ನೂರಿಗೆ ಮರಳಿದ್ದರು. ಮೇ 13 ರಂದು ಎದೆನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ವ್ಯಕ್ತಿಯನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಎದೆನೋವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಯಿತು. ಆದರೆ ಚಿಕಿತ್ಸ ಫಲಕಾರಿಯಾಗದೆ ವ್ಯಕ್ತಿ ಮೇ 14ರಂದು ಸಾವನ್ನಪ್ಪಿದ್ದಾರೆ.

ಇದೀಗ ವ್ಯಕ್ತಿಯ ಗಂಟಲಿನ ದ್ರವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಕೊರೊನಾ ಶಂಕೆಯಿಂದಾಗಿ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.