ನವದೆಹಲಿ : Shraddha Walkar Murder Case ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಅಫ್ತಾಬ್ ಜೊತೆ ಲಿವಿನ್ ರಿಲೇಷನ್ ನಲ್ಲಿದ್ದ ಶ್ರದ್ಧಾ ಮದುವೆಯಾಗು ಎಂದಿದ್ದಕ್ಕೆ ಅಫ್ತಾಬ್ ಕೊಲೆ ಮಾಡಿದ್ದ ಎಂದು ಈ ಮೊದಲು ಗೊತ್ತಾಗಿತ್ತು. ಆದ್ರೀಗ ಪೊಲೀಸರ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.
ಮನೆ ಖರ್ಚಿಗೆ ಯಾರು ಹಣ ಕೊಡಬೇಕು ಅನ್ನೋ ಜಗಳವೇ ಮೇ 18 ರಂದು ಶ್ರದ್ಧಾ ಕೊಲೆಗೆ ಕಾರಣವಾಗಿದೆ ಅಂತಾ ಪೊಲೀಸ್ ಮೂಲಗಳು ತಿಳಿಸಿವೆ. ಶ್ರದ್ಧಾ ಮತ್ತು ಅಫ್ತಾಬ್ 2019ರಿಂದಲೂ ಲಿವಿನ್ ರಿಲೇಷನ್ ನಲ್ಲಿ ಜೊತೆಯಾಗಿದ್ರೆ ಮೇ 10 ನೇ ತಾರೀಖು ಮುಂಬೈನಿಂದ ದೆಹಲಿಗೆ ಆಗಮಸಿದ್ರು. ಆದ್ರೆ ಇಬ್ಬರ ಮಧ್ಯೆ ಆಗಾಗಾ ವಾಗ್ವಾದ ಜಗಳ ನಡೆಯುತ್ತಲೇ ಇತ್ತು. ದೆಹಲಿಗೆ ಬಂದ್ಮೇಲೆ ಅಂದ್ರೆ ಮೇ 18 ರಂದು ಸಂಜೆಯೂ ಇಬ್ಬರ ನಡುವೆ ಜಗಳ ಶುರುವಾಗಿತ್ತು. ರಾತ್ರಿ 8 ಗಂಟೆಯಿಂದ 10 ಗಂಟೆಯೊಳಗೆ ಇಬ್ಬರ ನಡುವೆ ಮನೆಯ ಖರ್ಚಿಗೆ ಹಣ ಕೊಡುವ ವಿಚಾರವಾಗಿ ಜಗಳವಾಗಿದೆ. ಮನೆಗೆ ಕೆಲವು ವಸ್ತುಗಳನ್ನ ಖರೀದಿ ಮಾಡೋ ವಿಚಾರವಾಗಿ ಶುರುವಾದ ಜಗಳ ವಿಕೋಪಕ್ಕೆ ಹೋಗಿದೆ. ಗಲಾಟೆ ವೇಳೆ ಅಫ್ತಾಬ್ ಶ್ರದ್ಧಾಳನ್ನ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆಯಾದ ದಿನವೇ ಶ್ರದ್ಧಾ ಅಕೌಂಟ್ ನಿಂದ ಹಣ ಡ್ರಾ : ಇನ್ನು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿರೋ ಮತ್ತೊಂದು ಅಂಶ ಅಂದ್ರೆ ಶ್ರದ್ಧಾ ಕೊಲೆಯಾದ ದಿನವೇ ಆಕೆಯ ಅಕೌಂಟ್ ನಿಂದ ಹಣ ಡ್ರಾ ಮಾಡಲಾಗಿದೆ. ಅಫ್ತಾಬನೇ ಈ ಹಣ ಡ್ರಾ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶ್ರದ್ಧಾ ಪೋಷಕರು ಮತ್ತು ಸ್ನೇಹಿತರು ನೀಡಿದ ಮಾಹಿತಿ ಆಧಾರದ ಮೇಲೆ ಅಫ್ತಾಬ್ ನನ್ನ ವಿಚಾರಣೆ ನಡೆಸಿರೋ ಪೊಲೀಸರು ಇಂಥ ಮತ್ತಷ್ಟು ಸಂಗತಿಗಳನ್ನ ಬಯಲಿಗೆ ಎಳೆದಿದ್ದಾರೆ. ಮುಂಬೈನವಸಾಯಿಯ ಪೊಲೀಸರು ಮೊದಲು ಅಫ್ತಾಬ್‌ನನ್ನು ವಿಚಾರಣೆ ನಡೆಸಿದ್ದಾರೆ. ಬಳಿಕ ಅನುಮಾನ ಹೆಚ್ಚಾಗುತ್ತಿದ್ದಂತೆ ದೆಹಲಿ ಪೊಲೀಸರು ಅಫ್ತಾಬ್ ನನ್ನ ಅರೆಸ್ಟ್ ಮಾಡಿದ್ದಾರೆ. ಶ್ರದ್ಧಾಳ ಫೋನ್ ಅಪ್ಲಿಕೇಶನ್ ಮತ್ತು ಕೆಲವು Instagram ಚಾಟ್‌ಗಳಿಂದ ಬ್ಯಾಂಕ್ ವರ್ಗಾವಣೆಗಳು, ಮೊಬೈಲ್ ಸಿಗ್ನಲ್ ಲೊಕೇಶನ್‌ನೊಂದಿಗೆ ತಾಳೆ ಮಾಡಲಾಗಿದೆ. ಜೊತೆ ಅಫ್ತಾಬ್ ಶ್ರದ್ಧಾಳೆ ತನ್ನನ್ನ ಮೇ 22 ರಂದು ಬಿಟ್ಟು ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದ. ಆದ್ರೆ ಅಫ್ತಾಬನೇ ಶ್ರದ್ಧಾಳ ಮೊಬೈಲ್ ಬಳಸುತ್ತಿದ್ದ..ಜೊತೆಗೆ ಆಕೆಯ ಸ್ನೇಹಿತರ ಜೊತೆಗೆ ಆಕೆಯೇ ಚಾಟ್ ಮಾಡಿದಂತೆ ತಾನೇ ಚಾಟ್ ಮಾಡುತ್ತಿದ್ದ. ಆ ಮೂಲಕ ಶ್ರದ್ಧಾ ಇನ್ನೂ ಬದುಕಿದ್ದಾಳೆ ಎಂದು ತೋರಿಸಿಕೊಳ್ಳುತ್ತಿದ್ದ.
ಇದನ್ನೂ ಓದಿ : Black magic: ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಜ್ಯೋತಿಷಿ ಉದ್ಯಮಿ ಮನೆಗೆ ಬಂದು ಮಾಡಿದ್ದು ಎಂಥಾ ಕೆಲಸ ನೋಡಿ..
ಇದನ್ನೂ ಓದಿ : Masks not mandatory: ವಿಮಾನ ಪ್ರಯಾಣಿಕರಿಗೆ ಇನ್ಮುಂದೆ ಮಾಸ್ಕ್ ಕಡ್ಡಾಯವಿಲ್ಲ ಆದರೆ..
Shraddha Walkar Murder Case A fight to handle household expenses.. Ended in Shraddha’s murder