ಬೆಂಗಳೂರು: (Rape by bus driver) ರಾಜಧಾನಿ ಬೆಂಗಳೂರಿನಲ್ಲಿ ಬಸ್ ಕಾಯುತ್ತಿದ್ದ ಮಹಿಳೆಯನ್ನು ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿತ್ತು. ಆರೋಪಿಯನ್ನು ಬಂಧಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪ್ರಕರಣದ ಕುರಿತು ಹೇಳಿಕೆಯನ್ನು ನೀಡಿದ್ದಾರೆ.
ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಬಸ್ ಕಾಯುತ್ತಿದ್ದ ಮಹಿಳೆಯನ್ನು ಡ್ರಾಪ್ (Rape by bus driver) ಕೊಡುವ ನೆಪದಲ್ಲಿ ಬಸ್ ಹತ್ತಿಸಿಕೊಂಡಿದ್ದಾನೆ. ಮಹಿಳೆ ಬಸ್ ಹತ್ತುತ್ತಿದ್ದಂತೆ ಎಲ್ಲ ವಿಂಡೋ ಗ್ಲಾಸ್ ಕ್ಲೋಸ್ ಮಾಡಿದ್ದು, ಅನುಮಾನಗೊಂಡ ಮಹಿಳೆ, “ಯಾಕಪ್ಪ ಗ್ಲಾಸ್ ಕ್ಲೋಸ್ ಮಾಡುತ್ತೀಯಾ’ ಎಂದು ಕೇಳಿದ್ದಾಳೆ. ಅದಕ್ಕೆ ಟ್ರಾಫಿಕ್ ಪೊಲೀಸ್ರು ಫೈನ್ ಹಾಕುತ್ತಾರೆ, ಮುಂದೆ ಇನ್ನೂ ಸಾಕಷ್ಟು ಜನ ಬಸ್ ಹತ್ತುತ್ತಾರೆ ಎಂದು ಹೇಳಿ ಆಕೆಯನ್ನು ನಂಬಿಸಿದ್ದ. ಲಗ್ಗೆರೆ ಮಾರ್ಗವಾಗಿ ಹೋಗಬೇಕಿದ್ದ ಬಸ್ ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ನಿಂತಿದೆ. ಅಲ್ಲಿಂದ ತಪ್ಪಿಸಿಕೊಂಡು ಬರಲು ಮಹಿಳೆ ಯತ್ನಿಸಿದ್ದಾಳೆ. ಈ ವೇಳೆ ಕಾಮುಕ ಶಿವ ಮಹಿಳೆಗೆ ಕಬ್ಬಿಣದ ರಾಡ್ ಮತ್ತು ಸ್ಪ್ಯಾನ್ನಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆಯನ್ನು ಬಸ್ನಲ್ಲಿ ಕೆಡವಿ ಮಹಿಳೆಯ ಕೈಗಳನ್ನು ಕಾಲಿನಿಂದ ತುಳಿದು ಕ್ರೂರವಾಗಿ ವರ್ತಿಸಿದ್ದಾನೆ.
ಸಂತ್ರಸ್ತ ಮಹಿಳೆಗೆ ಹಲ್ಲೆ ನಡೆಸಿ ಕೈಗಳನ್ನು ವೇಲ್ನಿಂದ ಬಿಗಿಯಾಗಿ ಕಟ್ಟಿ ಅತ್ಯಾಚಾರವೆಸಗಿದ್ದು, ಈ ವೇಳೆ ಸಾಕಷ್ಟು ಹಲ್ಲೆಗೊಳಗಾಗಿದ್ದ ಮಹಿಳೆ ಭಯಭೀತಳಾಗಿದ್ದಾಳೆ. ಕಿರುಚಾಡಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಲೇ ಅತ್ಯಾಚಾರವೆಸಗಿದ್ದಾನೆ. ಘಟನೆ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದು ಸಂತ್ರಸ್ತೆ ಮನೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಬಳಿಕ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : Assault on staff: ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಹಲ್ಲೆ: 7 ಮಂದಿ ಅರೆಸ್ಟ್
ಇದನ್ನೂ ಓದಿ : Assault by students: ಕನ್ನಡ ಬಾವುಟ ಹಿಡಿದು ಕುಣಿದ ವಿದ್ಯಾರ್ಥಿಗೆ ಥಳಿತ : ಕಠಿಣ ಕ್ರಮಕ್ಕೆ ಕನ್ನಡ ಪರ ಸಂಘಟನೆಗಳ ಆಗ್ರಹ
ಈ ಪ್ರಕರಣದ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಹೇಳಿಕೆಯನ್ನು ನೀಡಿದ್ದು,” ಆರೋಪಿ ಶಿವಕುಮಾರ್ ಡ್ರಾಪ್ ಕೊಡುವುದಾಗಿ ಮಹಿಳೆಯನ್ನು ಬಸ್ ಹತ್ತಿಸಿ ಕರೆದುಕೊಂಡು ಬಂದಿದ್ದಾನೆ. ನಂತರ ಆಕೆಯ ಮೇಲೆ ಹಲ್ಲೆ ನಡೆಸಿ,ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ಎಸಗಿದ ಬಳಿಕ ಸಂತ್ರಸ್ತೆಯನ್ನು ಬಸ್ ನಿಂದ ಕೆಳಗಿಳಿಸಿ ಪರಾರಿಯಾಗಿದ್ದಾನೆ. ಆತ ಪರಾರಿಯಾಗುವ ವೇಳೆ ಮಹಿಳೆ ಬಸ್ ನ ಫೋಟೋ ತೆಗೆದುಕೊಂಡಿದ್ದಾಳೆ. ಹೀಗಾಗಿ ಆರೋಪಿಯನ್ನು ಬಂಧಿಸುವುದು ನಮಗೆ ಸುಲಭವಾಯ್ತು. ಆರೋಪಿ ಶಿವಕುಮಾರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದಿದ್ದಾರೆ.
(Rape by bus driver) There was an incident where a woman was raped on the pretext of giving a drop to a woman who was waiting for a bus in the capital Bangalore. Additional Commissioner of Police Sandeep, who arrested the accused, has given a statement about the case.