ಬುಧವಾರ, ಏಪ್ರಿಲ್ 30, 2025
HomekarnatakaMBBS students: ರಾಜೀವ್‌ ಗಾಂಧಿ ವಿವಿ ಕುಲಸಚಿವರ ನಿರ್ಲಕ್ಷ್ಯ: ಹೈಕೋರ್ಟ್‌ ಮೆಟ್ಟಿಲೇರಿದ MBBS ವಿದ್ಯಾರ್ಥಿಗಳು

MBBS students: ರಾಜೀವ್‌ ಗಾಂಧಿ ವಿವಿ ಕುಲಸಚಿವರ ನಿರ್ಲಕ್ಷ್ಯ: ಹೈಕೋರ್ಟ್‌ ಮೆಟ್ಟಿಲೇರಿದ MBBS ವಿದ್ಯಾರ್ಥಿಗಳು

- Advertisement -

ಬೆಂಗಳೂರು: (MBBS students) ರಾಜೀವ್‌ ಗಾಂಧಿ ವಿವಿ ಕಾಲೇಜು ಕುಲಪತಿಗಳ ನಿರ್ಲಕ್ಷ್ಯದಿಂದಾಗಿ, ಎಮ್‌ಬಿಬಿಎಸ್‌ ವಿದ್ಯಾರ್ಥಿಗಳಿಗೆ ಭಾರೀ ಅನ್ಯಾಯ ನಡೆಯುತ್ತಿದೆ. ತಮಗೆ ಆಗುತ್ತಿರುವ ಅನ್ಯಾಯದ ವಿರುದ್ದ ವಿದ್ಯಾರ್ಥಿಗಳು ಗೆ ಕೋರ್ಟ್‌ ಮೊರೆ ಹೋಗಿದ್ದಾರೆ.

ರಾಜೀವ್‌ ಗಾಂಧಿ ವಿವಿ ಕಾಲೇಜಿನ ಎಮ್‌ಬಿಬಿಎಸ್‌ ವಿದ್ಯಾರ್ಥಿಗಳು (MBBS students) ಒಂದೆರಡು ಅಂಕಗಳಲ್ಲಿ ಫೇಲ್‌ ಅಗುತ್ತಿದ್ದು, ವಿದ್ಯಾರ್ಥಿಗಳನ್ನು ಪಾಸ್‌ ಮಾಡಲು ಬ್ರೋಕರ್‌ ಮೂಲಕ ಲಕ್ಷ ಲಕ್ಷ ಹಣ ಬೇಡಿಕೆ ಆರೋಪ ಕೇಳಿಬರುತ್ತಿದೆ. ವಿದ್ಯಾರ್ಥಿಗಳನ್ನು ಪಾಸ್‌ ಮಾಡಲು ಹಣ ಕೇಳಿದ್ದಕ್ಕೆ ವಿದ್ಯಾರ್ಥಗಳು ಮತ್ತು ಅವರ ಪೋ಼ಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಭಾವಂತ ಮೆಡಿಕಲ್‌ ವಿದ್ಯಾರ್ಥಿಗಳಿಗೆ ವಿವಿ ಕುಲಪತಿಗಳ ನಿರ್ಲಕ್ಷ್ಯದಿಂದ ಭಾರೀ ಅನ್ಯಾಯವಾಗುತ್ತಿದೆ ಎಂದು ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಗೆ ಅನ್ಯಾಯವಾಗುತ್ತಿರುವ ಕುರಿತು 144 ಎಮ್‌ಬಿಬಿಎಸ್‌ ವಿದ್ಯಾರ್ಥಿಗಳು ಹೈ ಕೋರ್ಟ್‌ ಮೊರೆ ಹೋಗಿದ್ದು, ಹೆಚ್ಚು ಅಂಕ ನೀಡಿದ್ದನ್ನು ಪರಿಗಣಿಸುವಂತೆ ಹೈ ಕೋರ್ಟ್‌ ಕುಲಪತಿಗಳಿಗೆ ಸೂಚನೆ ನೀಡಿತ್ತು. ಹೈ ಕೋರ್ಟ್‌ ಸೂಚನೆ ನೀಡಿದ್ದರೂ ಕೂಡ ಕೋರ್ಟ್‌ ನ ಸೂಚನೆ ಪಾಲಿಸದೇ ಹೆಚ್ಚುವರಿ ಅಂಕಗಳನ್ನು ಪರಿಗಣಿಸಲು ವಿವಿ ಕುಲಸಚಿವರು ಮೀನಾಮೇಷವೆಣಿಸುತ್ತಿದ್ದಾರೆ.

ಇದನ್ನೂ ಓದಿ : Rape by bus driver: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಬಸ್ ಚಾಲಕನಿಂದ ಅತ್ಯಾಚಾರ

ಇದನ್ನೂ ಓದಿ : Assault on staff: ರೆಸ್ಟೋರೆಂಟ್‌ ಸಿಬ್ಬಂದಿ ಮೇಲೆ ಹಲ್ಲೆ: 7 ಮಂದಿ ಅರೆಸ್ಟ್

ಇದನ್ನೂ ಓದಿ : Karnataka Weather report: ಕರಾವಳಿಯಲ್ಲಿ ಇಂದು ಗುಡುಗು ಸಹಿತ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಇದನ್ನೂ ಓದಿ : PFI Ban Petition Dismissed: ಪಿಎಫ್‌ಐ ಬ್ಯಾನ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ: ಏಕಸದಸ್ಯ ಪೀಠದಿಂದ ಮಹತ್ವದ ತೀರ್ಪು

ರಾಜೀವ್‌ ಗಾಂಧಿ ವಿವಿ ಕುಲಪತಿಗಳ ಈ ರೀತಿಯ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

(MBBS students) Due to the negligence of the Chancellor of Rajiv Gandhi University, huge injustice is happening to the MBBS students. The students have approached the court against the injustice being done to them.

RELATED ARTICLES

Most Popular